ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬ್ಲಾಕ್ ನರೇಂದ್ರ ಮೋದಿ' ಅಭಿಯಾನಕ್ಕೆ ಟ್ವಿಟ್ಟರ್ ನಲ್ಲಿ ಜನಸಾಗರ!

ಗೌರಿ ಲಂಕೇಶ್ ಹತ್ಯೆಯ ನಂತರ ಕೆಲವು ವಿಕೃತ, ಟ್ರೋಲ್ ಅಕೌಂಟ್ ಗಳನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ. #BlockNarendraModi ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದ್ದು

|
Google Oneindia Kannada News

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ಹರಿದು ಬಂದ ಕೆಲವೊಂದು ವಿಕೃತ ಮತ್ತು ಟ್ರೋಲ್ ಅಕೌಂಟ್ ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಫಾಲೋ ಮಾಡುತ್ತಿರುವುದಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

#BlockNarendraModi ಹ್ಯಾಷ್ ಟ್ಯಾಗ್ ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಮೋದಿ ಪರ ಮತ್ತು ವಿರೋಧ ಚರ್ಚೆಗಳು ತಾರಕಕ್ಕೇರಿದೆ. ಗೌರಿ ಲಂಕೇಶ್ ಹತ್ಯೆಗೆ ಸಂತೋಷ ಪಟ್ಟು, ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾದ ಒಂದೆರಡು ಟ್ವೀಟ್ ಅಕೌಂಟುಗಳನ್ನು ಮೋದಿ ಹಿಂಬಾಲಿಸುತ್ತಿರುವುದು ಟ್ವಿಟ್ಟಿಗರ ಕೋಪಕ್ಕೆ ಕಾರಣ.

'ಸಿದ್ದು ಸಾಕು': ಸರ್ಕಾರದ ವೈಫಲ್ಯಕ್ಕೆ ಟ್ವಿಟ್ಟಿಗರಿಂದ ಕೂಗು'ಸಿದ್ದು ಸಾಕು': ಸರ್ಕಾರದ ವೈಫಲ್ಯಕ್ಕೆ ಟ್ವಿಟ್ಟಿಗರಿಂದ ಕೂಗು

ಬೆಳಗ್ಗೆಯಿಂದಲೇ ಟ್ರೆಂಡಿಂಗ್ ನಲ್ಲಿರುವ ಈ ಹ್ಯಾಷ್ ಟ್ಯಾಗ್ ನಲ್ಲಿ ವಿನಾಕಾರಣ ಪ್ರಧಾನಿಯನ್ನು ಎಳೆದು ತರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿರುವುದು ಒಂದೆಡೆಯಾದರೆ, ಇದೊಂದು 'ಪೇಯ್ಡ್ ಟ್ರೆಂಡಿಂಗ್' ಎನ್ನುವ ಟ್ವೀಟ್ ಗಳೂ ಹರಿದುಬರುತ್ತಿವೆ.

ಈ ಅಭಿಯಾನ ಆರಂಭವಾದ ನಂತರ ತುಂಬಾ ಜನ ನರೇಂದ್ರ ಮೋದಿಯವರ ವೈಯಕ್ತಿಕ ಅಕೌಂಟ್ ಅನ್ನು ಅನ್ ಫಾಲೋ ಮಾಡುತ್ತಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಪ್ರಧಾನಿ ಮೋದಿಗೆ ಸುಮಾರು 34 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಗಾರ್ಮೆಂಟ್ ಸಂಸ್ಥೆ ನಡೆಸುತ್ತಿರುವ ನಿಖಿಲ್ ದಧೀಚಿ ಎನ್ನುವ ವ್ಯಕ್ತಿ ಗೌರಿ ಲಂಕೇಶ್ ಹತ್ಯೆಯಾದ ದಿನ, ಗೌರಿ ಲಂಕೇಶ್ ಸಾವಿಗೆ ಕೆಟ್ಟಪದಗಳನ್ನು ಬಳಸಿ ಟ್ವೀಟ್ ಮಾಡಿದ್ದ. ಈತನ ಅಕೌಂಟ್ ಅನ್ನು ಮೋದಿ ಫಾಲೋ ಮಾಡುತ್ತಿದ್ದಾರೆ. ಕೆಲವೊಂದು ಟ್ವೀಟ್ ಸ್ಯಾಂಪಲ್, ಮುಂದೆ ಓದಿ..

