ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಕಿಡಿ

By Mahesh
|
Google Oneindia Kannada News

ಅಮೃತ್ ಸರ, ಜ.29: ಪ್ರಪ್ರಥಮ ಬಾರಿಗೆ ಟೈಮ್ಸ್ ನೌ ಗೆ ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚೆದ್ದು, ಜೋಕುಗಳ ಸರಮಾಲೆ ಹಾಕಿದ ನಂತರ ಸಿಖ್ಖರ ಕೋಪಕ್ಕೆ ಗುರಿಯಾಗಿದ್ದಾರೆ. 1984ರ ಸಿಖ್ ದಂಗೆ ಬಗ್ಗೆ ರಾಹುಲ್ ನೀಡಿರುವ ಹೇಳಿಕೆಯನ್ನು ಪಂಜಾಬ್ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ತೀವ್ರವಾಗಿ ಖಂಡಿಸಿದ್ದಾರೆ.

ಸಂದರ್ಶನದ ವೇಳೆ ಅರ್ನಾಬ್ ಗೋಸ್ವಾಮಿ ಅವರ ಜತೆ ಮಾತನಾಡುತ್ತಾ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಕೆಲ ನಾಯಕರು 1984ರ ಸಿಖ್ಖರ ನರಮೇಧದಲ್ಲಿ ಭಾಗಿಯಾಗಿದ್ದರು ಎಂದು ಹೇಳಿರುವುದು ಖಂಡನಾರ್ಹ. ಕೂಡಲೇ ರಾಹುಲ್ ವಿರುದ್ಧ ಸ್ವಯಂಪ್ರೇರಿತವಾಗಿ ಕೋರ್ಟ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸುಖಬೀರ್ ಆಗ್ರಹಿಸಿದ್ದಾರೆ.

ನಾವು(ಶಿರೋಮಣಿ ಅಕಾಲಿ ದಳ) ಮೊದಲಿನಿಂದಲೂ 1984ರ ಸಿಖ್ಖರ ಹತ್ಯೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಿದ್ದೇವೆ. ಈಗ ಇದಕ್ಕೆ ಕಾರಣ ಕರ್ತರಾದವರ ಕುಟುಂಬದವರೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಹುಲ್ ವಿರುದ್ಧ ಕೇಸ್ ಜಡಿಯಬೇಕು ಎಂದಿದ್ದಾರೆ. [ರಾಹುಲ್ ಗಾಂಧಿ ಪೆದ್ದುತನ]

1984ರ ಸಿಖ್ಖರ ಮಾರಣಹೋಮಕ್ಕೂ ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರುದ್ಧದ ಹತ್ಯಾಕಾಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ ಎಂಬುದನ್ನು ರಾಹುಲ್ ಮತ್ತೊಮ್ಮೆ ತಿಳಿ ಹೇಳಬೇಕಾಗಿಲ್ಲ. ರಾಹುಲ್ ಹೇಳಿಕೆಯನ್ನು ಶಿರೋಮಣಿ ಗುರ್ ದ್ವಾರಾ ಪ್ರಭಂದಕ್ ಸಮಿತಿ ಸೇರಿದಂತೆ ಅನೇಕ ಸಿಖ್ ಸಂಘಗಲು ಖಂಡಿಸಿವೆ.

ರಾಜೀವ್ ಅವರ ಹೇಳಿಕೆ ಉಲ್ಲೇಖಾರ್ಹ

ರಾಜೀವ್ ಅವರ ಹೇಳಿಕೆ ಉಲ್ಲೇಖಾರ್ಹ

ರಾಹುಲ್ ಅವರ ತಂದೆ ರಾಜೀವ್ ಅವರು ಹೇಳಿದ್ದು ಇನ್ನೂ ನೆನಪಿದೆ 'jab koi bara per girta hai toh dharti hilti hi hai'(ದೊಡ್ಡ ಮರ ಬೀಳುವಾಗ ಭೂಮಿ ಅಲ್ಲಾಡಲೇ ಬೇಕು) ಎಂದು 1984ರಲಿ ದೆಹಲಿಯಲ್ಲಿ ನಡೆದ ಸಿಖ್ಖರ ಮಾರಣಹೋಮಕ್ಕೆ ರಾಜೀವ್ ಗಾಂಧಿ ಪ್ರತಿಕ್ರಿಯಿಸಿದ್ದರು.

