ರಾಹುಲ್ ಗಾಂಧಿ ಟ್ವಿಟ್ಟರ್ ಅಕೌಂಟ್ ಜನಪ್ರಿಯತೆಯ ಸುತ್ತ ಅನುಮಾನದ ಹುತ್ತ?

Posted By:
Subscribe to Oneindia Kannada

ಕಳೆದ ಒಂದು ತಿಂಗಳಿನಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ತಾಲತಾಣಗಳಲ್ಲಿ ಭಾರೀ ಜನಪ್ರಿಯಗೊಳ್ಳುತ್ತಿರುವುದಕ್ಕೆ, ರಮ್ಯಾ ಕಾಲ್ಗುಣ, ಬದಲಾದ ರಾಹುಲ್ ರಾಜಕೀಯ ವರ್ಚಸ್ಸು ಎಂದೆಲ್ಲಾ ಸುದ್ದಿಯಾಗಿತ್ತು.

ಆದರೆ, ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಪ್ರಕಟಿಸಿರುವ ಲೇಖನದಲ್ಲಿ ಬೇರೆನೇ ವಿಷಯವಿದೆ. ರಾಹುಲ್ ಗಾಂಧಿಯವರ ಟ್ವಿಟ್ಟರ್ ಅಕೌಂಟ್ ಮತ್ತು ಟ್ವೀಟುಗಳು ಅತಿಹೆಚ್ಚು ರಿಟ್ವೀಟ್ ಆಗುತ್ತಿರುವುದಕ್ಕೆ ಕಾರಣ, ಹೊರದೇಶದ ಟ್ವಿಟ್ಟರ್ ಅಕೌಂಟುಗಳಿಂದ.

ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಮಿಂಚು, ರಮ್ಯಾ ಕಾಲ್ಗುಣ ಕಾರಣವೇ

ರಷ್ಯಾ, ಕಜಕಿಸ್ತಾನ್ ಮತ್ತು ಇಂಡೋನೇಷ್ಯಾದ ಅಕೌಂಟುಗಳಿಂದ, ರಾಹುಲ್ ಗಾಂಧಿಯವರ ಟ್ವೀಟುಗಳು ಭಾರೀ ಸಂಖ್ಯೆಗಳಲ್ಲಿ ರಿಟ್ವೀಟ್ ಆಗುತ್ತಿದ್ದು, 'ಟ್ವಿಟ್ಟರ್ ಬಾಟ್' ಮೂಲಕ ರಾಹುಲ್ ಗಾಂಧಿಯವರ ಅಕೌಂಟ್ ಜನಪ್ರಿಯಗೊಳ್ಳುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ ಎಂದು ಸುದ್ದಿಸಂಸ್ಥೆ ತನ್ನ ಲೇಖನದಲ್ಲಿ ಹೇಳಿದೆ. ಟ್ವಿಟ್ಟರ್ ಬಾಟ್ ಅಂದರೆ ಏನು, ಇಲ್ಲಿ ಕ್ಲಿಕ್ಕಿಸಿ

ಕಳೆದ ಅಕ್ಟೋಬರ್ ಹದಿನೈದರಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಒಂದನ್ನು ಉಲ್ಲೇಖಿಸುತ್ತಾ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಕಾಲೆಳೆಯುವ ಟ್ವೀಟ್ ಮಾಡಿದ್ದರು. ಅದು ಮೂವತ್ತು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದ್ದು, ಅದರಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಗಳು ಆ ಮೂರು ದೇಶದ ಅಕೌಂಟಿನಿಂದ ಎಂದು ANI ಹೇಳಿದೆ.

ಈ ಬಗ್ಗೆ ಸವಿವರವಾಗಿ ತನ್ನ ಲೇಖನದಲ್ಲಿ ಪ್ರಸ್ತಾವಿಸಿರುವ ANI, ರಾಹುಲ್ ಅವರ ಅಧಿಕೃತ ಟ್ವಿಟ್ಟರ್ ಅಕೌಂಟ್ @OfficeOfRG ನಲ್ಲಿನ ಇತ್ತೀಚಿನ ಚಟುವಟಿಕೆಗಳನ್ನು ಉಲ್ಲೇಖಿಸುತ್ತಾ, ರಷ್ಯಾ, ಕಜಕಿಸ್ತಾನ್ ಮತ್ತು ಇಂಡೋನೇಷ್ಯಾದ ಅಕೌಂಟುಗಳಿಂದ ರಾಹುಲ್ ಟ್ವೀಟ್ ಗಳು ಲೈಕ್ ಮತ್ತು ರಿಟ್ವೀಟ್ ಆಗುತ್ತಿದೆ.

