ನವೆಂಬರ್ 8ರಂದು ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನ

ಕಳೆದ ವರ್ಷ ನವೆಂಬರ್ 8ರಂದು ನೋಟು ನಿಷೇಧ ಮಾಡಿದ್ದರ ವಾರ್ಷಿಕೋತ್ಸವ ಪ್ರಯುಕ್ತ ಕಪ್ಪು ಹಣ ವಿರೋಧಿ ದಿನ ಆಚರಿಸಲು ಬಿಜೆಪಿ ಮುಂದಾಗಿದೆ. ಈ ವಿಚಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಹಿರಂಗಪಡಿಸಿದರು.

ಮಾಧ್ಯಮಗಳ ಜತೆಗೆ ಬುಧವಾರ ಮಾತನಾಡಿದ ಅವರು, ಡಿಜಿಟಲ್ ವ್ಯವಹಾರ ಹಾಗೂ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚು ಮಾಡುವುದರಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲ ಅವಕಾಶಗಳಿದ್ದವು. ಆದರೆ ನಾನು ನೆನಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಒಂದೇಒಂದು ಹೆಜ್ಜೆಯನ್ನು ಸಹ ಕಪ್ಪು ಹಣದ ವಿರುದ್ಧ ಕಾಂಗ್ರೆಸ್ ಇಡಲಿಲ್ಲ ಎಂದು ಜೇಟ್ಲಿ ಟೀಕಿಸಿದರು.

BJP will celebrate ‘Anti-Black Money Day’ on November 8, says Arun Jaitley

ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಚುನಾವಣೆ ಆಯೋಗದ ಗುಣಗಾನ ಮಾಡಿತ್ತು ಕಾಂಗ್ರೆಸ್. ಆಗಲೇ ಟೀಕೆ ಆರಂಭಿಸಿದೆ. ಚುನಾವಣೆ ಆಯೋಗವು ಕಾನೂನು ಪರವಾಗಿ ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ ಎಂದರು.

ನಗದು ಯಾರಿಗೆ ಸೇರಿದ್ದು ಎಂಬುದು ಮೊದಲಿಗೆ ಪತ್ತೆಯಾಗಬೇಕು. ಹಣ ಯಾರಿಗಾದರೂ ಸೇರಿರಬಹುದು. ಹಾಗೆ ನಗದು ಜಮೆಯಾದ ನಂತರ ಕಾನೂನು ಬದ್ಧವಾಗಿ ವ್ಯವಸ್ಥೆಯೊಳಗೆ ಬರುತ್ತದೆ ಎಂದು ಜೇಟ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+