ಧರ್ಮಶಾಲದಲ್ಲಿ ಹಿಂದಿ ಚಿತ್ರರಂಗದ ನಟ ಶವವಾಗಿ ಪತ್ತೆ

ಧರ್ಮಶಾಲ, ನ.12: ಹಿಮಾಚಲ ಪ್ರದೇಶದ ಧರ್ಮಶಾಲದ ಖಾಸಗಿ ಕಟ್ಟಡವೊಂದರಲ್ಲಿ ಹಿಂದಿ ಚಿತ್ರರಂಗದ ನಟರೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ನಟ ಆಸಿಫ್ ಬಸ್ರಾ ಎಂದು ಗುರುತಿಸಲಾಗಿದೆ.

ನಾಟಕ ರಂಗ ಹಾಗೂ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ 53 ವರ್ಷ ವಯಸ್ಸಿನ ಆಸಿಫ್ ಅವರ ನಿಧನದ ವಾರ್ತೆ ಕೇಳಿ ಬಿಟೌನ್ ಬೆಚ್ಚಿದೆ. ಧರ್ಮಶಾಲಾದ ಖಾಸಗಿ ಕಟ್ಟಡವೊಂದರಲ್ಲಿ ಶವ ಪತ್ತೆಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಜ್ಞರು, ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತಿದೆ ಎಂದು ಎಸ್ಎಸ್ ಪಿ ಕಾಂಗ್ರಾ ವಿಮುಕ್ತ್ ರಂಜನ್ ಹೇಳಿದ್ದಾರೆ.

Bollywood Actor Asif Basra found dead in Dharmashala

ಅನುರಾಗ್ ಕಶ್ಯಪ್ ಅವರ ಬ್ಲ್ಯಾಕ್ ಫ್ರೈಡೇ, ಲಮ್ಹಾ, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಕೈ ಪೋಚೆ ಎಕ್ ವಿಲನ್, ಹಿಚ್ಕಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. Mahatma v/s Gandhi ರಂಗ ಪ್ರಯೋಗದಲ್ಲಿ ತೊಡಗಿಕೊಂಡು ಉತ್ತಮ ಹೆಸರು ಮಾಡಿದ್ದರು. 2020ರ ಹೋಸ್ಟೇಜಸ್ ಟಿವಿ ಸರಣಿಯಲ್ಲಿ ಅಸ್ಘರ್ ನಬಿ ಪಾತ್ರದಲ್ಲಿ ಮಿಂಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+