ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್, ಹಿ. ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೇ ಬುಕ್ಕಿಗಳ ಗೆಲ್ಲುವ ಫೇವರಿಟ್

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 6: ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಮಾಧ್ಯಮ ಸಮೀಕ್ಷೆಗಳು ಮಾತ್ರ ಹೇಳುತ್ತಿಲ್ಲ. ಈ ಮಾತನ್ನು ಬುಕ್ಕಿಗಳೂ ಹೇಳುತ್ತಿದ್ದಾರೆ.

ಗುಜರಾತ್ ನಲ್ಲಿ 2012ರಲ್ಲಿ ಬಿಜೆಪಿ ಗೆದ್ದಿದ್ದಕ್ಕಿಂತೆ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬುಕ್ಕಿಗಳ ವಲಯದಲ್ಲಿ ಮಾತುಗಳು ಓಡಾಡುತ್ತಿವೆ. ಆದರೆ ಸರಳ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂದು ಬುಕ್ಕಿಗಳು ನಂಬಿದ್ದಾರೆ.

Bookies’ also says BJP wins in Gujarat, Himachal Pradesh

182 ಸದಸ್ಯಬಲದ ಗುಜರಾತ್ ನಲ್ಲಿ 90ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಿಜೆಪಿ ಸರಕಾರ ರಚಿಸಲಿದೆ ಎಂದು ಬೆಟ್ ಕಟ್ಟುವವರಿಗೆ ಬುಕ್ಕಿಗಳು ಒಂದು ರೂಪಾಯಿಗೆ 0.32 ಪೈಸೆ ಬೆಲೆ ನಿಗದಿ ಪಡಿಸಿದ್ದಾರೆ. ಅಂದರೆ ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ರೂಪಾಯಿಗೆ ಪ್ರತಿಯಾಗಿ ಒಂದು ರೂಪಾಯಿ 32 ಪೈಸೆ ಬೆಟ್ ಕಟ್ಟಿದವರ ಜೇಬಿಗೆ ಸೇರಲಿದೆ.

ಆದರೆ ಬಿಜೆಪಿ 120 ಸೀಟುಗಳನ್ನು ಗೆಲ್ಲಲಿದೆ ಎಂದು ಬೆಟ್ ಕಟ್ಟುವವರಿಗೆ 1:2.15 ಬೆಲೆ ನಿಗದಿ ಪಡಿಸಲಾಗಿದೆ.

ಇನ್ನು ಕಾಂಗ್ರೆಸ್ 80 ಸೀಟು ಗೆಲ್ಲಲಿದೆ ಎನ್ನುವವರಿಗೂ ಇಷ್ಟೇ ಬೆಲೆ ನಿಗದಿಪಡಿಸಲಾಗಿದೆ. ಅಂದರೆ ರೂಪಾಯಿಗೆ 2.15 ರೂಪಾಯಿ ಸಿಗಲಿದೆ.

ಮುಂಬೈನ 'ಸತ್ತಾ ಬಜಾರಿ' ಟ್ರೆಂಡ್ ನ್ನೇ ದೇಶದಾದ್ಯಂತ ಬೆಂಬಲಿಸಲಾಗುತ್ತಿದ್ದು ಚುನಾವಣಾ ವಿಚಾರಕ್ಕೆ ಬಂದಾಗ ಇಲ್ಲಿನ ಬುಕ್ಕಿಗಳ ಭವಿಷ್ಯ ಹೆಚ್ಚಿನ ಪಾಲು ಸತ್ಯವಾಗಿದೆ. ಹೀಗಾಗಿ ಎರಡೂ ರಾಜ್ಯಗಳಲ್ಲಿ ಬಿಜೆಪಿ ಬರಬಹುದು ಎಂಬ ನಂಬಿಕೆ ಮತ್ತಷ್ಟು ಪ್ರಬಲವಾಗಿದೆ.

ಒಟ್ಟಾರೆ ಗುಜರಾತ್ ಚುನಾವಣೆಯ ಸುತ್ತ 25,000 ಕೋಟಿ ರೂಪಾಯಿ ಬೆಟ್ಟಿಂಗ್ ನಡೆಯಹುದು ಎಂದು ಅಂದಾಜಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲೂ ಬಿಜೆಪಿ

ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ನಂಬಿಕೆಯನ್ನು ಬುಕ್ಕಿಗಳು ಇಟ್ಟುಕೊಂಡಿದ್ದಾರೆ.

68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬೆಟ್ ಕಟ್ಟಿದವರಿಗೆ 0.22 ಪೈಸೆ ಬೆಲೆ ನಿಗದಿ ಮಾಡಲಾಗಿದೆ. ಕಾಂಗ್ರೆಸ್ 30 ಸ್ಥಾನಗಳನ್ನು ಗೆಲ್ಲಲಿದೆ ಎನ್ನುವವರರಿಗೆ 1:2.75 ಬೆಲೆ ನಿಗದಿ ಮಾಡಲಾಗಿದೆ.

English summary
Betting market is putting its money on the possibility that that the BJP will win in upcoming Gujarat and Himachal Pradesh state assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X