ದೆಹಲಿ-ಚೆನ್ನೈ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ
ಹಜರತ್ ನಿಜಾಮುದ್ದೀನ್ - ಎಂಜಿಆರ್ ಚೆನ್ನೈ ಸೆಂಟ್ರಲ್ ಗರೀಬ್ ರಥ ಎಕ್ಸ್‌ಪ್ರೆಸ್ (12612), ರೈಲಿನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕನೊಬ್ಬ ಹೇಳಿದ ನಂತರ ರಾಜಸ್ಥಾನದ ಧೋಲ್‌ಪುರ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಲಾಯಿತು.
ಚೆನ್ನೈ, ಫೆಬ್ರವರಿ 21: ಸೋಮವಾರ ತಡರಾತ್ರಿ ಹಜರತ್ ನಿಜಾಮುದ್ದೀನ್- ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರುವ ಬಗ್ಗೆ ವದಂತಿಗಳನ್ನು ಹರಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹಜರತ್ ನಿಜಾಮುದ್ದೀನ್ - ಎಂಜಿಆರ್ ಚೆನ್ನೈ ಸೆಂಟ್ರಲ್ ಗರೀಬ್ ರಥ ಎಕ್ಸ್‌ಪ್ರೆಸ್ (12612), ರೈಲಿನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕನೊಬ್ಬ ಹೇಳಿದ ನಂತರ ರಾಜಸ್ಥಾನದ ಧೋಲ್‌ಪುರ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಲಾಯಿತು.
ಪೊಲೀಸರು ರೈಲ್ ಮದದ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ರೈಲಿನ ಜಿ 2 ಕೋಚ್‌ನಲ್ಲಿ ಬಾಂಬ್ ಇತ್ತು ಎಂದು ಹೇಳಿಕೊಂಡಿದ್ದಾರೆ ಮತ್ತು ಇತರ ಇಬ್ಬರು ಕೂಡ ಅದೇ ಮಾದರಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಆರ್‌ಪಿ ಪೊಲೀಸ್ ಮತ್ತು ಆರ್‌ಪಿಎಫ್ ಪಡೆಗಳ ತಂಡಗಳೊಂದಿಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತಲುಪಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಿ ತನಿಖೆ ನಡೆಸಲಾಗಿದೆ. ಜಿ2 ಕೋಚ್ ಹೊರತುಪಡಿಸಿ, ಜಿ3 ಮತ್ತು ಜಿ4 ಅನ್ನು ಸಹ ಸ್ಥಳಾಂತರಿಸಲಾಗಿದೆ. ಅಲ್ಲದೆ ಮೂರು ಬೋಗಿಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ, ರೈಲಿನಲ್ಲಿ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ಖಚಿತಪಡಿಸಿದರು ಮತ್ತು ರೈಲು ಮುಂದೆ ಹೋಗಲು ಅನುಮತಿ ನೀಡಲಾಯಿತು.
ಬಾಂಬ್ ಕುರಿತು ವದಂತಿ ಹಬ್ಬಿಸಿದ್ದಕ್ಕಾಗಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿಯಿಂದ ದಿಯೋಗರ್ (ಒಡಿಶಾ) ಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಲಕ್ನೋಗೆ ತಿರುಗಿಸಲಾಯಿತು. ಎಲ್ಲಾ ಅಗತ್ಯ ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದ್ದು, ಫ್ಲೈಟ್ 6ಇ 6191 ಅನ್ನು ಟೇಕ್‌ಆಫ್ ಮಾಡಲು ತೆರವುಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆಯು ತನಿಖೆಯಲ್ಲಿ ಭದ್ರತಾ ಏಜೆನ್ಸಿಗಳ ನಿಯಮಗಳನ್ನು ಅನುಸರಿಸುತ್ತಿದೆ ಎಂದು ಇಂಡಿಗೋ ಹೇಳಿತ್ತು.












Click it and Unblock the Notifications