ಮೋದಿ ಸಾರಥ್ಯದ ಬಿಜೆಪಿಗೆ ಪ್ರಣಾಳಿಕೆ ಪಟ್ಟಿ ನೀಡಿ
ಬೆಂಗಳೂರು, ಅ. 23: ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿ ಮುಂದಿನ ಲೋಕ ಚುನಾವಣೆಗೆ ಸರ್ವಸಿದ್ಧತೆ ನಡೆಸಿರುವ ಬಿಜೆಪಿ ದೇಶದ ಮಹಾಜನತೆಯ ಅಭಿಪ್ರಾಯ/ಅನಿಸಿಕೆಗಳಿಗೆ ವೇದಿಕೆಯೊದಗಿಸಿದೆ.
2014ರ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಭಾರತದ ಉತ್ತಮ ಭವಿಷ್ಯಕ್ಕಾಗಿ ಹಾಗಾಗಿ ಮತದಾರರು/ ಮಹಾಜನತೆ ತಮಗೆ ತೋಚಿದ ಅಮೂಲ್ಯ ಅನಿಸಿಕೆ/ಅಭಿಪ್ರಾಯಗಳನ್ನು ಪ್ರಣಾಳಿಕೆ ಪಟ್ಟಿಗೆ ಸೇರಿಸಲು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು ಎಂದು ನರೇಂದ್ರ ಮೋದಿ ಅವರೂ ಟ್ವಿಟ್ಟರ್ ಮೂಲಕ ಕೋರಿದ್ದಾರೆ.

ಪಕ್ಷದ websiteಗೆ ಭೇಟಿ ನೀಡಿದರೆ ಅಲ್ಲಿ ಜನ ತಮ್ಮ ಸಲಹೆ/ಸೂಚನೆಗಳನ್ನು ದಾಖಲಿಸಬಹುದಾಗಿದೆ. ದೇಶವಾಸಿಗಳ ಆಶೋತ್ತರಗಳನ್ನು ಈಡೇರಿಸುವಂತಹ ಅದರಲ್ಲೂ ಯುವ ಭಾರತಕ್ಕೆ ಆಸರೆಯಾಗಬಲ್ಲ, ಈಗಿನ ಯುಪಿಎ ಆಡಳಿತ ಓರೆಕೋರೆಗಳನ್ನು ಪ್ರತಿಧ್ವನಿಸುವ ಸಲಹೆ/ಸೂಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ ಎಂದು ಬಿಜೆಪಿ ಕೋರಿದೆ.
ಈಗಿರುವ ಪ್ರಾತಿನಿಧ್ಯಕ ಪ್ರಜಾಪ್ರಭುತ್ವದಿಂದ ಸಕ್ರಿಯ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವಂತಹ ಪ್ರಜಾಪ್ರಭುತ್ವಕ್ಕೆ ಶಿಫ್ಟ್ ಆಗಬೇಕು ಎಂದು ಬಯಸಿರುವ ಮೋದಿ ಬಿಜೆಪಿ ಚುನಾವಣೆ ಪ್ರಮಾಳಿಕೆ ಹೆಚ್ಚು ಅರ್ಥಪೂರ್ಣವಾಗಿರಲಿ ಎಂದು ಬಯಸಿದ್ದಾರೆ.
ಅಂದಹಾಗೆ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಬಿಜೆಪಿ manifesto committee ನಾಯಕತ್ವ ವಹಿಸಿದ್ದಾರೆ. ಸದರಿ website ಮೂಲಕ ಜನ ನೀಡುವ ಸಲಹೆ ಸೂಚನೆಗಳಿಗೆ ಆದ್ಯ ಮಣೆ ಹಾಕಲಾಗುವುದು ಎಂದು ಹೇಳಿರುವ ಬಿಜೆಪಿ ಇದೇ ವೆಬ್ ಸೈಟಿನಲ್ಲಿ ಈ ಹಿಂದೆ 1998, 2004 ಮತ್ತು 2009ರ ಸಾರ್ವತ್ರಿಕ ಚುನಾವಣೆಗಳಲ್ಲೂ ತಾನು ಘೋಷಿಸಿದ್ದ ಪ್ರಣಾಳಿಕೆಯನ್ನು ಲಗತ್ತಿಸಿದೆ. ತಡವೇಕೆ ನಿಮ್ಮ ಅಮೂಲ್ಯ ಸಲಹೆ/ಸೂಚನೆಗಳು ಈ ವೆಬ್ ಸೈಟಿನಲ್ಲಿ ದಾಖಲಾಗಲಿ. ವೆಬ್ ಸೈಟಿಗೆ ದಾರಿ ಯಾವುದಯ್ಯಾ ಅಂದರೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications