ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ದೇಶದಲ್ಲಿ 5,500 ದಾಟಿದ ಬ್ಲ್ಯಾಕ್ ಫಂಗಸ್ ಪ್ರಕರಣ, 126 ಜನ ಬಲಿ

|
Google Oneindia Kannada News

ನವದೆಹಲಿ, ಮೇ 21: ಕೊರೊನಾ ವೈರಸ್‌ನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಭಯಾನಕ ಶಿಲೀಂದ್ರ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರದವರೆಗಿನ ಅಧಿಕೃತ ಮಾಹಿತಿ ಲಭ್ಯವಾಗಿದ್ದು 5,500 ಜನರು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗಿದ್ದಾರೆ. ಒಟ್ಟು 126 ಜನ ಇದಕ್ಕೆ ಪ್ರಾಣ ಕಳೆದುಕೊಂಡಿದ್ದು ಮಹಾರಾಷ್ಟ್ರವೊಂದರಲ್ಲೇ 90 ಸಾವಿನ ಪ್ರಕರಣಗಳು ದೃಢಪಟ್ಟಿದೆ.

ಬ್ಲ್ಯಾಕ್ ಫಂಗಸ್ ಪ್ರಕರಣಗಳ ಚಿಕಿತ್ಸೆಗೆ ಕೂಡ ಈಗ ಔಷಧಿಗಳ ಕೊರತೆ ಎದುರಾಗುತ್ತಿದೆ. ಲಿಪೊಸೋಮಲ್ ಆಂಪೋಟೇರಿಸಿನ್ ಬಿ ಎಂಬ ಆ್ಯಾಂಟಿ ಫಂಗಲ್ ಡ್ರಗ್ ಇದಕ್ಕೆ ಅಗತ್ಯವಿರುವ ಔಷಧಿಯಾಗಿದೆ. ಇದರ ಕೊರತೆ ಕೂಡ ಈಗ ಚಿಕಿತ್ಸೆಯ ದೃಷ್ಟಿಯಿಂದ ಸವಾಲಾಗುತ್ತಿದೆ.

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಬಳಸುವ ಔಷಧಿ ಬೆಲೆ ಕಡಿತ ಅವಶ್ಯಕ- ಬಾಂಬೆ ಹೈಕೋರ್ಟ್ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಬಳಸುವ ಔಷಧಿ ಬೆಲೆ ಕಡಿತ ಅವಶ್ಯಕ- ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ರಾಜ್ಯಕ್ಕೆ 1.50 'ಲಿಪೊಸೋಮಲ್ ಆಂಪೋಟೇರಿಸಿನ್ ಬಿ' ವಯಲ್ಸ್‌ಗಳ ಅಗತ್ಯವಿದ್ದು 16,000 ವಯಲ್ಸ್‌ಗಳನ್ನು ಮಾತ್ರವೇ ಸ್ವೀಕರಿಸಿದೆ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಔಷಧವನ್ನು ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್ ಕರೆದಿದೆ. ಒಡಿಶಾ ಸರ್ಕಾರ ಈ ಔ‍ಷಧಿ ಸಂಪೂರ್ಣ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರ ಶುಕ್ರವಾರ ಕಳುಹಿಸುವ ವಯಲ್ಸ್‌ಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ.

Black Fungus Cases in India: 5,500 Total cases and 126 Deaths Reported as on 19th May

ಕರ್ನಾಟಕದ ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು ರಾಜ್ಯದಲ್ಲಿ 'ಲಿಪೊಸೋಮಲ್ ಆಂಪೋಟೇರಿಸಿನ್ ಬಿ'ಯ ಸಾವಿರದ ಆಸುಪಾಸಿನಲ್ಲಿದ್ದು 20,000 ವಯಲ್ಸ್‌ಗಳಿಗಾಗಿ ಆರ್ಡರ್ ಮಾಡಲಾಗಿದೆ ಎಂದಿದ್ದಾರೆ. ದೆಹಲಿ, ತೆಲಂಗಾಣ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಗುಜರಾತ್, ಕರ್ನಾಟಕ ಮತ್ತು ಕೇರಳ ಈ ಹತ್ತು ರಾಜ್ಯಗಳು ಲಿಪೊಸೋಮಲ್ ಆಂಪೋಟೇರಿಸಿನ್ ಬಿ ಔಷಧಿಯ ಕೊರತೆಯನ್ನು ಅನಿಭವಿಸುತ್ತಿವೆ.

ಬ್ಲ್ಯಾಕ್ ಫಂಗಸ್ ಪ್ರಕರಣಗಳಿಂದ ಸಾವನ್ನಪ್ಪುತ್ತಿರುವ ರಾಜ್ಯಗಳಲ್ಲಿ ಹರ್ಯಾಣ ಈಗ ಎರಡನೇ ಸ್ಥಾನದಲ್ಲಿದ್ದು ಈವರೆಗೆ 14 ಜನರು ಇಲ್ಲಿ ಪ್ರಾಣಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ 8 ಜನರು ಬ್ಲ್ಯಾಕ್ ಫಂಗಸ್‌ನಿಂದ ಸಾವನ್ನಪ್ಪಿದ್ದು ಎಲ್ಲಾ ಪ್ರಕರಣಗಳು ಕೂಡ ಲಕ್ನೋದಲ್ಲಿ ವರದಿಯಾಗಿದೆ.

ರಾಜಸ್ಥಾನ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ನಂತರ ಉಳಿದ ಕೆಲ ರಾಜ್ಯಗಳು ಕೂಡ ಈಗ ಇದೇ ಹಾದಿ ಹಿಡಿದಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಈ ಬಗ್ಗೆ ಸೂಚನೆಯನ್ನು ಕಳುಹಿಸಿದ ನಂತರ ಕರ್ನಾಟಕ ಸಹಿತ ಪಂಜಾಬ್, ಹರ್ಯಾಣ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕೂಡ ಬ್ಲ್ಯಾಕ್ ಫಂಗಸ್‌ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದ್ದು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಸೇರಿಸಲಾಗಿದೆ.

English summary
The deadly black fungus or mucormycosis has affected close to 5,500 people across India till Wednesday and killed 126 of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X