ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಂದಿಗಿನ ಗಡಿ ವಿಚಾರದಲ್ಲಿ ಮೂಗು ತೂರಿಸಬೇಡಿ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಭಾರತವು ತನ್ನ ಸಾರ್ವಭೌಮತೆಗೆ ಎದುರಾಗುವ ಬೆದರಿಕೆಗಳನ್ನು ಎದುರಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಮತ್ತು ಬೀಜಿಂಗ್‌ನಿಂದ ಎದುರಾಗುತ್ತಿರುವ ಸತತ ಬೆದರಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ವಿರುದ್ಧ ಚೀನಾ ಕಿಡಿಕಾರಿದೆ. ಗಡಿ ಪ್ರಶ್ನೆಯು ದ್ವಿಪಕ್ಷೀಯ ವಿಚಾರವಾಗಿದ್ದು, ಅಮೆರಿಕವು ವಾಸ್ತವಾಂಶ ಹಾಗೂ ಸತ್ಯವನ್ನು ಗೌರವಿಸಬೇಕು ಎಂದು ಚೀನಾ ಸೂಚಿಸಿದೆ.

ದ್ವಿಪಕ್ಷೀಯ ಸಂಬಂಧಗಳ ನಡುವೆ ಕಾನೂನಾತ್ಮಕ ಹಕ್ಕುಗಳ ಉಲ್ಲಂಘನೆ ಹಾಗೂ ಮೂರನೇ ವ್ಯಕ್ತಿಯ ಹಿತಾಸಕ್ತಿಗಳಿಗೆ ಅವಕಾಶ ಇರುವುದಿಲ್ಲ ಎಂದೂ ಚೀನಾ ರಾಯಭಾರ ಕಚೇರಿ ಹೇಳಿಕೆ ನೀಡಿದೆ.

ಹುಳಿ ಹಿಂಡೋದನ್ನು ನಿಲ್ಲಿಸಿ; ಅಮೆರಿಕಕ್ಕೆ ಚೀನಾ ತಾಕೀತುಹುಳಿ ಹಿಂಡೋದನ್ನು ನಿಲ್ಲಿಸಿ; ಅಮೆರಿಕಕ್ಕೆ ಚೀನಾ ತಾಕೀತು

'ಗಡಿ ಪ್ರಶ್ನೆಯು ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರ. ಗಡಿ ಪ್ರದೇಶಗಳಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಹಾಗೂ ಸ್ಥಳಾಂತರಿಸುವ ಬಗ್ಗೆ ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಎರಡೂ ದೇಶಗಳು ಚರ್ಚೆಗಳನ್ನು ನಡೆಸುತ್ತಿದೆ. ತಮ್ಮ ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಚೀನಾ ಮತ್ತು ಭಾರತಕ್ಕೆ ಇದೆ. ಇಲ್ಲಿ ಮೂರನೇ ದೇಶ ಮಧ್ಯಪ್ರವೇಶ ಮಾಡಲು ಅವಕಾಶವಿಲ್ಲ' ಎಂದು ಚೀನಾ ತೀಕ್ಷ್ಣವಾಗಿ ಹೇಳಿದೆ.

 Boundary Question With India Is Bilateral Matter, No Space For Third Party To Intervene: China

'ಚೀನಾ ಬೆದರಿಕೆ' ಎಂದು ಬಿಂಬಿಸುವುದನ್ನು ಮತ್ತು ಶೀತಲ ಸಮತರದ ಮನಸ್ಥಿತಿಯನ್ನು ಬಿಟ್ಟುಬಿಡುವಂತೆ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಡೆಗಣಿಸುವ ತಪ್ಪು ಕಾರ್ಯಗಳನ್ನು ನಿಲ್ಲಿಸುವಂತೆ ಚೀನಾ ಆಗ್ರಹಿಸಿದೆ.

ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ

ಅಮೆರಿಕವು ತನ್ನ ಪ್ರಾಬಲ್ಯವನ್ನು ಮುಂದುವರಿಸುವ ಉದ್ದೇಶದಿಂದ ಭೌಗೋಳಿಕ ರಾಜಕೀಯದ ಕಿಡಿ ಹಚ್ಚಿಸಲು ಪ್ರಯತ್ನಿಸುತ್ತಿದೆ. ಅಮೆರಿಕ ಪ್ರಸ್ತಾಪಿಸಿರುವ ಇಂಡೋ-ಪೆಸಿಫಿಕ್ ಕಾರ್ಯತಂತ್ರವು ವಿಭಿನ್ನ ಗುಂಪುಗಳು ಮತ್ತು ಘಟಕಗಳ ಮಧ್ಯೆ ಹಗೆ ಹುಟ್ಟಿಸುವ ಪ್ರಯತ್ನವಾಗಿದೆ ಎಂದು ಚೀನಾ ಆರೋಪಿಸಿದೆ.

English summary
China hits back at US Secratery of State Mike Pompeo, Boundary question is a bilateral matter between India and China, there is no space for third party to intervene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X