• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ದಿಗ್ವಿಜಯಕ್ಕಾಗಿ ಅಮಿತ್ ಶಾಗೆ ಗೃಹ ಮಂತ್ರಿಗಿರಿಯ ಬಳುವಳಿ?

|

ನವದೆಹಲಿ, ಮೇ 24 : ಅಮಿತ್ ಶಾ ಅವರನ್ನು ರಾಜಕೀಯದ 'ಆಧುನಿಕ ಚಾಣಕ್ಯ' ಎಂದರೆ ನಂಬದವರು ಬೇಕಾದಷ್ಟಿದ್ದಾರೆ. ಆದರೆ, ಆದರೆ, ತಾವು ಎಂಥ ಚಾಣಕ್ಯ ಮಾತ್ರವಲ್ಲ, ಎಂಥ ಚಾಣಾಕ್ಷ ಎಂಬುದನ್ನು ಅಮಿತ್ ಶಾ ಅವರು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸಾಬೀತುಪಡಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ 300ರ ಗಡಿ ದಾಟುವಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿನ ಜೊತೆಗೆ, ಅಮಿತ್ ಶಾ ಅವರ ತಂತ್ರಗಾರಿಕೆ ಮತ್ತು ಅವರ ಭಾಗೀದಾರಿಕೆ ಕೂಡ ಅಷ್ಟೇ ಮಹತ್ವದ್ದಾಗಿದೆ. ಈ ಕಾರಣಕ್ಕಾಗಿಯೇ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡರೂ ಅಚ್ಚರಿಯಿಲ್ಲ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ, ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ, ತಂತ್ರಗಾರಿಕೆ ರೂಪಿಸುವಲ್ಲಿ, ಕಾರ್ಯಕರ್ತರನ್ನು ಉತ್ತೇಜಿಸುವಲ್ಲಿ, ವಿರೋಧಿ ಪಕ್ಷದ ಅಭ್ಯರ್ಥಿಗಳನ್ನು ಸೆಳೆಯುವಲ್ಲಿ, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಅಮಿತ್ ಶಾ ಅವರಿಗೆ ಅಮಿತ್ ಶಾ ಅವರೇ ಸಾಟಿ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಿ, ಆ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯ ದರ್ಪವನ್ನು ತಣ್ಣಗಾಗಿಸಿದ್ದಲ್ಲದೆ, ಭಾರತೀಯ ಜನತಾ ಪಕ್ಷ 18 ಸೀಟುಗಳನ್ನು ಗೆಲ್ಲಿಸುವಲ್ಲಿ ಅಮಿತ್ ಶಾ ಅವರ ಕಾರ್ಯವೈಖರಿ ಅದ್ಭುತವಾಗಿ ಕೆಲಸ ಮಾಡಿದೆ.

ಈ ಎಲ್ಲ ಕಾರಣಗಳಿಗಾಗಿ, ನರೇಂದ್ರ ಮೋದಿಯವರ ಬಲಗೈಯಂತಿರುವ ಅಮಿತ್ ಶಾ ಅವರಿಗೆ ಬಳುವಳಿಯಾಗಿ ಕೇಂದ್ರ ಸಂಪುಟದಲ್ಲಿ ಗೃಹ ಮಂತ್ರಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಲೋಕಸಭೆ ಚುನಾವಣೆ ಮಾತ್ರವಲ್ಲ, ಎಲ್ಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿಯೂ ಅಮಿತ್ ಶಾ ಅವರು ಮೋದಿಯವರ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ.

ದೇಹದ ಪ್ರತಿ ಕಣವೂ ಈ ದೇಶಕ್ಕೆ: ಗೆದ್ದ ಮೋದಿಯ ವಿನಮ್ರ ಮಾತುಗಳು

ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಮೂರು ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಮತ್ತೆ ಬಿಜೆಪಿ ಪುಟಿದೇಳುವಲ್ಲಿ ಅಮಿತ್ ಶಾ ಅವರ ತಂತ್ರಗಾರಿಕೆ ಸಾಕಷ್ಟು ಕೆಲಸ ಮಾಡಿದೆ. ಇದಲ್ಲದೆ, ಇನ್ನೂ ಆರು ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಒಂದೂ ಸ್ಥಾನ ಬಿಟ್ಟುಕೊಡದಂತೆ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿದೆ.

ನರೇಂದ್ರ ಮೋದಿಯವರು ವಿಶ್ವಗುರು ಎಂಬುದರಲ್ಲಿ ಅನುಮಾನವೇ ಇಲ್ಲ. ಭಾರತದಲ್ಲಿ ಅವರ ಜನಪ್ರಿಯತೆ ಉತ್ತುಂಗಕ್ಕೇರಿದೆ. ಆದರೆ, ನರೇಂದ್ರ ಮೋದಿಗಿರುವ ವರ್ಚಸ್ಸನ್ನು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಏರಿಸುವಲ್ಲಿ ಅಮಿತ್ ಶಾ ಅವರ ಕಾಣಿಕೆಗೆ ಬೆಲೆ ಕಟ್ಟುವುದು ಕಷ್ಟಸಾಧ್ಯ. ಅವರು ನರೇಂದ್ರ ಮೋದಿಯವರ ಸರಕಾರದ ಸಾಧನೆಯನ್ನು ಅಂಕಿಅಂಶಗಳ ಸಮೇತ ದೇಶದ ಮೂಲೆಮೂಲೆಗೂ ತಲುಪಿಸಿದ್ದಾರೆ. ಇಂಥ ಸಾಧನೆ ಮಾಡಲು ನರೇಂದ್ರ ಮೋದಿಯವರಿಂದ ಮಾತ್ರ ಮಾಡಲು ಸಾಧ್ಯ ಎಂದು ಹೋದಲ್ಲೆಲ್ಲ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರಷ್ಟೇ ಸಾರ್ವಜನಿಕ ಸಮಾವೇಶಗಳಲ್ಲಿ ಅವರು ಭಾಗವಹಿಸಿದ್ದಾರೆ.

English summary
BJP Lok Sabha victory : BJP national president Amit Shah could be the next home minister in Narendra Modi's ministry, for his contribution as a strategist and visionary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X