ತಿರುಚ್ಚಿ: ಬಿಜೆಪಿ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಮೋದಿ ಭಾಷಣ
ತಿರುಚ್ಚಿ
(ತಮಿಳುನಾಡು), ಸೆಪ್ಟೆಂಬರ್ 27: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಿರುಚ್ಚಿಯಲ್ಲಿ ಗುರುವಾರ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. id="toptextpromo"> id='are-slot-1' class='oiad oi-axt oiadv'>ತಮಿಳುನಾಡು
ರಾಜಕೀಯ ಮತ್ತು ಭಾರತದ ರಾಜಕೀಯವನ್ನು ಬಲ್ಲವರು ಒಂದು ಚೆನ್ನಾಗಿ ತಿಳಿದುಕೊಳ್ಳಬೇಕು ಏನೆಂದರೆ ದೇಶದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುತ್ತಿದೆ. ತಮಿಳುನಾಡು ರಾಜಕೀಯದ ಶಕ್ತಿ ಎಷ್ಟು ಬಲಿಷ್ಠವಾಗಿದೆ ಅಂದರೆ ದೆಹಲಿಯಲ್ಲಿ ಖಂಡಿತ ಅದು ಬದಲಾವಣೆ ತರಬಲ್ಲದು. ಇದು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಎಚ್ಚರಿಕೆಯ ಗಂಟೆ ಎಂದು ಪ್ರಧಾನಿ ಅಭ್ಯರ್ಥಿ ಮೋದಿ ಅವರು ಗುರುವಾರ ತಮ್ಮ ಭಾಷಣದಲ್ಲಿ ಎಚ್ಚರಿಸಿದ್ದಾರೆ. ಭಾಷಣದ ಸಂಕ್ಷಿಪ್ತ ರೂಪ:id='are-slot-2' class='oiad oi-axt oiadv'>

ತಮಿಳುನಾಡು ಯುವಜನತೆಯನ್ನು ಶ್ಲಾಘಿಸಿದ ಮೋದಿ
ಈ ಹಿಂದೆಯೂ ನಾನು ತಮಿಳುನಾಡಿಗೆ ಬಂದಿದ್ದೆ. ಆದರೆ ನನ್ನ ಇಡೀ ರಾಜಕೀಯ ಚರಿತ್ರೆಯಲ್ಲಿ ಇಷ್ಟೊಂದು ಭಾರಿ ಪ್ರಮಾಣದ ಯುವಕರು ಮತ್ತು ಜನರನ್ನು ನಾನು ಕಂಡಿರಲಿಲ್ಲ. ನೀವು ನನಗೆ ಮತ್ತು ಬಿಜೆಪಿ ಪಕ್ಷಕ್ಕೆ ಹೊಸ ಶಕ್ತಿ/ ಹುಮ್ಮಸ್ಸು ತುಂಬಿದ್ದೀರಿ ಎಂದು ರಾಜ್ಯದ ಯುವಜನತೆಯನ್ನು ಶ್ಲಾಘಿಸಿದರು.

ಕಾಂಗ್ರೆಸ್ ಪಕ್ಷದದ್ದು ಎರಡೆರಡು ನೀತಿ
ಕಾಂಗ್ರೆಸ್ ಇಬ್ಬಗೆಯ/ ಇಬ್ಭಾಗದ ರಾಜಕೀಯ ನಡೆಸುತ್ತಾ ಬಂದಿದೆ. 1947ರಲ್ಲಿ ದೇಶವನ್ನು ಇಬ್ಭಾಗ ಮಾಡಿತು. ಆಡಳಿತದಲ್ಲೂ ಇದೇ ಒಡೆದಾಳುವ ನೀತಿ ಅನುಸರಿಸುವುದು ಕಾಂಗ್ರೆಸ್ ಜಾಯಮಾನ. ಕಾಶ್ಮೀರದಲ್ಲಿ ಸಮಸ್ಯೆಯನ್ನು ಪರಿಹರಿಸದೇ ರಾಜ್ಯವನ್ನೇ 'ಪ್ರತ್ಯೇಕ'ಗೊಳಿಸಿತು. ಇನ್ನು ನೀರಿಗಾಗಿ ಒಂದು ರಾಜ್ಯದ ವಿರುದ್ಧ ಮತ್ತೊಂದು ರಾಜ್ಯವನ್ನು ಎತ್ತಿಕಟ್ಟಿತು. ಭಾಷೆಯ ಹೆಸರಿನಲ್ಲೂ ರಾಜ್ಯಗಳು ಚಿಂದಿಯಾದವು ಎಂದು ಮೋದಿ ವಿಷಾದಿಸಿದರು.

