ಸ್ವಿಸ್ ಬ್ಯಾಂಕಲ್ಲಿ ಅತ್ತೆ-ಸೊಸೆಯರ ಭರ್ಜರಿ ಜುಗಲಬಂದಿ

ಬೆಂಗಳೂರು, ಮೇ. 26 : ವಿದೇಶದಲ್ಲಿ ಹಣ ಕೂಡಿಸಿಟ್ಟಿರುವ ಭಾರತೀಯ ಕಾಳ ಧನಿಕರ ಕರಾಳ ಮುಖ ಬಯಲಾಗುತ್ತಿದೆ. ಇಬ್ಬರು ಘಟಾನುಘಟಿ ಮಹಿಳಾಮಣಿಗಳು ಸೇರಿದಂತೆ ಐವರು ಬಿಲಿಯಾಧಿಪತಿಗಳ ಹೆಸರುಗಳನ್ನು ಸ್ವಿಟ್ಜರ್ಲೆಂಡ್ ಸರಕಾರ ಕಡೆಗೂ ಅಧಿಕೃತವಾಗಿ ಬಯಲು ಮಾಡಿದೆ.

ಹಾಗೆ ನೋಡಿದರೆ, ಅಕ್ರಮವಾಗಿ ಸ್ವಿಸ್ ಬ್ಯಾಂಕುಗಳಲ್ಲಿ ಕಾಳಧನವನ್ನು ಪೇರಿಸಿಟ್ಟಿರುವ ನೂರಕ್ಕೂ ಹೆಚ್ಚು ಭಾರತೀಯರ ಹೆಸರುಗಳು ಅನಧಿಕೃತವಾಗಿ ಬಟಾಬಯಲಾಗಿದೆ. ಈಗ ಅಧಿಕೃತವಾಗಿಯೇ ಹೆಸರುಗಳು ಬಯಲಾಗಿರುವುದರಿಂದ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಬೇಕು ಎಂಬ ಹೋರಾಟಕ್ಕೆ ಬಲ ಬಂತಂತಾಗಿದೆ.

ಕುರುಡು ಕಾಂಚಾಣಕ್ಕೆ ಗಂಡು, ಹೆಣ್ಣು ಎಂಬ ಭೇದವೇ ಇಲ್ಲ. ಯಾರಿಗೆ ಬೇಕಾದರೂ ಅದು ಒಲಿಯಬಹುದು. ಒಂದು ಅಂದಾಜಿನ ಪ್ರಕಾರ, ಭಾರತೀಯರು 500 ಬಿಲಿಯನ್ ಡಾಲರಿನಷ್ಟು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿದ್ದಾರೆ. ಎಲ್ಲ ಒಟ್ಟಾರೆ ಸೇರಿಸಿದರೆ ಭಾರತೀಯರ ಪಾಲೇ ಹೆಚ್ಚು. [2 ಮಹಿಳೆ ಸೇರಿದಂತೆ ಐವರು ಭಾರತೀಯರ ಹೆಸರು ಔಟ್]

Black money holders : Who are Sneh Lata and Sangita Sawhney

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತಂತೆ! ಇನ್ನು ಹಣದ ಮದವೇರಿರುವ ಈ ಮಹಿಳಾಮಣಿಗಳು ಬಾಯಿಬಿಡದೆ ಇರುತ್ತಾರಾ? ಅಲ್ಲ, ಅಷ್ಟೆಲ್ಲ ದುಡ್ಡು ತಗೊಂಡು ಏನು ಮಾಡ್ತಾರೋ? ಹೋಗುವಾಗ ಬೆತ್ತಲೆ, ಬರುವಾಗ ಬೆತ್ತಲೆ, ಬಂದು ಹೋಗುವ ನಡುವೆ ಬರೀ ಕತ್ತಲೆ!

ಅಷ್ಟೊಂದು ಹಣವನ್ನು ಕದ್ದು ಸ್ವಿಸ್ ಬ್ಯಾಂಕಿಗೆ ಸಾಗಿಸಿರುವ ಈ ಕೋಟ್ಯಾಧಿಪತ್ನಿಯರು ಸ್ನೇಹಲತಾ ಸಾಹ್ನಿ ಮತ್ತು ಸಂಗೀತಾ ಸಾಹ್ನಿ. ಇಬ್ಬರೂ ಒಂದೇ ಕುಟುಂಬದವರು. ತೆರಿಗೆ ಕಟ್ಟದೆ ಸ್ವಿಸ್ ಬ್ಯಾಂಕಿಗೆ ಸಾಗಿಸುವುದೇ ಇವರ ಫ್ಯಾಮಿಲಿ ಬಿಸಿನೆಸ್ಸು. ಇವರಿಬ್ಬರು ಯಾರು, ಯಾವಾಗಿಂದ ಈ ದಂಧೆ ನಡೆಸುತ್ತಿದ್ದಾರೆ, ಬ್ಯಾಂಕಲ್ಲಿ ಎಷ್ಟಿಟ್ಟಿದ್ದಾರೆ? ಸಂಕ್ಷಿಪ್ತ ವಿವರಗಳು ಇಲ್ಲಿವೆ.