ಕಾಂಗ್ರೆಸ್ ನಾಯಕರಿಗೆ ಕ್ಲೀನ್ ಚಿಟ್?

ಕಾಂಗ್ರೆಸ್ ನಾಯಕರಿಗೆ ಕ್ಲೀನ್ ಚಿಟ್?

ಸಿಖ್ ವ್ಯಕ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಖ್ ಸಮುದಾಯ ವ್ಯಕ್ತಿಗಳನ್ನು ಕಂಡಕಂಡಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆಗೆ ಸಜ್ಜನ್ ಕುಮಾರ್ ಅವರು ಪ್ರಚೋದನೆ ನೀಡಿದರು ಎಂಬ ಆರೋಪ ಅವರ ಮೇಲಿದೆ. 1984 ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು 3000 ಅಮಾಯಕ ಸಿಖ್ ಜನರು ಪ್ರಾಣ ಕಳೆದುಕೊಂಡರು. ಸಿಖ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಹಾಗೂ ಸಜ್ಜನಕುಮಾರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ

ದಂಗೆಯಲ್ಲ ಇತಿಹಾಸ ತಿರುಚಲಾಗಿದೆ, ಅದು ಹತ್ಯಾಕಾಂಡ

ದಂಗೆಯಲ್ಲ ಇತಿಹಾಸ ತಿರುಚಲಾಗಿದೆ, ಅದು ಹತ್ಯಾಕಾಂಡ ಸಿಖ್ಖರ ಮಾರಣ ಹೋಮ ಮಾಡಲಾಗಿದೆ. ಕಾಂಗ್ರೆಸ್ ಎಲ್ಲವನ್ನೂ ಮರೆ ಮಾಚುತ್ತಿದೆ

ಸಿಖ್ ದಂಗೆ ಎಸ್ ಐಟಿ ತನಿಖೆ ಮಾತ್ರ ಸಾಲಲ್ಲ

ಸಿಖ್ ದಂಗೆ ಎಸ್ ಐಟಿ ತನಿಖೆ ಮಾತ್ರ ಸಾಲಲ್ಲ, ಸುಪ್ರೀಂಕೋರ್ಟಿನಿಂದ ತನಿಖೆಯಾಗಬೇಕು ಎಂದು ಬಿಪ್ಯಾಕ್ ನ ಮೋಹನ್ ದಾಸ್ ಪೈ ಆಗ್ರಹ

ಸಮಗ್ರ ತನಿಖೆಯಾಗಲಿ ಅರೋಪಿಗಳಿಗೆ ಶಿಕ್ಷೆಯಾಗಲಿ

ಸಮಗ್ರ ತನಿಖೆಯಾಗಲಿ ಅರೋಪಿಗಳಿಗೆ ಶಿಕ್ಷೆಯಾಗಲಿ, ಕೇಂದ್ರ ಸಚಿವ ಸಂಪುಟದಲ್ಲೂ ಸಿಖ್ ಮಾರಣಹೋಮ ಪ್ರಕರಣದ ಆರೋಪಿ ಇದ್ದಾರೆ.

English summary
Punjab deputy chief minister Sukhbir Singh Badal on Tuesday said the courts should take suo motu notice of Congress vice-president Rahul Gandhi's remarks in an interview to Times Now that some of his partymen were involved in the 1984 anti-Sikh riots, asking Punjab Congress leaders to quit the party after such a "confession".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X