ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮತ್ತು ಚೀನಾ ಗಡಿಯಲ್ಲಿ ಲಘು ಯುದ್ಧ ವಿಮಾನ ತೇಜಸ್

|
Google Oneindia Kannada News

ನವದೆಹಲಿ, ಆಗಸ್ಟ್18: ಭಾರತ-ಚೀನಾದ ಲಡಾಖ್ ಪೂರ್ವಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವ ಬೆನ್ನಲ್ಲೇ ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ವಾಯು ಸೇನೆಯು ಲಘು ಯುದ್ಧ ವಿಮಾನ ತೇಜಸ್ ನ್ನು ನಿಯೋಜನೆಗೊಳಿಸಿದೆ.

ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತೆ ಇರುವ ಪಾಶ್ಚಿಮಾತ್ಯ ಗಡಿ ಪ್ರದೇಶದಲ್ಲಿ ತೇಜಸ್ ಯುದ್ಧ ವಿಮಾನವನ್ನು ನಿಯೋಜನೆಗೊಳಿಸುವುದಕ್ಕೆ ಭಾರತೀಯ ವಾಯು ಸೇನೆಯು ತೀರ್ಮಾನಿಸಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಯುದ್ಧೋನ್ಮಾದ ಪೂರ್ವ ಲಡಾಖ್‌ನಲ್ಲಿ ಎಚ್‌ಎಎಲ್‌ನ ಲಘು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆಯುದ್ಧೋನ್ಮಾದ ಪೂರ್ವ ಲಡಾಖ್‌ನಲ್ಲಿ ಎಚ್‌ಎಎಲ್‌ನ ಲಘು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆ

ಭಾರತದ ಸ್ವಾತಂತ್ರ್ಯ ದಿನಾಚರಣೆ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಈ ಬಗ್ಗೆ ಪ್ರಸ್ತಾಪಿಸಿದ್ದರು. ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾರ್ಕ್ 1ಎ ಆವೃತ್ತಿಯ ಲಘು ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.

Border Tensions With China: India Deployed LCA Tejas On Western Front

ದಕ್ಷಿಣ ವಾಯು ಗಡಿ ರೇಖೆಯಲ್ಲಿ ಕಾರ್ಯಾಚರಣೆಯ ಪ್ರಮುಖ ಪಾತ್ರ ವಹಿಸಲು ಲಘು ಯುದ್ಧ ವಿಮಾನ ತೇಜಸ್ ವಿಮಾನಗಳ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುಲುರ್ ವಾಯುನೆಲೆಯಲ್ಲಿ ವಾಯು ಸೇನಾ ಮುಖ್ಯಸ್ಥ ಮಾರ್ಷಲ್ ಆರ್ ಕೆಎಸ್ ಭದೌರಿಯಾ ಆರಂಭಿಕ ಹಂತದಲ್ಲಿ ವಿಮಾನಗಳ ಬಳಸಿಕೊಳ್ಳಲಾಗಿತ್ತು. ಅಂತಿಮ ಆವೃತ್ತಿ ವೇಳೆಯಲ್ಲಿ ಫ್ಲೈಯಿಂಗ್ ಬುಲೆಟ್ ಗಳನ್ನು ಬಳಸಿಕೊಳ್ಳಲಾಗಿತ್ತು.

ಭಾರತ-ಚೀನಾ ಗಡಿ ಪ್ರದೇಶದಲ್ಲಿ ಚೀನಾ ಕ್ಯಾತೆ ತೆಗೆದಿರುವ ಹಿನ್ನೆಲೆ ಭಾರತೀಯ ಸೇನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವಾಲಯವು ಕಾರ್ಯಪ್ರವೃತ್ತವಾಗಿವೆ. ಈ ವರ್ಷಾಂತ್ಯದ ವೇಳೆಗೆ 83 ಮಾರ್ಕ್ 1 ಎ ವರ್ಷನ್ ಏರ್ ಕ್ರಾಫ್ಟ್ ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ.

English summary
Border Tensions With China: India Deployed LCA Tejas On Western Front.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X