ಅತ್ಯಾಚಾರ: ಪೊಲೀಸರಿಗೆ ಶರಣಾದ ಖ್ಯಾತ ಬಾಲಿವುಡ್ ನಿರ್ಮಾಪಕ
25ವರ್ಷದ ಯುವತಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರೋದ್ಯಮದ ಖ್ಯಾತ ನಿರ್ಮಾಪಕ ಕರೀಂ ಮೊರಾನಿ ಪೊಲೀಸರಿಗೆ ಶರಣಾಗಿದ್ದು, ಇವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹೈದರಾಬಾದ್, ಸೆ 24: ಯುವತಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರೋದ್ಯಮದ ಖ್ಯಾತ ನಿರ್ಮಾಪಕ ಕರೀಂ ಮೊರಾನಿ ಪೊಲೀಸರಿಗೆ ಶರಣಾಗಿದ್ದು, ಇವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯ ಬೇಲ್ ಅರ್ಜಿ ತಿರಸ್ಕರಿಸಿದ ನಂತರ ನಗರದ ಹಯಾತ್ ನಗರ ಪೊಲೀಸರ ಮುಂದೆ ಮೊರಾನಿ ಶರಣಾಗಿದ್ದಾರೆ. ದೆಹಲಿ ಮೂಲದ 25ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಮೊರಾನಿ ಎದುರಿಸುತ್ತಿದ್ದಾರೆ.

ಬಾಲಿವುಡ್ ಬಾದಶಾ ಶಾರೂಖ್ ಖಾನ್ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೊರಾನಿ, 2G ಹಗರಣದಲ್ಲೂ ಆರೋಪಿಯಾಗಿದ್ದರು. ಸಿನಿಯುಗ್ ಎನ್ನುವ ಕಂಪೆನಿಯ ಮಾಲೀಕರಾರಿಗಿರುವ ಮೊರಾನಿ, ಸೂಪರ್ ಹಿಟ್ ಹಿಂದಿ ಚಿತ್ರ ಚೈನ್ನೈ ಎಕ್ಸ್ ಪ್ರೆಸ್ ಚಿತ್ರದ ನಿರ್ಮಾಪಕರೊಲ್ಲಬ್ಬರು.
ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಹಲವು ಬಾರಿ ಮೊರಾನಿ ಅತ್ಯಾಚಾರ ಎಸಗಿದ್ದರು ಎಂದು ಯುವತಿ ದೂರಿದ್ದರು. ನನ್ನ ನಗ್ನ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಯುವತಿ, ಮೊರಾನಿ ವಿರುದ್ದ ದೂರು ಸಲ್ಲಿಸಿದ್ದರು.
ಹೈದರಾಬಾದ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ ಮೊರಾನಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲೂ ಜಾಮೀನು ಸಿಗದ ಹಿನ್ನಲೆಯಲ್ಲಿ ಮೊರಾನಿ ಪೊಲೀಸರಿಗೆ ಶರಣಾಗಿದ್ದಾರೆ. ದಿಲ್ವಾಲೆ, ರಾ ಒನ್, ನ್ಯೂಇಯರ್ ಮುಂತಾದ ಚಿತ್ರಗಳನ್ನೂ ಕರೀಂ ಮೊರಾನಿ ನಿರ್ಮಿಸಿದ್ದರು.












Click it and Unblock the Notifications