Breaking: ಜ್ಞಾನವಾಪಿ ಪ್ರಕರಣ: ವೈಜ್ಞಾನಿಕ ತನಿಖೆಗೆ ವಿರೋಧ- ಅ.14 ಕ್ಕೆ ವಿಚಾರಣೆ ಮುಂದೂಡಿಕೆ

ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಮಂಗಳವಾರ (ಅಕ್ಟೋಬರ್ 11) ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಿದೆ. ಜ್ಞಾನವಾಪಿ ಮಸೀದಿಯ ವಝುಖಾನಾ ಒಳಗೆ ಇರುವ ರಚನೆ ಶಿವಲಿಂಗದ್ದು ಎಂಬ ತನಿಖೆಯ ತೀರ್ಪಿಗೆ ಒತ್ತಾಯಿಸಿ ಹಿಂದೂ ಮುಖಂಡರು ಸಲ್ಲಿಸಿದ ಮನವಿಯ ಕುರಿತು ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಬೇಕಿತ್ತು. ಆದರೆ ವಾರಣಾಸಿ ನ್ಯಾಯಾಲಯವು ಇಂದು 'ಶಿವ ಲಿಂಗ' ಕುರಿತು ವೈಜ್ಞಾನಿಕ ತನಿಖೆಯನ್ನು ಕೋರಿ ಹಿಂದೂ ಆರಾಧಕರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಅಕ್ಟೋಬರ್ 14 ಕ್ಕೆ ಮುಂದೂಡಿದೆ.

ಜ್ಞಾನವಾಪಿ ಮಸೀದಿಗೆ ಹೊಂದಿಕೊಂಡಿರುವ ಗೌರಿ ಪೂಜೆಗೆ ಅವಕಾಶಕ್ಕಾಗಿ ಒತ್ತಾಯಿಸಿ ನಾಲ್ವರು ಮಹಿಳಾ ಅರ್ಜಿದಾರರು ಸಲ್ಲಿಸಿರುವ ವಿಚಾರಣೆಯ ಭಾಗವಾಗಿ ಸಮಿತಿಯ ತಂಡ ರಚನೆಯಾಗಿತ್ತು. ಸಮಿತಿ ಮಸೀದಿಯ ಸಮೀಕ್ಷೆ ವೇಳೆ ರಚನೆಯೊಂದು ಪತ್ತೆ ಮಾಡಿದ್ದು, ಅದು ಶಿವಲಿಂಗ ಎಂದು ಹಿಂದೂಗಳು ವಾದಿಸಿದ್ದಾರೆ. ಮಸೀದಿಯಲ್ಲಿ ಸಿಕ್ಕಿ ರಚನೆ ಶಿವಲಿಂಗದ್ದೇ ಎನ್ನುವ ಬಗ್ಗೆ ತನಿಖೆಯ ತೀರ್ಪು ಇಂದು ಹೊರ ಬೀಳಬೇಕಾಗಿತ್ತು. ನ್ಯಾಯಲಯ ಶಿವಲಿಂಗದ ಸ್ವರೂಪ ಮತ್ತು ವಯಸ್ಸನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ಮಾಡಲು ಆದೇಶಿಸಲು ಮಸೀದಿ ಕಮಿಟಿ ವಿರೋಧ ವ್ಯಕ್ತಪಡಿಸಿದೆ.

'ಶಿವಲಿಂಗ'ದ ಕಾರ್ಬನ್ ಡೇಟಿಂಗ್‌ಗಾಗಿ ಹಿಂದೂವಾದಿಗಳ ಮನವಿಯ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ.

Breaking: Gnanavapi case: Hearing adjourned to oct 14

ಸೆಪ್ಟೆಂಬರ್ 22 ರಂದು, ಹಿಂದೂ ಕಡೆಯವರು ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗಳನ್ನು ಒತ್ತಾಯಿಸಿದರು. ಇದನ್ನು ಮುಸ್ಲಿಂ ಕಡೆಯ ಅಂಜುಮನ್ ಇನಾಝಾನಿಯಾ ಮಸಾಜಿದ್ ಕಮಿಟಿ ಮಾತ್ರವಲ್ಲದೆ, ಹಿಂದೂ ಕಡೆಯ ಫಿರ್ಯಾದಿ ನಂಬರ್ ಒನ್ ರಾಖಿ ಸಿಂಗ್ ಕೂಡ ವಿರೋಧಿಸಿದ್ದಾರೆ.

ಕಾರ್ಬನ್ ಡೇಟಿಂಗ್ ರಚನೆಗೆ ಹಾನಿಯಾಗುತ್ತದೆ ಎಂದು ವಕೀಲರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸೆ.29ರಂದು ಎರಡೂ ಕಡೆಯ ವಾದ ಆಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಮಹತ್ವದ ವಿಚಾರಣೆಗೂ ಮುನ್ನ ನ್ಯಾಯಾಲಯದ ಆವರಣದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ ಇಂದೂ ಕೂಡ ನ್ಯಾಯಾಲಯ ಅ.14 ಕ್ಕೆ ವಿಚಾರಣೆ ಮುಂದೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+