ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ ಇಬ್ಬರು ನ್ಯಾಯಾಧೀಶರು ನಿರ್ಧರಿಸಲು ಸಾಧ್ಯವಿಲ್ಲ: ಸಲಿಂಗ ವಿವಾಹದ ಕುರಿತು ಬಿಜೆಪಿ ಸಂಸದ ಹೇಳಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್‌ 19: ಕೆಲವು ಎಡ-ಉದಾರವಾದಿಗಳು ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಸೋಮವಾರ ಹೇಳಿದ್ದಾರೆ.

ಇಂತಹ ಯಾವುದೇ ಯತ್ನವನ್ನು ಸರ್ಕಾರ ಬಲವಾಗಿ ವಿರೋಧಿಸಬೇಕಿದೆ ಎಂದು ಒತ್ತಾಯಿಸಿದರು.

ಸಂಸತ್‌ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇಶದ ಸಾಂಸ್ಕೃತಿಕ ನೀತಿಗೆ ವಿರುದ್ಧವಾದ ಯಾವುದೇ ಆದೇಶವನ್ನು ನ್ಯಾಯಾಂಗ ನೀಡದಂತೆ ಮನವಿ ಮಾಡಿದರು.

ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?: ಬಿಜೆಪಿ ಪ್ರಶ್ನೆಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?: ಬಿಜೆಪಿ ಪ್ರಶ್ನೆ

ಭಾರತದಲ್ಲಿ, ಕೆಲವು ಎಡ-ಉದಾರವಾದಿಗಳು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯುವ ಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

BJP MP Sushil Kumar Modi opposes same sex marriage in India

ಭಾರತದಲ್ಲಿ, ಮುಸ್ಲಿಮರ ವೈಯಕ್ತಿಕ ಕಾನೂನು ಸಲಿಂಗ ವಿವಾಹವನ್ನು ಅನುಮೋದಿಸುವುದಿಲ್ಲ ಅಥವಾ ಅಂಗೀಕರಿಸಲಾಗುವುದಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳಿಗೆ ಹಾನಿ ಉಂಟುಮಾಡಲಿದೆ ಎಂದು ತಿಳಿಸಿದರು.

ಇಂತಹ ಮಹತ್ವದ ಸಾಮಾಜಿಕ ವಿಷಯದ ಬಗ್ಗೆ ಕೇವಲ ಇಬ್ಬರು ನ್ಯಾಯಾಧೀಶರು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.

ಈ ವಿಚಾರವಾಗಿ ಸಂಸತ್ತು ಹಾಗೂ ಸಮಾಜದಲ್ಲಿ ಚರ್ಚೆಗಳು ನಡೆಯಬೇಕೆಂದು ಅವರು ಒತ್ತಾಯಿಸಿದರು.

ಸರ್ಕಾರವು ಸಲಿಂಗ ವಿವಾಹದ ವಿರುದ್ಧ ನ್ಯಾಯಾಲಯದಲ್ಲಿ ಬಲವಾಗಿ ವಾದಿಸಬೇಕು ಎಂದು ಹೇಳಿದರು.

BJP MP Sushil Kumar Modi opposes same sex marriage in India

ಡ್ರೋನ್‌ ಸ್ಥಾಪನೆಗೆ ಸಂಸದ ಒತ್ತಾಯ

ಇದೇ ವೇಳೆ, ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ವಿಜಯ್ ಸಾಯಿ ರೆಡ್ಡಿ ಅವರು ವಿಶಾಖಪಟ್ಟಣಂನಲ್ಲಿ ಡ್ರೋನ್ ಸಂಶೋಧನಾ ಸಂಸ್ಥೆ ಸ್ಥಾಪಿಸುವಂತೆ ಒತ್ತಾಯಿಸಿದರು.

ವಿಶೇಷವಾಗಿ ಕೃಷಿ, ರಕ್ಷಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ಡ್ರೋನ್‌ಗಳು ತುಂಬಾ ಉಪಯುಕ್ತವಾಗಿವೆ ಎಂದು ಅವರು ತಿಳಿಸಿದರು.

ಆಂಧ್ರಪ್ರದೇಶದಲ್ಲಿ ಸುಮಾರು 65 ಪ್ರತಿಶತ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರೆಡ್ಡಿ ಹೇಳಿದರು.

ವಿಮಾನ ಸಂಪರ್ಕಕ್ಕೆ ಚಡ್ಡಾ ಒತ್ತಾಯ

ಪಂಜಾಬ್‌ನ ಜನರು ಅನೇಕ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಪಂಜಾಬ್‌ನಿಂದ ಆ ದೇಶಗಳಿಗೆ ವಿಮಾನ ಸಂಪರ್ಕವು ಸಮರ್ಪಕವಾಗಿಲ್ಲ ಎಂದು ಎಎಪಿಯ ರಾಘವ್ ಚಡ್ಡಾ ಹೇಳಿದರು.

English summary
BJP MP Sushil Kumar Modi said that only two judges cannot decide on an important social issue like same-sex marriage,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X