ಬಾಂಬೆ, ಮದ್ರಾಸ್ ಹೈಕೋರ್ಟ್‌ಗಳಿಗೆ ಮರುನಾಮಕರಣ

Written By:
Subscribe to Oneindia Kannada

ನವದೆಹಲಿ, ಜುಲೈ, 06: ಬಾಂಬೆ ಹೈಕೋರ್ಟ್, ಮದ್ರಾಸ್ ಹೈಕೋರ್ಟ್, ಕಲ್ಕತ್ತಾ ಹೈಕೋರ್ಟ್ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಂದಿನ ದಿನಗಳಲ್ಲಿ ಬಾಂಬೆ ಹೈಕೋರ್ಟ್ ಮುಂಬೈ ಹೈಕೋರ್ಟ್ ಆಗಿ, ಮದ್ರಾಸ್ ಹೈಕೋರ್ಟ್ ಚೆನ್ನೈ ಹೈಕೋರ್ಟ್ ಆಗಿ, ಕಲ್ಕತ್ತಾ ಹೈಕೋರ್ಟ್ ಕೊಲ್ಕತಾ ಹೈ ಕೋರ್ಟ್ ಆಗಿ ನಾಮಕರಣಗೊಳ್ಳಲಿವೆ.[ರಾಜ್ಯದ 19 ರೈಲು ನಿಲ್ದಾಣಗಳಲ್ಲಿ ಕನ್ನಡ ಡಿಂಡಿಮ]

court

ಮಹಾನಗರಗಳ ಹೆಸರನ್ನು ಬದಲಾವಣೆ ಮಾಡಿ ವರುಷಗಳೆ ಉರುಳಿವೆ. ಆದರೆ ಕೋರ್ಟ್ ಹೆಸರು ಹಾಗೆ ಉಳಿದುಕೊಂಡಿದ್ದು ಅದನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.[ಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ]

ಸದ್ಯ ನ್ಯಾಯಾಲಯಗಳನ್ನು ಹಳೆಯ ಹೆಸರಿನಿಂದಲೇ ಕರೆಯಲಾಗುತ್ತಿದೆ. ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಮೇಲೆ ಎಲ್ಲ ದಾಖಲೆಗಳು ಸೇರಿದಂತೆ ನಾಮಫಲಕಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Union Cabinet approved a change in the names of the Madras, Bombay and Calcutta High Courts to reflect the alterations in the official nomenclature of these cities to Chennai, Mumbai and Kolkata, respectively. “The names of these cities have been changed for a few years now.
Please Wait while comments are loading...