ಕೊಚ್ಚಿಯ ಶಿಪ್ ಯಾರ್ಡ್ ನಲ್ಲಿ ಸ್ಫೋಟ: 5 ಸಾವು, 11 ಮಂದಿಗೆ ಗಾಯ
ಕೊಚ್ಚಿ, ಫೆಬ್ರವರಿ 13: ಕೇರಳದ ಕೊಚ್ಚಿಯ ಶಿಪ್ ಯಾರ್ಡ್ ನಲ್ಲಿ ಸ್ಫೋಟ ಸಂಭವಿಸಿದ್ದು, 5 ಜನ ಮೃತರಾಗಿದ್ದಾರೆ.
11 ಜನ ಗಾಯಗೊಂಡಿದ್ದಾರೆ.
Four killed in blast at #Cochin #Shipyard: https://t.co/dHEy3Bi18x
— biju govind (@bijugovind) February 13, 2018
ಶಿಪ್ ಯಾರ್ಡ್ ನಲ್ಲಿ ಹಡಗೊಂದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಡಗಿನ ವಾಟರ್ ಟ್ಯಾಂಕ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ಮೂಲಗಳ ಪ್ರಕಾರ ಇನ್ನೂ ಇಬ್ಬರು ಹಡಗಿನಲ್ಲೇ ಸಿಲುಕಿಹಾಕಿಕೊಂಡಿದ್ದಾರೆ.. ಗಾಯಗೊಂಡವರನ್ನು ಕೊಚ್ಚಿಯ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ರವಾನಿಸಲಾಗಿದೆ.












Click it and Unblock the Notifications