ಈ ಬಗ್ಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಏನು ಹೇಳುತ್ತಾರೆ ಮತ್ತು ಟ್ವಿಟ್ಟರ್ ನಲ್ಲಿ ನಗೇಪಟಾಲಿಗೆ ಗುರಿಯಾದ ರಾಹುಲ್, ಮುಂದೆ ಓದಿ

ಭಾರೀ ಡೇಟಾಬೇಸ್ ಹೊಂದಿರುವ ಕೇಂಬ್ರಿಡ್ಜ್ ಅನಾಲಟಿಕಾ ಸಂಸ್ಥೆ

ಭಾರೀ ಡೇಟಾಬೇಸ್ ಹೊಂದಿರುವ ಕೇಂಬ್ರಿಡ್ಜ್ ಅನಾಲಟಿಕಾ ಸಂಸ್ಥೆ

ಈ ರೀತಿ ರಿಟ್ವೀಟ್ ಮಾಡುತ್ತಿರುವ ಟ್ವೀಟ್ ಅಕೌಂಟ್ ಗಳಿಗೆ ಹತ್ತಕ್ಕಿಂತಲೂ ಕಮ್ಮಿ ಹಿಂಬಾಲಕರಿದ್ದಾರೆನ್ನುವುದು ಒಂದೆಡೆಯಾದರೆ, ಇವೆಲ್ಲವೂ ಯಾವುದೇ ವೈಯಕ್ತಿಕ ಚಿಂತನೆ/ಅಭಿಪ್ರಾಯಗಳಿಲ್ಲದ ಅಕೌಂಟುಗಳಾಗಿವೆ. ಜೊತೆಗೆ, ಭಾರೀ ಡೇಟಾಬೇಸ್ ಹೊಂದಿರುವ ಕೇಂಬ್ರಿಡ್ಜ್ ಅನಾಲಟಿಕಾ ಸಂಸ್ಥೆಯ ಜೊತೆ ಕಾಂಗ್ರೆಸ್ (ಎಐಸಿಸಿ) ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದು ಇನ್ನೊಂದು ಸುದ್ದಿ.

ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಪ್ರತಿಕ್ರಿಯೆ

ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಪ್ರತಿಕ್ರಿಯೆ

ANI ಲೇಖನದ ಬಗ್ಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಅವರನ್ನು ಸಂಪರ್ಕಿಸಿದ ಸುದ್ದಿ ಸಂಸ್ಥೆ, ನಮ್ಮ ಅಕೌಂಟಿನಿಂದ ಟ್ವೀಟ್ ಮಾಡಿದ ನಂತರ, ಯಾವುದೂ ನಮ್ಮ ಹತೋಟಿಯಲ್ಲಿ ಇರುವುದಿಲ್ಲ. ಟ್ವಿಟ್ಟರ್ ಸಂಸ್ಥೆಯನ್ನೇ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಎನ್ನುವ ಉತ್ತರ ರಮ್ಯಾ ಕಡೆಯಿಂದ ಬಂದಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್

ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್

ರಾಹುಲ್ ಗಾಂಧಿ ಅವರು ರಷ್ಯಾ, ಕಜಕಿಸ್ತಾನ ಮತ್ತು ಇಂಡೋನೇಷ್ಯಾದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆನ್ನುವ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಟ್ವೀಟ್

ಸ್ಮೃತಿ ಇರಾನಿ ಟ್ವೀಟಿಗೆ ರಮ್ಯಾ ಪ್ರತಿಕ್ರಿಯೆ

ಸ್ಮೃತಿ ಇರಾನಿ ಟ್ವೀಟಿಗೆ ರಮ್ಯಾ ಪ್ರತಿಕ್ರಿಯೆ

ANI, ಸುದ್ದಿಸಂಸ್ಥೆಯ ವರದಿ ಬಗ್ಗೆ ಸ್ಮೃತಿ ಇರಾನಿಯವರ ಟ್ವೀಟ್ ಅನ್ನು ಉಲ್ಲೇಖಿಸುತ್ತಾ, ನಮಗೆ ನೀವು ಇರಬೇಕಾದರೆ ಈ ರೀತಿ ಜನಪ್ರಿಯತೆಯ ದಾರಿ ಹುಡುಕುವ ಅವಶ್ಯಕತೆ ಯಾಕೆ ಬೇಕು?

ಸುಬ್ರಮಣಿಯನ್ ಸ್ವಾಮಿ ಟ್ವೀಟ್

ಸುಬ್ರಮಣಿಯನ್ ಸ್ವಾಮಿ ಟ್ವೀಟ್

ರಾಹುಲ್ ಗಾಂಧಿಯನ್ನು ಬುದ್ದು ಎಂದು ಸಂಭೋದಿಸುತ್ತಾ, ಅವರ ಎಲ್ಲಾ ವಿಷಯಗಳು ಬೋಗಸ್. ಅದು ಡಿಗ್ರಿಯಾಗಿರಲಿ, ಪೌರತ್ವ, ಟ್ವಿಟ್ಟರ್ ಹಿಂಬಾಲಕರು ಎಲ್ಲಾ ಬೋಗಸ್ ಎನ್ನುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್.

ಬಿಜೆಪಿಯ ಐಟಿ ಘಟಕದ ಅಮಿತ್ ಮಾಳವೀಯ

ಬಿಜೆಪಿಯ ಐಟಿ ಘಟಕದ ಅಮಿತ್ ಮಾಳವೀಯ

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರನ್ನು ಕೆಣಕುವ ಟ್ವೀಟ್. ಬಿಜೆಪಿಯ ಐಟಿ ಘಟಕದ ಅಮಿತ್ ಮಾಳವೀಯ ಅವರಿಂದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC VP Rahul Gandhi's twitter handle 'OfficeofRG' has been the topic of various news outlets recently, citing a rise in retweets as evidence of a resurgence of Rahul Gandhi's interaction on social media. However, his tweets does throw up some questions, are these automated 'bots' mass retweeting Rahul's tweets?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