Get Updates
Get notified of breaking news, exclusive insights, and must-see stories!

ಹಣಕ್ಕಾಗಿ ರಾಜಕೀಯ ಪಕ್ಷಗಳ ಪರ ಸಂದೇಶ: ಬಾಲಿವುಡ್ ತಾರೆಯರ ಬಣ್ಣ ಬಯಲು

ಮುಂಬೈ, ಫೆಬ್ರವರಿ 19: ಹಣ ನೀಡುವುದಾದರೆ ಯಾವುದೇ ರಾಜಕೀಯ ಪಕ್ಷದ ಪರ ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲಿ ಅವರು ಸೂಚಿಸಿದಂತೆ ಸಂದೇಶಗಳನ್ನು ಹಾಕಲು ಸಿದ್ಧ ಎಂದು ಬಾಲಿವುಡ್ ತಾರೆಯರು ಒಪ್ಪಿಕೊಂಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಕುಟುಕು ಕಾರ್ಯಾಚರಣೆಗೆ ಪ್ರಸಿದ್ಧವಾದ ಕೋಬ್ರಾಪೋಸ್ಟ್‌ ಇತ್ತೀಚೆಗೆ ಮಾಡಿದ ಕಾರ್ಯಾಚಾರಣೆಯಲ್ಲಿ ಹಲವು ಬಾಲಿವುಡ್ ಸ್ಟಾರ್‌ಗಳು ಹಣ ಕೊಟ್ಟರೆ ಯಾವ ಪಕ್ಷದ ಪರವಾಗಿ ಬೇಕಾದರೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪ್ರಕಟಿಸುವುದಾಗಿ ಹೇಳಿದ್ದನ್ನು ವಿಡಿಯೋ ಸಹಿತ ಬಹಿರಂಗಗೊಂಡಿದೆ.

ಈ ಸ್ಟಾರ್‌ಗಳು ತಮ್ಮ ವೈಯಕ್ತಿಕ ಮೌಲ್ಯಗಳನ್ನು ಮೀರಿ ಕೇವಲ ಹಣಕ್ಕಾಗಿ ಯಾವುದೋ ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲು ನಿಲ್ಲಲು ತಯಾರಾಗಿರುವುದನ್ನು ಹಲವು ಮಂದಿ ತೀವ್ರವಾಗಿ ಖಂಡಿಸಿದ್ದಾರೆ.

Bollywood actors agree to do political favors to parties by taking money

ಹಣ ಪಡೆದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲು ತಯಾರಾದ ಪಟ್ಟಿಯಲ್ಲಿ ಸನ್ನಿ ಲಿಯೋನ್ ಸೇರಿದಂತೆ ಹಲವು ಪ್ರಮುಖ -ಬಾಲಿವುಡ್ ಸ್ಟಾರ್‌ಗಳೇ ಇದ್ದಾರೆ. ಕೆಲವರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ, ಇನ್ನು ಕೆಲವರು ಬೇರೆ ಬೇರೆ ರೀತಿಯ ಸಹಾಯಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಿದರೆ, ಹಣ ನೀಡಿದವರು ಕಳಿಸುವ ಸಂದೇಶವನ್ನು ತಮ್ಮದು ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಲು ತಾವು ತಯಾರಿರುವುದಾಗಿ ಅವರು ಹೇಳಿದ್ದಾರೆ.

ಸನ್ನಿ ಲಿಯೋನ್, ಸೋನು ಸೂದ್, ಜಾಕಿ ಶ್ರಾಫ್, ಶಕ್ತಿ ಕಪೂರ್, ವಿವೇಕ್ ಒಬೆರಾಯ್, ಅಮಿಶಾ ಪಟೇಲ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಾಡೆ, ಪುನೀತ್ ಇಸ್ಸಾರ್, ಸುರೇಂದರ್ ಪಾಲ್, ಪಂಕಜ್ ಧೀರ್, ನಿಕಿತಿನ್ ಧೀರ್, ಟಿಸ್ಕಾ ಚೋಪ್ರಾ, ದೀಪ್ಶಿಕಾ ನಾಗ್ಪಾಲ್, ಅಖಿಲೇಂದ್ರ ಮಿಶ್ರಾ, ರೋಹಿತ್ ರಾಯ್, ರಾಹುಲ್ ಬಾತ್, ಸಲೀಂ ಜೈದಿ, ರಾಖಿ ಸಾವಂತ್, ಅಮನ್ ವರ್ಮಾ, ಹಿತೆನ್ ತೇಜ್ವಾನಿ, ಗೌರಿ ಪ್ರಧಾನ್, ಎವ್ಲಿನ್ ಶರ್ಮಾ, ಮಿನಿಶಾ ಲಂಬಾ, ಕೊಯಿನಾ ಮಿತ್ರಾ, ಪೂನಂ ಪಾಂಡೆ ಇವರೆಲ್ಲಾ ಹಣ ಪಡೆದು ರಾಜಕೀಯ ಪಕ್ಷದ ಪರ ವಹಿಸಲು ಸಿದ್ಧರಾಗಿರುವ ನಟ-ನಟಿಯರು.

