Get Updates
Get notified of breaking news, exclusive insights, and must-see stories!

BMC Elections 2026: ಬಿಜೆಪಿ ಮೈತ್ರಿಕೂಟದ ಆರ್ಭಟಕ್ಕೆ ನಡುಗಿದ ಠಾಕ್ರೆ ಸಹೋದರರು, ಕೈ ಪಡೆ ಎಡವಿದ್ದೆಲ್ಲಿ?

ನವದೆಹಲಿ: ಮಹಾರಾಷ್ಟ್ರ ರಾಜಕೀಯ ಪಕ್ಷಗಳ ಚಿತ್ತವನ್ನು ಕದ್ದಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೇರಿ 29 ಪುರಸಭೆಗಳ ಚುನಾವಣೆಯ ಭವಿಷ್ಯ ಶುಕ್ರವಾರ ಹೊರ ಬಿದ್ದಿದೆ. ಈ ಚುನಾವಣೆ ಮೂಲಕ ಬಿಜೆಪಿಯು ಮತ್ತಷ್ಟು ಆಳಕ್ಕೆ ಬೇರು ಬಿಟ್ಟಿದೆ. ಈ ಚುನಾವಣೆ ಸ್ಥಳೀಯ ಸಂಸ್ಥೆಗಳ ಭವಿಷ್ಯಕ್ಕೆ ಮಾತ್ರವಲ್ಲದೆ ರಾಜ್ಯದ ಆಡಳಿತಾರೂಢ ಉದ್ಧವ್ ಠಾಕ್ರೆ ಮತ್ತವರ ಮೈತ್ರಿ ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿತ್ತು. ಅದರಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಮೈತ್ರಿಕೂಟ ಜನರ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಎರಡು ದಶಕಗಳ ಬಳಿಕ ಠಾಕ್ರೆ ಕುಟುಂಬದ ಕುಡಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಚುನಾವಣಾ ಅಖಾಡದಲ್ಲಿ ಕೈ ಕೈ ಹಿಡಿದು ಕಣಕ್ಕೆ ಇಳಿದಿದ್ದರೂ ಸಹ ಪ್ರಯತ್ನ ಫಲಿಸಲಿಲ್ಲ. ಕಾಂಗ್ರೆಸ್‌ ಸಹ ಬಿಜೆಪಿ ಆರ್ಭಟಕ್ಕೆ ಮುಗುಚಿ ಬಿದ್ದಿದೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಬಂಡಲ್‌ಗಟ್ಟಲೇ ಪೇಪರ್‌ಗಳನ್ನು ಹಿಡಿದು ನೋಟ್‌ ಚೋರಿ ಎಂದು ಗಂಟೆಗಟ್ಟಲೇ ಭಾಷಣ ಬಿಗಿಯುತ್ತಿದ್ದ ರಾಹುಲ್ ಗಾಂಧಿ ಮತ್ತು ಕೈ ನಾಯಕರ ಹೇಳಿಕೆಗೆ ಮಹಾರಾಷ್ಟ್ರದ ಮತದಾರರು ಕವಡೇ ಕಾಸಿನ ಕಿಮ್ಮತ್ತನ್ನು ಸಹ ನೀಡದೇ ಅಧಿಕಾರದಿಂದ ದೂರವಿಟ್ಟಿದ್ದಾರೆ. ಠಾಕ್ರೆ ಮತ್ತು ಕಾಂಗ್ರೆಸ್ ಎಡವಿದ್ದೆಲ್ಲಿ, ಈ ಫಲಿತಾಂಶದ ಪರಿಣಾಮವೇನು?

BMC Polls Results 2026 BJP Alliance Crush Thackeray-Congress Alliance Analysis Report