ಹಿಂದೂ-ಮುಸ್ಲಿಮರ ಮನಸ್ತಾಪ ಕಾಂಗ್ರೆಸ್ ಕೊಡುಗೆ!
1857ರಲ್ಲಿ ಇಡೀ ದೇಶ ಒಟ್ಟಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಆದರೆ ಮುಂದೆ ಸ್ವಾತಂತ್ರ್ಯ ಬರುತ್ತಿದ್ದಂತೆ ಅದು ಹಿಂದೂ ಮತ್ತು ಮುಸ್ಲಿಮರ ನಡುವಣ ಯುದ್ಧವಾಗಿ ಬೇರ್ಪಟ್ಟಿದೆ. ಇದು ಕಾಂಗ್ರೆಸ್ ಕೊಡುಗೆ!

ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ- ಗಾಂಧೀಜೀ ಕರೆಗೆ ಓಗೊಡೋಣ
ಕಾಂಗ್ರೆಸ್ ನೀತಿಯನ್ನು ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ಅಂದೇ ಗ್ರಹಿಸಿದ್ದರು. ಜನಸಾಮಾನ್ಯರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ, ದಾರಿ ತಪ್ಪಿದ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಗಾಂಧೀಜೀ ಅಂದೇ ಕರೆ ನೀಡಿದ್ದರು. ಗಾಂಧೀಜೀ ಅವರ ಈ ಕರೆಗೆ ಓಗೊಡೋಣ.

ಕಾಂಗ್ರೆಸ್ ಪಕ್ಷದಿಂದ ಮುಕ್ತಿ ಪಡೆಯೋಣ
ಇಂತಿಪ್ಪ ಕಾಂಗ್ರೆಸ್ ಪಕ್ಷದಿಂದ ದೂರವಿರುವ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷವನ್ನೇ ದೂರವಿಡಬೇಕು. ಕಾಂಗ್ರೆಸ್ ಪಕ್ಷದಿಂದ ಮುಕ್ತಿ ಪಡೆಯೋಣ

ಆಧಾರ್ ಕಾರ್ಡ್ ರಾಜಕೀಯ- ದುಡ್ಡಿನಿಂದ ಕಾಂಗ್ರೆಸ್ ದೂರವಾಗಲಿ
ಆಧಾರ್ ಕಾರ್ಡ್ ವಿರುದ್ಧ ಆರಂಭದಲ್ಲೇ, ಮೂರು ವರ್ಷಗಳ ಹಿಂದೆಯೇ ನಾನು ದನಿಯೆತ್ತಿದೆ. ಅದು ಬೇಡ. ಗುಜರಾತಿನಂತಹ ಗಡಿ ರಾಜ್ಯದವನಿಂದ ಬಂದ ನಾನು ಆಧಾರ್ ಕಾರ್ಡ್ ಒಳನುಸುಳುಕೋರರಿಗೆ ಹೇಳಿ ಮಾಡಿಸಿದಂತಿರುತ್ತದೆ. ಅದು ಬೇಡ ಎಂದು ನಾನು ಪರಿಪರಿಯಾಗಿ ವಿನಂತಿಸಿದೆ.

ಕಾಂಗ್ರೆಸ್ ಯುಪಿಎ ನನ್ನ ಮಾತಿಗೆ ಕಿವಿಗೊಡಲಿಲ್ಲ
ಆದರೆ ಕಾಂಗ್ರೆಸ್ ಯುಪಿಎ ನನ್ನ ಮಾತಿಗೆ ಕಿವಿಗೊಡಲಿಲ್ಲ. ಆದರೆ ಇಂದು ಸ್ವತಃ ಸುಪ್ರೀಂಕೋರ್ಟೇ ಕೇಂದ್ರ ಸರಜಾರಕ್ಕೆ ಛೀಮಾರಿ ಹಾಕಿದೆ. ಒಳನುಸುಳುಕೋರರಿಗೆಲ್ಲಾ ಹಂಚಿಕೆಯಾಗುತ್ತಿರುವ ಆಧಾರ್ ಕಾರ್ಡ್ ದೇಶದ ಜನತೆಗೆ ಬೇಡ ಎಂದು ಚಡಿಯೇಟು ನೀಡಿದೆ. ಆಧಾರ್ ಕಾರ್ಡ್ ರಾಜಕೀಯ ಮತ್ತು ದುಡ್ಡಿನಿಂದ ಕಾಂಗ್ರೆಸ್ ಇನ್ನಾದರೂ ದೂರವಾಗಲಿ ಎಂದು ಮೋದಿ ಆಶಿಸಿದರು.

ಆಂಗ್ಲ ಭಾಷೆಯಲ್ಲಿ ಮೋದಿ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲ ಭಾಷೆಯಲ್ಲಿ ಮೋದಿ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲ ಭಾಷೆಯಲ್ಲಿ ಮೋದಿ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲ ಭಾಷೆಯಲ್ಲಿ ಮೋದಿ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲ ಭಾಷೆಯಲ್ಲಿ ಮೋದಿ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ













Click it and Unblock the Notifications