ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ ಜನತೆಗೆ ಮೋದಿ ಮೇಲಿರುವ ಗೌರವಕ್ಕೆ ಸಾಕ್ಷಿ: ರಾಜೆ

|
Google Oneindia Kannada News

ನವಲ್ಗಢ(ರಾಜಸ್ಥಾನ). ಡಿಸೆಂಬರ್ 18: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವು ಜನರಿಗೆ ಪ್ರಧಾನಿ ಮೋದಿಯವರ ನಾಯಕತ್ವದ ಮೇಲಿರುವ ಗೌರವಕ್ಕೆ ಸಾಕ್ಷಿ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹೇಳಿದ್ದಾರೆ.

ಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿ

ನ.9 ರಂದು ಹಿಮಾಚಲ ಪ್ರದೇಶ ಮತ್ತು ಡಿ.9 ಮತ್ತು 14 ರಂದು ಗುಜರಾತ್ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿತ್ತು. ಇಂದು (ಡಿ.18) ಫಲಿತಾಂಶ ಹೊರಬಿದ್ದಿದ್ದು, ಎರಡೂ ರಾಜ್ಯಗಳಲ್ಲೂ ಬಿಜೆಪಿ ಬಹುಮತ ಗಳಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತ ನಡೆತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಗೆಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

LIVE: ಹಿಮಾಚಲ ಪ್ರದೇಶ ಮುನ್ನಡೆ: ಬಿಜೆಪಿ 43, ಕಾಂಗ್ರೆಸ್ 21, ಇತರೆ 4 LIVE: ಹಿಮಾಚಲ ಪ್ರದೇಶ ಮುನ್ನಡೆ: ಬಿಜೆಪಿ 43, ಕಾಂಗ್ರೆಸ್ 21, ಇತರೆ 4

BJP's victory in Gujarat-Himachal Pradesh: CMs express happiness

ಯೋಗಿ ಆದಿತ್ಯನಾಥ್

"ಗುಜರಾತಿನ ಗೆಲುವುದು ಹಲವು ಪ್ರಶ್ನೆಗಳಿಗೆ ಉತ್ತರ ನೀಡೀದೆ. ಕಾಂಗ್ರೆಸ್ಸಿನ ಕೆಲವರು ಗುಜರಾತಿನ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಬಿಜೆಪಿಯ ಗೆಲುವು ಆ ಪ್ರಶ್ನೆಗೆ ಉತ್ತರ ನೀಡಿದೆ. ಅಭಿವೃದ್ಧಿಯ ಬದಲು ಓಲೈಕೆ ಕಡೆಗೇ ಹೆಚ್ಚು ಗಮನ ನೀಡಿದ್ದರಿಂದ ಹಿಮಾಚಲ ಪ್ರದೇಶ ಮತ್ತು ಗುಜರಾತಿನಲ್ಲಿ ಕಾಂಗ್ರೆಸ್ ಸೋತಿದೆ" ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಎರಡೂ ರಾಜ್ಯದ ಬಿಜೆಪಿ ನಾಯಕರನ್ನೂ, ಪ್ರಧಾನಿ ಮೋದಿಯವರನ್ನೂ ಅಭಿನಂದಿಸಿದ್ದಾರೆ.

ಚುನಾವಣಾ ಫಲಿತಾಂಶ ಮೋದಿ ನಾಯಕತ್ವದ ಗೆಲುವುಚುನಾವಣಾ ಫಲಿತಾಂಶ ಮೋದಿ ನಾಯಕತ್ವದ ಗೆಲುವು

BJP's victory in Gujarat-Himachal Pradesh: CMs express happiness

ಶಿವರಾಜ್ ಸಿಂಗ್ ಚೌಹಾಣ್

"ಪ್ರಧಾನಿ ನರೇಂದ್ರ ಮೋದಿಯವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈ ದೇಶದ ಜನರು ಪ್ರಗತಿಗೆ ಒತ್ತುಕೊಡುತ್ತಾರೆ ಎಂಬುದು ಈ ಮೂಲಕ ದೃಢವಾಗಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಜಯ ಸಾಧಿಸಿದವರಿಗೆ ನನ್ನ ಅಭಿನಂದನೆಗಳು. ಈ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಸಾಕಷ್ಟು ಶ್ರಮಿಸಿದ್ದಾರೆ. ನಮ್ಮನ್ನು ಗೆಲ್ಲಿಸಿದ ಜನರಿಗೆ 'ವಿಕಾಸ'ದ ಆಡಳಿತ ನೀಡುವಲ್ಲಿ ನಾವೆಂದೂ ಹಿಂದೆ ಬೀಳುವುದಿಲ್ಲ" ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಯೋಗಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

English summary
After BJP's victory in Gujarat and Himachal Pradesh assembly elections chief minsiters of BJP ruled states express their happiness to media. Rajastan CM Vasundara Raje, Madhya Pradesh CM Shivraj Singh Chouhan, Uttara Pradesh CM Yogi Adityanath speak with media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X