ನಡೆಯದ ನೋಟ್‌ ಚೋರಿ ಕಮಾಲ್

ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ದೂರಿದ್ದರು. ಈ ಸಂಬಂಧ ಅವರು ನಡೆಸಿದ್ದ ಅಭಿಯಾನಕ್ಕೆ ಹಿನ್ನಡೆ ಆಗಿತ್ತು. ಈಗಾಗಲೇ ಬೇರೆ ಕಡೆಗಳಲ್ಲಿ ಗ್ಯಾರಂಟಿ ಘೋಷಣೆಗಳನ್ನು ಮಾಡಿ ಗೆದ್ದು ಮಂದಹಾಸ ಬೀರಿದ್ದ ಕಾಂಗ್ರೆಸ್‌, ಮಹಾರಾಷ್ಟ್ರದಲ್ಲಿ ತಲೆಯ ಮೇಲೆ ಕೈ ಇಟ್ಟುಕೊಳ್ಳುವಂತೆ ಆಗಿದೆ. ಪ್ರತಿ ಬಾರಿ ಚುನಾವಣೆ ಆಯೋಗವನ್ನೆ ದೂರುತ್ತ ಕುಳಿತ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆ ರಣತಂತ್ರ ಹೆಣೆಯುವಲ್ಲಿ ವಿಫಲವಾಗಿದ್ದು ಸ್ಪಷ್ಟವಾಗಿದೆ.

ಕಾಂಗ್ರೆಸ್‌ನ ಇಂದಿನ ಚುನಾವಣೆ ಸೋಲು ಮುಂಬರಲಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಚುನಾವಣೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಬಿಜೆಪಿ ಭರವಸೆಗಳ ಮಹಾರಾಷ್ಟ್ರದಲ್ಲಿ ಈಡೇರಿಲ್ಲ ಎನ್ನುತ್ತಲೇ ಬಂದಿದ್ದ ಠಾಕ್ರೆ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಜನ ಸ್ಥಳೀಯ ಚುನಾವಣೆಗಳಲ್ಲಿ ತಿರಸ್ಕರಿಸಿದ್ದಾರೆ. ಜನರು ಠಾಕ್ರೆ ಆಡಳಿತದಿಂದ ಬೇಸತ್ತಿದ್ದರು ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಇತ್ತ ಜನರು ಬಿಜೆಪಿ-ಶಿವಸೇನೆ (ಠಾಕ್ರೆ)-ಎನ್‌ಸಿಪಿ (ಅಜಿತ್) ಮೈತ್ರಿಕೂಟಕ್ಕೆ ಬಹುಪರಾಕ್ ಹೇಳಿದ್ದಾರೆ.

ಬಿಜೆಪಿಗೆ ಬೂಸ್ಟ್‌ ನೀಡುತ್ತಾ ಗೆಲುವು?

ಬಿಎಂಸಿ ಫಲಿತಾಂಶದಿಂದ ತಮಿಳುನಾಡು, ಅಸ್ಸಾಂ, ಪುದಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಹುಮ್ಮಸ್ಸಿನಿಂದ ಪಾಲ್ಗೊಳ್ಳುವಂತೆ ಬಿಜೆಪಿಗೆ ಉತ್ತೇಜನ ನೀಡಿದೆ. ಈ ಗೆಲುವು ಕೇಸರಿ ಪಡೆ ಕಾರ್ಯಕರ್ತರಿಗೆ ಬೂಸ್ಟ್ ನೀಡಿದೆ. ಆದರೆ ಕಾಂಗ್ರೆಸ್‌ಗೆ ಈ ಫಲಿತಾಂಶವು ಚಿಂತೆ ತಂದಿದೆ.

ಬಿಜೆಪಿ ಈ ಹಿಂದೆ ಮಹಾರಾಷ್ಟ್ರ ಚುನಾವಣೆ ವೇಳೆ ನೀಡಿದ್ದ ಭರವಸೆ ಮೇಲೆ ಹೆಚ್ಚಿನ ಗಮನ ಹರಿಸಿತ್ತು. ಅದರಲ್ಲಿ ಒಂದಷ್ಟು ಭರವಸೆ ಈಡೇರಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಪರ ಜನರು ಒಲವು ಹೊಂದಿದ್ದರು. ಇತ್ತ ಗ್ಯಾರಂಟಿ ಯೋಜನೆಯ ಮೇಲೆ ನೆಚ್ಚಿಕೊಂಡಿದ್ದ ಕಾಂಗ್ರೆಸ್ ನಮ್ಮ ಯೋಜನೆಗಳೇ ಸಾಕು ಜನರು ನಮಗೆ ಮತ ಹಾಕುತ್ತಾರೆ. ಮತ ಕಳ್ಳತನ ನಡೆದಿದೆ, ಚುನಾವಣೆಯಲ್ಲಿ ಪಾದರ್ಶಕವಾಗಿಲ್ಲ ಎಂದು ಆರೋಪಿಸಿದರೆ ತಾವು ಗೆಲ್ಲುತ್ತೇವೆ ಎಂದುಕೊಂಡಿದ್ದ ಕಾಂಗ್ರೆಸ್‌ ಸೋಲು ಕಂಡಿದೆ. ಈವರೆಗಿನ ತಪ್ಪು ತಿದ್ದಿಕೊಂಡು, ಹೊಸ ರಣತಂತ್ರ ರೂಪಿಸಿ ಗಟ್ಟಿ ಹೆಜ್ಜೆ ಇಟ್ಟರೆ ಮುಂಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲಲೂಬಹುದು.

