ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉತ್ತರಾಖಂಡದ ದ್ರೌಪದಿ ಶಿಖರದಲ್ಲಿ ಹಿಮಕುಸಿತ- 20ಕ್ಕೂ ಹೆಚ್ಚು ಮಂದಿ ನಾಪತ್ತೆ

|
Google Oneindia Kannada News

ಉತ್ತರಾಖಂಡದಲ್ಲಿ ಹಿಮಕುಸಿತದಿಂದಾಗಿ ದ್ರೌಪದಿ ಶಿಖರಕ್ಕೆ ಹೋಗುವ ದಾರಿಯಲ್ಲಿ 20 ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು ಮಧ್ಯಾಹ್ನ ಹೇಳಿದ್ದಾರೆ. ಹಿಮಕುಸಿತದಿಂದಾಗಿ ಸಿಲುಕಿದವರೆಲ್ಲರೂ ಉತ್ತರಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ 40 ಜನರ ಟ್ರೆಕ್ಕಿಂಗ್ ಗುಂಪಿನ ಭಾಗವಾಗಿದ್ದಾರೆ. ಇದರಲ್ಲಿ 33 ತರಬೇತಿದಾರರು ಮತ್ತು ಏಳು ಬೋಧಕರು ಸೇರಿದ್ದರು. ಇವರಲ್ಲಿ 20 ಕ್ಕೂ ಹೆಚ್ಚು ಜನರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ನಾಪತ್ತೆಯಾದ ತಂಡವನ್ನು ಪತ್ತೆಹಚ್ಚಲು ಮತ್ತು ಅವರನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದೆ. ಇಲ್ಲಿಯವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಮೂವರು ಪ್ರಶಿಕ್ಷಣಾರ್ಥಿಗಳು ಮತ್ತು ಏಳು ಬೋಧಕರು ಇದ್ದಾರೆ.

BREAKING: Avalanche on Uttarakhands Draupadi Peak- More than 20 missing

ದ್ರೌಪದಿಯ 2 ಪರ್ವತ ಶಿಖರದಲ್ಲಿ ಹಿಮಪಾತದಲ್ಲಿ ಸಿಲುಕಿರುವ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲು ಎನ್‌ಐಎಂ ತಂಡದೊಂದಿಗೆ ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ ಮತ್ತು ಐಟಿಬಿಪಿ ಸಿಬ್ಬಂದಿ ಕ್ಷಿಪ್ರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.

BREAKING: Avalanche on Uttarakhands Draupadi Peak- More than 20 missing

"ದ್ರೌಪದಿಯ ದಂಡ-2 ಪರ್ವತ ಶಿಖರದಲ್ಲಿ ಹಿಮಕುಸಿತದಿಂದಾಗಿ, ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರಶಿಕ್ಷಣಾರ್ಥಿಗಳು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ'' ಎಂದು ಧಮಿ ಟ್ವೀಟ್ ಮಾಡಿದ್ದಾರೆ. ಹಿಮಪಾತದಲ್ಲಿ ಸಿಲುಕಿಕೊಂಡ ಈ ಗುಂಪು ಸೆಪ್ಟೆಂಬರ್ 23 ರಂದು ಉತ್ತರಕಾಶಿಯಿಂದ ಆರೋಹಣಕ್ಕೆ ಹೊರಟಿತು.

English summary
Chief Minister Pushkar Singh Dhami said this afternoon that more than 20 people were trapped on their way to Draupadi peak due to an avalanche in Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X