ಹಾಡುಗಾರರಾದ ಅಭಿಜಿತ್ ಭಟ್ಟಾಚಾರ್ಯ, ಕೈಲಾಶ್ ಖೇರ್, ಬಾಬಾ ಸೈಗಲ್, ಮಿಖಾ ಸಿಂಗ್, ಖ್ಯಾತ ಕಾಮಿಡಿಯನ್‌ಗಳಾದ ರಾಜು ಶ್ರೀವಾತ್ಸವ್, ರಾಜಪಾಲ್ ಯಾದವ್, ಸುನಿಲ್ ಪಾಲ್, ಉಪಾಸನಾ ಸಿಂಗ್, ಕೃಷ್ಣ ಅಭಿಶೇಕ್, ವಿಜಯ್ ಈಶ್ವರ್ ಲಾಲ್ ಪವಾರ್, ನೃತ್ಯ ಸಂಯೋಜಕರಾದ ಗಣೇಶ್ ಆಚಾರ್ಯ, ಸಂಭಾವನಾ ಸೇಠ್ ಅವರುಗಳು ಸಹ ಹಣ ಪಡೆದು ರಾಜಕೀಯ ಸಹಾಯ ಮಾಡಲು ಒಪ್ಪಿದ್ದಾರೆ.

ಆದರೆ ಇವರಿಗೆ ವಿರುದ್ಧವಾಗಿ ಹಣ ಪಡೆದು ತಮ್ಮ ಆದರ್ಶವನ್ನು ಮಾರಿಕೊಳ್ಳಲು ಇಚ್ಚಿಸದ ನಟ-ನಟಿಯರೂ ಇದ್ದಾರೆ. ವಿದ್ಯಾ ಬಾಲನ್, ಅರ್ಶದ್ ವಾರ್ಸಿ, ರಾಜಾ ಮುರದ್, ಸೌಮ್ಯಾ ಟಂಡನ್, ಅವರುಗಳು ಹಣ ಪಡೆದು ರಾಜಕೀಯ ಸಂದೇಶ ಪ್ರಕಟಿಸಲು ಸ್ಪಷ್ಟವಾಗಿ ನಕಾರ ಹೇಳಿದ್ದಾರೆ.

ಕೋಬ್ರಾ ಪೋಸ್ಟ್‌ ಮಾಡಿರುವ ಈ ಕುಟುಕು ಕಾರ್ಯಚಾರಣೆ ಬಾಲಿವುಡ್ ಮಂದಿಯ ನಿಜ ಬಣ್ಣ ಬಯಲು ಮಾಡಿದೆ.

ಕೋಬ್ರಾ ಪೋಸ್ಟ್‌ನ ಕುಟುಕು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, ನನ್ನ ಅಭಿಪ್ರಾಯಗಳು ನನ್ನ ವೈಯಕ್ತಿಕವಾಗಿಯೇ ಹೊರತು, ಮಾರಾಟಕ್ಕಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಕರೆದುಕೊಂಡಿದ್ದಾರೆ. ಉದ್ದದ ಪತ್ರವೊಂದನ್ನು ಪ್ರಕಟಿಸಿ ಇದು ಕುಟುಕು ಕಾರ್ಯಾಚರಣೆಯ ಸ್ಪಷ್ಟೀಕರಣ ಎಂದು ಹೇಳಿದ್ದಾರೆ.

ನಟ ಸೋನು ಸೂದ್ ಸಹ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕೋಬ್ರಾ ಪೋಸ್ಟ್‌ ತಿದ್ದಿದ ವಿಡಿಯೋವನ್ನು ಬಿಡುಗಡೆ ಮಾಡಿದೆ. ನಕಾರಾತ್ಮಕ ಭಾವ ಬರುವಂತೆ ನಮ್ಮ ಮಾತುಗಳನ್ನು ತಿದ್ದಲಾಗಿದೆ. ಅವರು ನನ್ನನ್ನು ಸಂಪರ್ಕಿಸಿದಾಗ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ, ನನಗೆ ಸರಿ ಕಂಡದ್ದನ್ನು ಮಾತ್ರವೇ ಪ್ರಮೋಟ್ ಮಾಡುತ್ತೇನೆ ಎಂದು, ಆದರೆ ಅದನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+