ಸುಜ್ವಾನದಲ್ಲಿ ಮತ್ತೋರ್ವ ಸೈನಿಕನ ಮೃತದೇಹ ಪತ್ತೆ

ಸುಜ್ವಾನ್, ಫೆಬ್ರವರಿ 13: ಜಮ್ಮು-ಕಾಶ್ಮೀರದ ಸುಜ್ವಾನ್ ನಲ್ಲಿ ಭಾರತೀಯ ಸೇನೆಯ ಮತ್ತೋರ್ವ ಸೈನಿಕನ ಮೃತದೇಹ ಪತ್ತೆಯಾಗಿದೆ. ಇಲ್ಲಿನ ಸೇನಾ ನೆಲೆಯ ಮೇಲೆ ಫೆ.11ರಂದು ಭಾನುವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇದುವರೆಗೆ ಆರು ಸೈನಿಕರು ಮತ್ತು ಓರ್ವ ನಾಗರಿಕ ಮೃತರಾಗಿದ್ದಾರೆ.

ಸೇನಾ ನೆಲೆಯ ಫ್ಯಾಮಿಲಿ ಕ್ವಾಟ್ರಸ್ ವೊಂದರಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದು, ಈಗಲೂ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಲೇ ಇದ್ದರೂ, ಭಯೋತ್ಪಾದಕರನ್ನು ಸೆರೆ ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ.

ಶ್ರೀನಗರದ ಕರಣ್ ಕ್ಯಾಂಪ್ ನಲ್ಲಿಯೂ ಕಾರ್ಯಾಚರಣೆ ಮುಂದುವರಿದಿದ್ದು, ಇಲ್ಲಿ ಫೆ.12 ರಂದು ಸೈನಿಕರೊಬ್ಬರು ಹುತಾತ್ಮರಾಗಿದ್ದರು. ಜಮ್ಮು ಕಾಶ್ಮೀರದ ರಾಯ್ಪುರದಲ್ಲೂ ಕಾರ್ಯಾಚರಣೆ ಮುಂದುವರಿದಿದೆ.

Body of one more jawan found in Sunjwan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+