ಕಾಂಗ್ರೆಸ್‌ ಕದ ತಟ್ಟುತ್ತಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ?

Posted By:
Subscribe to Oneindia Kannada

ನವದೆಹಲಿ, ನವೆಂಬರ್ 28: ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಆಯ್ಕೆಯಾದ ಬಳಿಕ ಅವರ ಕಸಿನ್ ಬ್ರದರ್ ಬಿಜೆಪಿ ಸಂಸದ, ವರುಣ್‌ ಗಾಂಧಿ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ನೆಹರೂ ಹಾಗೂ ಗಾಂಧಿ ಕುಟುಂಬದ ವೈಮನಸ್ಯ ದೂರಾಗಿಸಲು ವರುಣ್‌ ಗಾಂಧಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ರಾಹುಲ್ ಮುಂದಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ ಒಂದು ವೇಳೆ ರಾಹುಲ್ ಹಾಗೂ ವರುಣ್ ಒಂದಾದರೂ ಸೋನಿಯಾ ಹಾಗೂ ಮನೇಕಾ ಗಾಂಧಿ ನಡುವಿನ ಮುಸುಕಿನ ಗುದ್ದಾಟ ಮುಂದುವರೆಯಲಿದೆ. ಮನೇಕಾ ಎಂದಿಗೂ ಮಗನ ಈ ನಡೆಗೆ ಸಮ್ಮತಿ ಸೂಚಿಸುವುದಿಲ್ಲ ಎಂದಿದ್ದಾರೆ.

 BJP MP Varun Gandhi likely to Join India's Grand Old Party

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರೀತಿಯ ಪುತ್ರ ಸಂಜಯ್‌ ಗಾಂಧಿ ಅವರ ಮಗ ವರುಣ್‌ ಅವರ ತಾಯಿ ಮನೇಕಾ ಗಾಂಧಿ ಅವರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಉತ್ತರ ಪ್ರದೇಶದ ಸುಲ್ತಾನ್‌ಪುರ್‌ ಲೋಕಸಭಾ ಕ್ಷೇತ್ರವನ್ನು ವರುಣ್‌ ಪ್ರತಿನಿಧಿಸುತ್ತಿದ್ದಾರೆ.

ಗಾಳಿಸುದ್ದಿ ಹಬ್ಬಿದ್ದು ಹೀಗೆ: ನವೆಂಬರ್‌ 11ರಂದು ಅಸ್ಸೋಂ ರಾಜಧಾನಿ ಗುವಾಹತಿಯಲ್ಲಿ ಮಾತನಾಡಿದ್ದ ವರುಣ್‌ ಗಾಂಧಿ, 'ತಾವು ಗಾಂಧಿ ಕುಟುಂಬಕ್ಕೆ ಸೇರದೆ ಹೋಗಿದ್ದರೆ 29ನೇ ವಯಸ್ಸಿಗೆ ಲೋಕಸಭಾ ಸದಸ್ಯರೇ ಆಗುತ್ತಿರಲಿಲ್ಲ' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ನಾನು ಫಿರೋಜ್‌ ವರುಣ್‌ ಗಾಂಧಿ. ಆದರೆ, ವರುಣ್‌ ದತ್ತ ಅಥವಾ ವರುಣ್‌ ಘೋಷ್‌ ಅಥವಾ ವರುಣ್‌ ಖಾನ್‌ ಯಾವುದೇ ಇರಲಿ. ಇದು ಮುಖ್ಯವಲ್ಲ. ಎಲ್ಲರಿಗೂ ಸಮಾನಾದ ಅವಕಾಶಗಳು ಸಿಗಬೇಕು. ಇಂತಹ ಭಾರತವನ್ನು ನಾನು ನೋಡಲು ಇಚ್ಛಿಸುತ್ತೇನೆ' ಎಂದು ವರುಣ್ ಹೇಳಿದ್ದರು.

ಇದಕ್ಕೆ ಪೂರಕವಾಗಿ...'ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಥವಾ ಪಕ್ಷದ ಕಚೇರಿ ಮೂಲಕವೇ ವರುಣ್ ಗಾಂಧಿ ಪಕ್ಷ ಸೇರಬಹುದು ಅಥವಾ ಸೋದರಿ ಪ್ರಿಯಾಂಕಾ ಗಾಂಧಿ ಅವರ ಮೂಲಕವಾದರೂ ವರುಣ್ ಗಾಂಧಿ ಅವರು ಕಾಂಗ್ರೆಸ್‌ಗೆ ಸೇರಬಹುದು' ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಜಿ ಮಂಜೂರ್‌ ಅಹಮದ್‌ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MP from Sultanpur Varun Gandhi likely to join India's Grand Old Party Congress and Rahul Gandhi will take call on this reports India Today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