• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಾದ್ಯಂತ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ

|

ನವದೆಹಲಿ, ಮೇ 5: ಈಶಾನ್ಯ ದೆಹಲಿ ಪ್ರದೇಶವೊಂದನ್ನು ಬಿಟ್ಟು, ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಗೃಹಸಚಿವಾಲಯ(MHRD) ಆದೇಶವನ್ನು ಹೊರಡಿಸಿದೆ. ಈ ಆದೇಶ ಸಿಬಿಎಸ್ ಇಯ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅನ್ವಯವಾಗಲಿದೆ.

   ಪೋಷಕರಿಂದ ಹಣ ವಸೂಲಿ ಮಾಡಬೇಡಿ ಎಂದು ಖಾಸಗಿ ಶಾಲೆಗಳಿಗೆ ವಾರ್ನಿಂಗ್ ಕೊಟ್ಟ ಸರ್ಕಾರ..! | Suresh Kumar | Education

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಆದರೆ, ಕರ್ನಾಟಕದ ಎಸ್ಎಸ್ಎಲ್ ಸಿ ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಕರ್ನಾಟಕದ ರಾಜ್ಯ ಪಠ್ಯಕ್ರಮದಂತೆ ನಡೆಯುವ ಪರೀಕ್ಷೆ ಬಗ್ಗೆ ಜೂನ್ ತಿಂಗಳಿನಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

   ಲಾಕ್ಡೌನ್ 3.0 ಮುಗಿಯುತ್ತಿದ್ದಂತೆ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ

   ಟ್ವಿಟ್ಟರಲ್ಲಿ ಈ ಬಗ್ಗೆ ಮೇ 5ರಂದು ತಿಳಿಸಿರುವ MHRD, ದೇಶದೆಲ್ಲೆಡೆ ಪರೀಕ್ಷೆ ರದ್ದುಪಡಿಸಲಾಗಿದೆ, ದೆಹಲಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗಾಗಿ 10ದಿನಗಳ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗುತ್ತದೆ ಎನ್ನಲಾಗಿದೆ.

   ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್ (ಸಿಬಿಎಸ್ ಇ) ಕೂಡಾ ಈ ಮುಂಚೆ ನೀಡಿದ ಪ್ರಕಟಣೆಯಂತೆ ಕ್ಲಾಸ್ 12 ಪರೀಕ್ಷೆ ನಡೆಸುವ ಬಗ್ಗೆ ಮಾತ್ರ ಚಿಂತನೆ ನಡೆಸಲಾಗಿದೆ ಎಂದು ತಿಳಿಸಲಾಗಿತ್ತು. ವಿದೇಶದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಣಿಸಿದ್ದರು. ಈ ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯವಾಗಲಿದೆ.

   ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಆರಂಭವಾಗುತ್ತಿದ್ದಂತೆ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಸಿಬಿಎಸ್ಇ ಮುಂದೂಡಿತ್ತು.

   ಜೆಇಇ ಪರೀಕ್ಷೆ: ಜೆಇಇ ಮುಖ್ಯ ಪರೀಕ್ಷೆ ಜುಲೈ 18 ರಿಂದ 23, ಮೆಡಿಕಲ್ ಪ್ರವೇಶಕ್ಕಾಗಿ ಇರುವ ನೀಟ್ ಪರೀಕ್ಷೆ ಜುಲೈ 26 ರಂದು ನಡೆಸಲಾಗುತ್ತದೆ.

   READ IN ENGLISH

   English summary
   The Ministry of Human Resource Development (MHRD) on Tuesday announced that no board examinations will be held for the class 10 students nationwide, except for the students from North-East Delhi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X