ಕೆಟ್ಟ ಪದ ಪ್ರಯೋಗಿಸಿ ಟ್ವೀಟ್ ಮಾಡುವಂತಹ ವ್ಯಕ್ತಿಗಳು

ಕೆಟ್ಟ ಪದ ಪ್ರಯೋಗಿಸಿ ಟ್ವೀಟ್ ಮಾಡುವಂತಹ ವ್ಯಕ್ತಿಗಳು

ಕೆಟ್ಟ ಪದ ಪ್ರಯೋಗಿಸಿ ಟ್ವೀಟ್ ಮಾಡುವಂತಹ ಇಂತಹ ವ್ಯಕ್ತಿಗಳನ್ನು ನರೇಂದ್ರ ಮೋದಿ ಫಾಲೋ ಮಾಡುತ್ತಿರುವುದು ಅವಿವೇಕತನ ಎನ್ನುವ ಟ್ವೀಟ್

ಕೆಟ್ಟ ಪದಗಳನ್ನು ಬಳಸುವ ವ್ಯಕ್ತಿಯನ್ನು ಫಾಲೋ ಮಾಡುವವರು ನನ್ನ ಪ್ರಧಾನಿಯಲ್ಲ.

ಕೆಟ್ಟ, ಅಸಂಬದ್ದ ಪದಗಳನ್ನು ಬಳಸುವ ವ್ಯಕ್ತಿಯನ್ನು ಫಾಲೋ ಮಾಡುವ ವ್ಯಕ್ತಿ ನನ್ನ ಪ್ರಧಾನಿಯಲ್ಲ.

ಮನುಷ್ಯನೊಬ್ಬ ಸತ್ತಾಗ ಅದನ್ನು ಸಂಭ್ರಮಿಸುವ ವ್ಯಕ್ತಿಗಳು

ಮನುಷ್ಯನೊಬ್ಬ ಸತ್ತಾಗ ಅದನ್ನು ಸಂಭ್ರಮಿಸುವ ವ್ಯಕ್ತಿಗಳು

ಕೀಳು ಪದ ಪ್ರಯೋಗ, ದ್ವೇಷ, ಮನುಷ್ಯನೊಬ್ಬ ಸತ್ತಾಗ ಅದನ್ನು ಸಂಭ್ರಮಿಸುವ ವ್ಯಕ್ತಿಯನ್ನು ಫಾಲೋ ಮಾಡುವ ವ್ಯಕ್ತಿಯನ್ನು ಬ್ಲಾಕ್ ಮಾಡುವುದೇ ಸೂಕ್ತ.

ಬೆಂಬಲಕ್ಕಿಂತ ವಿರೋಧವೇ ಹೆಚ್ಚಾಗುತ್ತಿದೆ

ಬೆಂಬಲಕ್ಕಿಂತ ವಿರೋಧವೇ ಹೆಚ್ಚಾಗುತ್ತಿದೆ

ಈ ಟ್ವಿಟ್ಟರ್ ಅಭಿಯಾನಕ್ಕೆ ಬೆಂಬಲಕ್ಕಿಂತ ವಿರೋಧವೇ ಹೆಚ್ಚಾಗುತ್ತಿದೆ. ವಿರೋಧಿಗಳು ಟ್ವಿಟ್ಟರ್ ನಲ್ಲೂ ಸೋಲು ಅನುಭವಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 25 ಸೀಟೂ ಸಿಗುವುದಿಲ್ಲ, ಏಕೆಂದರೆ ಟ್ರೆಂಡಿಂಗ್ ಮಾಡಲು ಸಮಯ ವ್ಯರ್ಥ ಮಾಡುವವರಿಗೆ ಹೇಗೆ ವೋಟ್ ಹಾಕಲು ಸಾಧ್ಯ?

ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು

ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕ್ರೈಂ ನಡೆದರೆ ಅಲ್ಲಿನ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು, ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯಗಳಲ್ಲಿ ಕ್ರೈಂ ನಡೆದರೆ ಪ್ರಧಾನಿ ರಾಜೀನಾಮೆ ನೀಡಬೇಕು.

ಪ್ರಧಾನಿಗೆ ಸ್ವಲ್ಪ ಗೌರವ ಕೊಡುವುದನ್ನು ಮೊದಲು ಕಲಿಯಿರಿ

ಪ್ರಧಾನಿಗೆ ಸ್ವಲ್ಪ ಗೌರವ ಕೊಡುವುದನ್ನು ಮೊದಲು ಕಲಿಯಿರಿ

ಈ ಸುಂದರ ದೇಶವನ್ನು ಹಾಳುಮಾಡಬೇಡಿ, ಪ್ರಧಾನಿಗೆ ಸ್ವಲ್ಪ ಗೌರವ ಕೊಡುವುದನ್ನು ಮೊದಲು ಕಲಿಯಿರಿ. ಬ್ಲಾಕ್ ನರೇಂದ್ರ ಮೋದಿ ಏನು ಇಂಜಿನಿಯರ್ ಸರ್ಟಿಫಿಕೇಟ್ ಪಡೆದ ಹಾಗೇ ಅಲ್ಲ.

English summary
#BlockNarendraModi, which began as a protest against what is seen as the Indian PM tacit support for abusive Hindu right-wing trolls, was trending on twitter. This came days after the murder of senior journalist Gauri Lankesh in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X