ಉಗ್ರರಿಗೆ ಸೇರಿದ ಬರೋಬ್ಬರಿ 36 ಕೋಟಿ ರೂ. ಹಳೆ ನೋಟು ಜಪ್ತಿ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಕಾಶ್ಮೀರ, ನವೆಂಬರ್ 7: ರಾಷ್ಟ್ರೀಯ ತನಿಖಾ ದಳ (ಎನ್ಐಎ) ಉಗ್ರರಿಗೆ ಸೇರಿದ 36 ಕೋಟಿ ರೂಪಾಯಿ ಮೊತ್ತದ ಹಳೆ ನೋಟುಗಳನ್ನು ಜಪ್ತಿ ಮಾಡಿದೆ. ಉಗ್ರರಿಗೆ ಆರ್ಥಿಕ ನೆರವು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ವಿವಿಧ ಕ್ವಾರ್ಟರ್ಸ್ ಗಳಿಂದ ಈ ಹಣವನ್ನು ಜಪ್ತಿ ಮಾಡಿದೆ.

ಇಲ್ಲಿಯವರೆಗೆ ರೂ. 36,34,78,500 ಹಣವನ್ನು ಜಪ್ತಿ ಮಾಡಲಾಗಿದೆ. ಜತೆಗೆ 9 ಜನರನ್ನು ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಹಣ ಕಣಿವೆ ರಾಜ್ಯಕ್ಕೆ ಹರಿದು ಬಂದಿತ್ತು ಎಂದು ಎನ್ಐಎ ಹೇಳಿದೆ.

Breaking their backs: NIA seized Rs 36 crore demonetised currency in Kashmir

ಹವಾಲ ಸೇರಿದಂತೆ ಹಲವು ವಿಧಗಳ ಮೂಲಕ ಈ ಹಣವನ್ನು ಕಣಿವೆಗೆ ವರ್ಗಾವಣೆ ಮಾಡಲಾಗಿದೆ. ಜತೆಗೆ ಕಾನೂನು ಬಾಹಿರ ಗಡಿಯಾಚೆಗಿನ ವ್ಯಾಪಾರ, ದೇಣಿಗೆ, ಎಟಿಎಂ ದರೋಡೆ ಮೊದಲಾದ ಕಳ್ಳ ದಾರಿಯ ಮೂಲಕ ಉಗ್ರರು ಇಷ್ಟು ದೊಡ್ಡ ಮೊತ್ತದ ಹಣ ಸಂಗ್ರಹಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigation Agency has seized a whopping Rs 36 crore in demonetised currency while probing the Kashmir terror funding case. The money was seized from various quarters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