ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆ ಯುದ್ಧ ವಿಮಾನಕ್ಕೆ ಇಂಧನ ತುಂಬಲಿದೆ ಪ್ರಯಾಣಿಕ ವಿಮಾನ!

|
Google Oneindia Kannada News

ನವದೆಹಲಿ, ಏಪ್ರಿಲ್ 07; ಯುದ್ಧ ವಿಮಾನಗಳಿಗೆ ಹಾರಾಟ ನಡೆಸುವಾಗಲೇ ಇಂಧನ ಭರ್ತಿ ಮಾಡುವ ರಿಫಿಲ್ಲರ್ ಖರೀದಿ ಮಾಡಲು ಭಾರತ ಪ್ರಯತ್ನ ನಡೆಸಿತ್ತು. ಈಗ ಪ್ರಯಾಣಿಕರು ಸಂಚಾರ ನಡೆಸುವ ಬೋಯಿಂಗ್ 767 ವಿಮಾನಗಳನ್ನು ಟ್ಯಾಂಕರ್ ಆಗಿ ಪರಿವರ್ತನೆ ಮಾಡಲು ಮುಂದಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್) ಈ ಕುರಿತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಯಾಣಿಕರ ವಿಮಾನವನ್ನು ಬಹು ಉಪಯೋಗಿ ಟ್ಯಾಂಕರ್ ಟ್ರಾನ್ಸ್‌ಪೋರ್ಟ್‌ ವಿಮಾನವಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ಕುರಿತು ಬುಧವಾರ ಹೆಚ್‌ಎಎಲ್ ಘೋಷಣೆ ಮಾಡಿದೆ.

ಭಾರತೀಯ ವಾಯುಪಡೆ ಬಲ ಹೆಚ್ಚಿಸುವ ವಿಮಾನ ಖರೀದಿಗೆ ಅನುಮೋದನೆ ಭಾರತೀಯ ವಾಯುಪಡೆ ಬಲ ಹೆಚ್ಚಿಸುವ ವಿಮಾನ ಖರೀದಿಗೆ ಅನುಮೋದನೆ

ಈ ಒಪ್ಪಂದದ ಅನ್ವಯ ಹೆಚ್‌ಎಎಲ್ ಪ್ರಯಾಣಿ ವಿಮಾನಗಳನ್ನು ಮಾರ್ಗ ಮಧ್ಯೆಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬುವ ಮತ್ತು ಕಾರ್ಗೋ ಸಂಚಾರಕ್ಕೆ ಅನುಕೂಲವಾಗುವಂತಹ ವಿಮಾನವಾಗಿ ಪರಿವರ್ತನೆ ಮಾಡಲಿದೆ.

ಹಾವೇರಿ ಜಿಲ್ಲೆ ಹಳ್ಳಿಯ ಪ್ರತಿಭೆ ಈಗ ಭಾರತೀಯ ವಾಯುಪಡೆ ಪೈಲಟ್ ಹಾವೇರಿ ಜಿಲ್ಲೆ ಹಳ್ಳಿಯ ಪ್ರತಿಭೆ ಈಗ ಭಾರತೀಯ ವಾಯುಪಡೆ ಪೈಲಟ್

Boeing 767 Passenger Aircraft To Convert As Mid Air Refuellers For Military

ಈ ಒಪ್ಪಂದದಂತೆ ಬೋಯಿಂಗ್ 767 ಪ್ರಯಾಣಿಕ ವಿಮಾನವನ್ನು ಇಂಧನ ತುಂಬಿಸುವ ಟ್ಯಾಂಕರ್‌ ಆಗಿ ಪರಿವರ್ತನೆ ಮಾಡಲಾಗುತ್ತದೆ. ಇಟಲಿ ಮತ್ತು ಜಪಾನ್ ಸೇನೆಗಳಲ್ಲಿ ಇದೇ ಮಾದರಿಯ ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

ವಾಯುಪಡೆಯ ಸಾಮರ್ಥ್ಯವೃದ್ಧಿಗೆ ಪಣ; ವಾಯುಪಡೆ ಮುಖ್ಯಸ್ಥವಾಯುಪಡೆಯ ಸಾಮರ್ಥ್ಯವೃದ್ಧಿಗೆ ಪಣ; ವಾಯುಪಡೆ ಮುಖ್ಯಸ್ಥ

ಬೋಯಿಂಗ್ ಕೆಸಿ-46 ಪೆಗಾಸಸ್ ಎಂಬ ಮಾರ್ಗ ಮಧ್ಯೆ ವಿಮಾನಕ್ಕೆ ಇಂಧನ ತುಂಬಿಸುವ ಟ್ಯಾಂಕರ್ ಹೊಂದಿದೆ. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ ಈ ಮಾದರಿ ಉದ್ಯಮದಲ್ಲಿ ಪಳಗಿದ ಕಂಪನಿಯಾಗಿದ್ದು, ಬೋಯಿಂಗ್ 767 ವಿಮಾನವನ್ನು ಪರಿವರ್ತನೆ ಮಾಡಲಿದೆ.