ಠಾಕ್ರೆ ಮೈತ್ರಿಕೂಟ ಎಡವಿದ್ದೆಲ್ಲಿ?

ಇನ್ನೂ 25 ವರ್ಷಗಳಿಂದ ಮಹಾರಾಷ್ಟ್ರ ಪಾಲಿಕೆಗಳ ಅಧಿಕಾರ ಹಿಡಿದ್ದ ಉದ್ಧವ್ ಠಾಕ್ರೆ ಅವರು ಚುನಾವಣೆ ಹಿತದೃಷ್ಟಿಯಿಂದ ಸಹೋದರ ರಾಜ್ ಠಾಕ್ರೆ (ಮಹಾರಾಷ್ಟ್ರ ನವನಿರ್ಮಾಣ ಸೇನೆ-ಎಂಎನ್‌ಎಸ್) ಜೊತೆಗೆ ಕೈಜೋಡಿಸಿದರು. ರಾಜ್ ಠಾಕ್ರೆ ಈ ಹಿಂದೆ ಅಣ್ಣಾಮಲೈ ಅಲ್ಲ ರಸಮಲೈ! ಎಂದು ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಹೇಳಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಇಂದಿನ ಬಿಎಂಸಿ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ನಾಯಕರು ರಸಮಲೈ ಫೋಟೋ ಹಾಕಿ ಟಾಕ್ರೆಗೆ ಟಾಂಗ್ ನೀಡಿದ್ದಾರೆ. ಅವರ ಸೋಲನ್ನು ಟೀಕಿಸಿದರು.

ಅಣ್ಣಾಮಲೈ ಅವರನ್ನು ಅಣಕಿಸುತ್ತ ಠಾಕ್ರೆ ಇತ್ತೀಚಿಗೆ ತಮಿಳುನಾಡಿನಿಂದ ಯಾರೋ ರಸಮಲೈ ಮುಂಬೈಗೆ ಬಂದಿದ್ದರು. ಮುಂಬೈ ಮಹಾರಾಷ್ಟ್ರದ ನಗರವಲ್ಲ, ಮುಂಬೈಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ಇವರು ಯಾರು, ಅವರಿಗೂ ಮುಂಬೈಗೂ ಏನು ಸಂಬಂಧವಿದೆ ಎಂದು ಕಿಡಿ ಕಾರಿದ್ದರು. ಅದಕ್ಕಾಗಿಯೇ ಬಾಳಾಸಾಹೇಬರು ಹಟಾವೊ ಲುಂಗಿ ಬಜಾವೊ ಪುಂಗಿ ಎಂದು ಹೇಳಿದ್ದರು ಎಂದು ವ್ಯಂಗ್ಯವಾಡಿದ್ದರು. ಠಾಕ್ರೆಯ ಈ ಹೇಳಿಕೆಗಳು, ಸ್ಥಳೀಯ ಮಟ್ಟದಲ್ಲಿ ಠಾಕ್ರೆ ಆಡಳಿತ ವಿರೋಧಿ ಅಲೆಗೆ ಜನರ ನಿರಾಸೆಗೊಂಡಿದ್ದರು. ಹೀಗಾಗಿಯೇ ಜನರು ಈ ಬಾರಿ ಬಿಜೆಪಿ ಮೈತ್ರಿಗೆ ಅಧಿಕಾರ ನೀಡುವ ಮೂಲಕ ಠಾಕ್ರೆ ಸಹೋದರರಿಗೆ ಪಾಠ ಕಲಿಸಿದ್ದಾರೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+