ಸ್ನೇಹ ಲತಾ ಸಾಹ್ನಿ : ಜನ್ಮದಿನ ಅಕ್ಟೋಬರ್ 3, 1942. ಸಾಹ್ನಿ ಟೈರ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಭೂಷಣ ಲಾಲ್ ಸಾಹ್ನಿ ಅವರ ಹೆಂಡತಿಯಾಗಿರುವ ಸ್ನೇಹ ಲತಾ ಸಾಹ್ನಿ ತಮ್ಮ ಗಂಡನ ಜೊತೆ ಜಂಟಿ ಖಾತೆಯನ್ನು ಸ್ವಿಸ್ ಬ್ಯಾಂಕಲ್ಲಿ ಹೊಂದಿದ್ದಾರೆ. 1970ರಿಂದ ಸ್ವಿಸ್ ಬ್ಯಾಂಕುಗಳಲ್ಲಿ ಕಾಳಹಣವನ್ನು ಸಾಗಿಸಲು ಆರಂಭಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ, 16.7 ಕೋಟಿ ರು.ನಷ್ಟು ಹಣವನ್ನು ಅವರು ಶೇಖರಿಸಿಟ್ಟಿದ್ದಾರೆ. ಅಧಿಕೃತವಾಗಿ ಎಷ್ಟು ಹಣ ಕೊಳೆಯುತ್ತಿದೆ ಎಂಬುದು ನಿಖರವಾಗಿ ತಿಳಿಯಬೇಕಿದೆ.

ಸಂಗೀತಾ ಸಾಹ್ನಿ : ಇಲ್ಲೊಂದು ತಮಾಷೆಯ ಸಂಗತಿಯಿದೆ. ಬೇಕಿದ್ದರೆ ತಮಾಷೆಯಾಗಿ ತೆಗೆದುಕೊಳ್ಳಿ ಅಥವಾ ಗಂಭೀರವಾಗಿ ಪರಿಗಣಿಸಿ. ಅರವಿಂದ್ ಕೇಜ್ರಿವಾಲ್ ತಯಾರಿಸಿದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಪಟ್ಟಿಯಲ್ಲಿ ಪ್ರವೀಣ್ ಸಾಹ್ನಿ ಹೆಸರು ಮುಂಚೂಣಿಯಲ್ಲಿತ್ತು. ಇದೇ ಪ್ರವೀಣ್ ಪತ್ನಿಯೇ, ಕಪ್ಪು ಹಣವನ್ನು ಸ್ವಿಸ್ ಬ್ಯಾಂಕುಗಳಲ್ಲಿ ಕೂಡಿಟ್ಟಿರುವ ಸಂಗೀತಾ ಸಾಹ್ನಿ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವವನ ಪತ್ನಿಯೇ ಭ್ರಷ್ಟೆ!

ಸಾಹ್ನಿ ಟೈರ್ಸ್ ಕಂಪನಿಯಲ್ಲಿ ಅಪ್ಪ ಭೂಷಣ್ ಲಾಲ್ ಮತ್ತು ಅಮ್ಮ ಸ್ನೇಹಲತಾ ಜೊತೆ ಜಂಟಿ ಖಾತೆಯನ್ನು ಈ ಪ್ರವೀಣ್ ಸಾಹ್ನಿ ಹೊಂದಿದ್ದಾನೆ. ಪ್ರವೀಣ್ ಸಲ್ಲಿಸಿದ ಆದಾಯ ತೆರಿಗೆ ಘೋಷಣೆಪತ್ರದಲ್ಲಿ, ಸಾಹ್ನಿ ಟೈರ್ಸ್ ಕಾರ್ಯನಿರ್ವಹಿಸುತ್ತಿಲ್ಲ, ಸಿಕ್ಕಾಪಟ್ಟೆ ಲಾಸಲ್ಲಿದೆ ಅಂತ ಕುಂಬಳಕಾಯಿ ಉರುಳಿಸಿದ್ದ. ಇಂಥ ಕುಟುಂಬಕ್ಕೆ ಸೇರಿದ ಅತ್ತೆ-ಸೊಸೆಯರ ಹೆಸರುಗಳು ಅಧಿಕೃತ ಸ್ವಿಸ್ ಕಾಳಧನಿಕರ ಪಟ್ಟಿಯಲ್ಲಿ ಕೇಳಿಬಂದಿದೆ. ಇವರ ಮೇಲೆ ಸರಕಾರ ಕ್ರಮ ಜರುಗಿಸುವುದಾ? ಅಲ್ಲಿ ಕೂಡಿಟ್ಟ ಹಣ ಭಾರತಕ್ಕೆ ಮರಳಿ ತರುವುದಾ? ಎಂದು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+