ಭಾರತೀಯ ಸೇನೆ ಯುದ್ಧ ವಿಮಾನಗಳಿಗೆ ಮಾರ್ಗ ಮಧ್ಯೆ ಇಂಧನ ಭರ್ತಿ ಮಾಡುವ ತಂತ್ರಜ್ಞಾನಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದೆ. ಈಗ ಮಾಡುತ್ತಿರುವ ಪ್ರಯತ್ನ ಸಫಲವಾದರೆ ಯುದ್ಧ ವಿಮಾನ ಇಂಧನ ಭರ್ತಿಗೆ ಲ್ಯಾಂಡ್ ಆಗದೇ ನಿರಂತರ ಹಾರಾಟ ನಡೆಸಬಹುದಾಗಿದೆ.

ಭಾರತ ಪ್ರಸ್ತುತ 6 ರಷ್ಯಾದ ಇಲ್ಯೂಷಿನ್-78 ಟ್ಯಾಂಕರ್‌ಗಳನ್ನು ಉಪಯೋಗ ಮಾಡುತ್ತಿದೆ. ಇದನ್ನು 2003ರಲ್ಲಿ ಮೊದಲು ಪರಿಚಯಿಸಲಾಯಿತು. ಆದರೆ ಇದು ನಿರ್ವಹಣಾ ವೆಚ್ಚ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ.

ಬೋಯಿಂಗ್ ಮತ್ತು ಏರ್ ಬಸ್ ಮೂಲಕ ಹೊಸ ಟ್ಯಾಂಕರ್ ಖರೀದಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಭಾರತ ಫ್ರಾನ್ಸ್‌ ಜೊತೆ ಎ330 ವಿವಿಧ ಉಪಯೋಗಿ ಟ್ಯಾಂಕರ್ ಬಾಡಿಗೆಗೆ ಪಡೆಯಲು ಮಾತುಕತೆ ನಡೆಸುತ್ತಿದೆ. ಇದಕ್ಕೆ ಫ್ರೆಂಚ್ ವಾಯುಸೇನೆಯೇ ತರಬೇತಿ ನೀಡಬೇಕಿದೆ.

ಈ ಬಾಡಿಗೆ ಕರಾರು ಒಪ್ಪಂದ ಸಹ ಕೇವಲ ಸೀಮಿತ ಅವಧಿಯದ್ದು. ಆದರೆ ಪ್ರಯಾಣಿಕ ವಿಮಾನವನ್ನು ಟ್ಯಾಂಕರ್ ಆಗಿ ಪರಿವರ್ತನೆ ಮಾಡುವುದು ಕಡಿಮೆ ವೆಚ್ಚದಾಯಕವಾಗಿದೆ. ಹೊಸ ಟ್ಯಾಂಕರ್ ಖರೀದಿ ಮಾಡುವುದಕ್ಕಿಂತ ಇದು ಉತ್ತಮ ಎಂಬ ಅಭಿಪ್ರಾಯವಿದೆ.

6 ವಿಮಾನಗಳು ಪರಿವರ್ತನೆ; ಭಾರತ 6 ಪ್ರಯಾಣಿಕ ವಿಮಾನಗಳನ್ನು ಟ್ಯಾಂಕರ್ ಆಗಿ ಪರಿವರ್ತನೆ ಮಾಡಲಿದೆ. ಈ ಬೆಳವಣಿಗೆ ಏರ್‌ ಬಸ್‌ಗೆ ಹಿನ್ನಡೆ ಉಂಟು ಮಾಡಿದೆ. ಏರ್ ಬಸ್ ಭಾರತೀಯ ಸೇನೆಗೆ ಮಾರ್ಗ ಮಧ್ಯೆ ಇಂಧನ ಭರ್ತಿ ಮಾಡುವ ಟ್ಯಾಂಕರ್ ಪೂರೈಕೆ ಮಾಡುವ ಕಂಪನಿಗಳಲ್ಲಿ ಮೊದಲ ಸಾಲಿನಲ್ಲಿತ್ತು.

ಈಗ ಆಗಿರುವ ಒಪ್ಪಂದ ಹೆಚ್‌ಎಎಲ್ ಮತ್ತು ಐಎಐ ನಡುವಿನದ್ದು. ಆದರೆ ಮುಂಬರುವ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನದ ಅಗತ್ಯವಿದ್ದರೆ ಅದಕ್ಕೆ ಬೋಯಿಂಗ್‌ನಿಂದ ನೆರವು ಪಡೆಯಲಾಗುತ್ತದೆ. ಬೋಯಿಂಗ್‌ ವಿಮಾನದ ಮೂಲ ತಯಾರಕರು ಆದ ಕಾರಣ ಅವರ ನೆರವನ್ನು ಸಹ ಕೇಳಲಾಗುತ್ತದೆ.

English summary
India looking to convert existing Boeing 767 passenger aircraft into tankers which will use as mid-air refuellers for its military.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X