2ವರ್ಷದ ಹಿಂದೆ ಮೋದಿ, ಎಚ್ಡಿಕೆ ಬಗ್ಗೆ ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದೇನು, ಆಗಿದ್ದೇನು?

ಹಾಸನಾಂಬ ದೇವಾಲಯದ ಗರ್ಭಗುಡಿ ತೆರೆದ ಒಂದು ದಿನದ ನಂತರ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಶರ್ಮಾ, ರಾಜ್ಯ, ರಾಷ್ಟ್ರ ರಾಜಕಾರಣ ಮತ್ತು ಪ್ರಧಾನಿ, ಕುಮಾರಸ್ವಾಮಿ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ತಮ್ಮ ವಿಶಿಷ್ಟ ಬಾಡಿ ಲಾಂಗ್ವೇಜ್ ಮತ್ತು ಮಾತಿನ ಶೈಲಿಯ ಮೂಲಕ ಮನೆಮಾತಾಗಿರುವ ಬ್ರಹ್ಮಾಂಡ ಗುರೂಜಿ, ಪ್ರಧಾನಿ ಮೋದಿ ಬಗ್ಗೆ ನುಡಿದ ಭವಿಷ್ಯ ಸದ್ಯ ಚರ್ಚೆಯ ವಿಷಯವಾಗಿದೆ.

ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ, ಡಿ.ಕೆ.ಶಿವಕುಮಾರ್ ಕುರಿತಾಗಿಯೂ ಬ್ರಹ್ಮಾಂಡ ನರೇಂದ್ರ ಶರ್ಮಾ ಭವಿಷ್ಯ ನುಡಿದಿದ್ದಾರೆ. "ಯಾವುದೇ ಸಮ್ಮಿಶ್ರ ಸರಕಾರ ಇನ್ನು ಮುಂದೆ ಅಧಿಕಾರಕ್ಕೆ ಬರುವುದಿಲ್ಲ" ಎನ್ನುವ ಮಾತನ್ನು ಹೇಳಿದ್ದಾರೆ.

"ಮುಂಬರುವ ದಿನಗಳಲ್ಲಿ ನರೇಂದ್ರ ಮೋದಿಯ ಜೀವಕ್ಕೆ ಅಪಾಯವಿದೆ" ಎನ್ನುವ ಭವಿಷ್ಯವನ್ನು ಗುರೂಜಿ ನುಡಿದಿದ್ದಾರೆ. ಎರಡು ವರ್ಷಗಳ ಹಿಂದೆ, ನರೇಂದ್ರ ಶರ್ಮಾ ಭವಿಷ್ಯ ನುಡಿದಿದ್ದರು. ಅಂದು ಅವರು ಹೇಳಿದ್ದೇನು, ಆಗಿದ್ದೇನು?

ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ

ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ

"ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ಪ್ರಧಾನಿಯ ಈ ಗಂಡಾಂತರಕ್ಕೆ ವೃಶ್ಚಿಕ ರಾಶಿ ದೋಷವೇ ಕಾರಣ, ದೇವರ ಮೊರೆ ಹೋಗಿ ಪೂಜೆ, ಹೋಮ ಮಾಡಿ ಪರಿಹಾರ ಕಂಡುಕೊಳ್ಳದೇ ಹೋದರೆ ಮೃತ್ಯು ಕೂಡ ಎದುರಾಗಬಹುದು" ಎಂದು ಶುಕ್ರವಾರ (ಅ 18) ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹೇಳಿದ್ದರು.

ಮೋದಿಗೆ ಗಂಡಾಂತರ ಕಾದಿದೆ

ಮೋದಿಗೆ ಗಂಡಾಂತರ ಕಾದಿದೆ

ಎರಡು ವರ್ಷದ ಹಿಂದೆ, ಹಾಸನಾಂಬ ದೇವಾಲಯದಲ್ಲೇ ಬ್ರಹ್ಮಾಂಡ ಗುರೂಜಿ ಭವಿಷ್ಯವನ್ನು ನುಡಿದಿದ್ದರು. "ಮೋದಿಗೆ ಗಂಡಾಂತರ ಕಾದಿದೆ" ಎಂದು ಗುರೂಜಿ ನುಡಿದಿದ್ದರು. "ವೃಶ್ಚಿಕ ರಾಶಿ ದೋಷವೇ ಇದಕ್ಕೆ ಕಾರಣ" ಎಂದು, ಅಂದೂ ಗುರೂಜಿ ನುಡಿದಿದ್ದರು.

ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ಆಗುವ ಯೋಗ

ಎಚ್.ಡಿ.ಕುಮಾರಸ್ವಾಮಿಗೆ ಸಿಎಂ ಆಗುವ ಯೋಗ

ಎರಡು ವರ್ಷಗಳ ಹಿಂದೆ, "ಮುಂಬರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ" ಎನ್ನುವ ಭವಿಷ್ಯವನ್ನು ಗುರೂಜಿ ನುಡಿದಿದ್ದರು. ಬಿಜೆಪಿಗೆ ಬಹುಮತ ಸಿಗದೇ ಇದ್ದಾಗ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿತ್ತು. ಎಚ್ಡಿಕೆ ಸಿಎಂ ಆಗಿದ್ದರು.

ಉತ್ತರ ಕರ್ನಾಟಕ ಭಾಗದ ಜನತೆ ಜೆಡಿಎಸ್ ಮೇಲೆ ವಿಶೇಷ ಪ್ರೇಮ

ಉತ್ತರ ಕರ್ನಾಟಕ ಭಾಗದ ಜನತೆ ಜೆಡಿಎಸ್ ಮೇಲೆ ವಿಶೇಷ ಪ್ರೇಮ

ಇನ್ನು, "ಉತ್ತರ ಕರ್ನಾಟಕ ಭಾಗದ ಜನತೆ ಜೆಡಿಎಸ್ ಮೇಲೆ ವಿಶೇಷ ಪ್ರೇಮ ತೋರಿಸಲಿದ್ದಾರೆ. ಕುಮಾರಸ್ವಾಮಿಯವರು ತಂದೆಯ ಮಾತನ್ನು ಕೇಳಬೇಕು. ಅವರು ತಮ್ಮ ಆರೋಗ್ಯದ ಬಗ್ಗೆ ಗಮನಕೊಡಲಿ" ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದರು. ಆದರೆ, ಉತ್ತರ ಕರ್ನಾಟಕದ ಭಾಗದಿಂದ ವಿಶೇಷ ಪ್ರೇಮ, ಜೆಡಿಎಸ್ಸಿಗೆ ಕಳೆದ ಚುನಾವಣೆಯಲ್ಲಿ ಒಲಿದಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ

ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ

"ನವೆಂಬರ್​ 4ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಇದೆ. ಅವರ ಜಾತಕದಲ್ಲಿ ಅಪಮೃತ್ಯು ಗಂಡಾಂತರ ಕಾದಿದೆ. ಇದರಿಂದ ಪಾರಾಗಲು ವಿಶೇಷ ಪೂಜೆ, ಹೋಮ ಮಾಡಬೇಕಾಗುತ್ತದೆ. ಗಂಡಾಂತರದಿಂದ ಪಾರಾದರೆ ಇನ್ನೂ ಎರಡೂ ಮುಕ್ಕಾಲು ವರ್ಷ ಪ್ರಧಾನಿಯಾಗಿ ಇರುತ್ತಾರೆ" ಎಂದು ಬ್ರಹ್ಮಾಂಡ ಗುರೂಜಿ, ಒಂದು ದಿನದ ಹಿಂದೆ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+