ನಿತೀಶ್ ಗಡ್ಕರಿ ಸವಾಲು ಸ್ವೀಕರಿಸಿ ಕ್ಷೇತ್ರಕ್ಕಾಗಿ 32 ಕೆಜಿ ತೂಕ ಇಳಿಸಿದ ಸಂಸದ!

ಭೋಪಾಲ್, ಅ.18: 'ಒಂದು ಕೆಜಿ ತೂಕ ಇಳಿಸಿದರೆ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿ ರೂಪಾಯಿ ನೀಡುವ ನಿತಿನ್ ಗಡ್ಕರಿ ಅವರ ತೂಕ ಇಳಿಸುವ ಸವಾಲನ್ನು ಸ್ವೀಕರಿಸಿದ್ದ ಮಧ್ಯಪ್ರದೇಶದ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ 32 ಕೆಜಿ ಇಳಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ಕೆಜಿ ತೂಕ ಇಳಿಕೆಗೆ 1000 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಸಂಸದ ಅನಿಲ್ ಫಿರೋಜಿಯಾ ಅವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಸುಮಾರು 32 ಕೆಜಿ ತೂಕವನ್ನು ಇಳಿಸಿದ್ದಾರೆ.

"ನಾನು ಸವಾಲನ್ನು ಸ್ವೀಕರಿಸಿದ್ದೇನೆ. ಹೀಗಾಗಿ ನಾನು ಸುಮಾರು 32 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ" ಎಂದು ಅನಿಲ್ ಫಿರೋಜಿಯಾ ಹೇಳಿದ್ದಾರೆ.

BJP MP Claims He lost 32 KG Weight For development Of The Constituency

ಕಳೆದ ಜೂನ್‌ನಲ್ಲಿ ಕೇಂದ್ರ ಸಚಿವ ಗಡ್ಕರಿ ಅವರು ಪ್ರತಿ ಒಂದು ಕೆಜಿ ತೂಕ ಇಳಿಸಿದರೆ ಅಭಿವೃದ್ಧಿ ಕಾರ್ಯಕ್ಕೆ ₹ 1000 ಕೋಟಿ ನೀಡುವುದಾಗಿ ಬೃಹತ್ ವೇದಿಕೆಯಲ್ಲಿ ಸಂಸದರಿಗೆ ಭರವಸೆ ನೀಡಿದ್ದರು.

ಆಗ ಜೂನ್‌ನಲ್ಲಿ ಮಾತನಾಡಿದ್ದ ಸಂಸದ ಅನಿಲ್ ಫಿರೋಜಿಯಾ, "ಪ್ರಧಾನಿ ನರೇಂದ್ರ ಮೋದಿ ಅವರು 'ಫಿಟ್ ಇಂಡಿಯಾ' ಆಂದೋಲನವನ್ನು ಪ್ರಾರಂಭಿಸಿದ್ದಾರೆ. ನಾನು ಇಳಿಸುವ ಪ್ರತಿ ಕೆಜಿ ತೂಕಕ್ಕೆ ಉಜ್ಜಯಿನಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ₹ 1,000 ಕೋಟಿ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೇದಿಕೆಯ ಮೇಲೆ ನನಗೆ ಹೇಳಿದ್ದಾರೆ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಇಲ್ಲಿಯವರೆಗೆ 15 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ, ನಾನು ಅದನ್ನು ಇನ್ನೂ ಕಡಿಮೆ ಮಾಡುತ್ತೇನೆ. ನನಗೆ ಭರವಸೆ ನೀಡಿದಂತೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ" ಎಂದಿದ್ದರು.

ಈಗ ಸಂಸದ 32 ಕೆಜಿ ತೂಕ ಇಳಿಸಿಕೊಂಡಿದ್ದು, 'ತೂಕ ಕಳೆದುಕೊಂಡರೆ ಉಜ್ಜಯಿನಿ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್‌ ಮೀಸಲಿಡುವುದಾದರೇ, ಕ್ಷೇತ್ರದ ಅಭಿವೃದ್ಧಿಗೆ ನನ್ನ ಫಿಟ್‌ನೆಸ್‌ ಆಡಳಿತ ಮುಂದುವರಿಸಲು ಸಿದ್ಧ' ಎಂದಿದ್ದಾರೆ.

BJP MP Claims He lost 32 KG Weight For development Of The Constituency

ಜೊತೆಗೆ ತಾವು ತೂಕ ಇಳಿಸಲು ಕಟ್ಟುನಿಟ್ಟಾದ ಡಯಟ್ ಚಾರ್ಟ್ ಅನ್ನು ಅನುಸರಿಸುತ್ತೇನೆ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ.

ಫಿರೋಜಿಯಾ ಅವರು ತಮ್ಮ ಫಿಟ್‌ನೆಸ್ ಆಡಳಿತವನ್ನು ವಿವರಿಸುತ್ತಾ, "ನಾನು ಬೆಳಗ್ಗೆ 5.30 ಕ್ಕೆ ಎದ್ದು, ವಾಕಿಂಗ್ ಹೋಗುತ್ತೇನೆ. ಬೆಳಗ್ಗೆ ಓಟ, ವ್ಯಾಯಾಮ ಮತ್ತು ಯೋಗ ಮಾಡುತ್ತೇನೆ. ನಾನು ಆಯುರ್ವೇದ ಡಯಟ್ ಚಾರ್ಟ್ ಅನ್ನು ಅನುಸರಿಸುತ್ತೇನೆ. ಲಘು ಉಪಹಾರವನ್ನು ತೆಗೆದುಕೊಳ್ಳುತ್ತೇನೆ. ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸಲಾಡ್, ಒಂದು ಬೌಲ್ ಹಸಿರು ತರಕಾರಿಗಳು ಮತ್ತು ಒಂದು ರೊಟ್ಟಿಯನ್ನು ತೆಗೆದುಕೊಳ್ಳುತ್ತೇನೆ. ಕೆಲವೊಮ್ಮೆ ನಾನು ಕ್ಯಾರೆಟ್ ಸೂಪ್ ಅಥವಾ ಒಣ ಹಣ್ಣುಗಳನ್ನು ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ.

ಸೋಮವಾರ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಅವರು, "ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ 32 ಕೆಜಿ ತೂಕ ಇಳಿಸಿಕೊಂಡ ಬಗ್ಗೆ ತಿಳಿಸಿದ್ದೇನೆ. ಅದರ ಬಗ್ಗೆ ತಿಳಿದು ಅವರು ತುಂಬಾ ಸಂತೋಷಪಟ್ಟರು. ಭರವಸೆ ನೀಡಿದಂತೆ, ಅವರು ಈ ಪ್ರದೇಶಕ್ಕೆ 2,300 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಅನುಮೋದಿಸಿದ್ದಾರೆ" ಎಂದು ಅನಿಲ್ ಫಿರೋಜಿಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+