Get Updates
Get notified of breaking news, exclusive insights, and must-see stories!

ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಹೆಚ್ಚಿದ ಬಲ: 6 ಸದಸ್ಯರು ಪ್ರಮಾಣ ವಚನ ಸ್ವೀಕಾರ

ಲಕ್ನೋ ಏಪ್ರಿಲ್ 21: ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಹೊಸದಾಗಿ ನಾಮನಿರ್ದೇಶನಗೊಂಡ ಆರು ಮಂದಿ ಸದಸ್ಯರು ಗುರುವಾರ ಪ್ರಮಾಣ ವಚನ ಬೋಧಿಸಿದರು. ಗುರುವಾರ ವಿಧಾನಸಭೆಯ ಸಭಾಂಗಣದಲ್ಲಿ ನೂತನವಾಗಿ ನಾಮನಿರ್ದೇಶನಗೊಂಡಿರುವ 6 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಸಭಾಪತಿ ಕುನ್ವರ್ ಮನ್ವೇಂದ್ರ ಸಿಂಗ್ ಅವರು ಪ್ರಮಾಣ ವಚನ ಬೋಧಿಸಿದರು.

ರಜನಿಕಾಂತ್ ಮಹೇಶ್ವರಿ, ಸಾಕೇತ್ ಮಿಶ್ರಾ, ಲಾಲ್ಜಿ ನಿರ್ಮಲ್, ತಾರಿಕ್ ಮನ್ಸೂರ್, ರಾಮ್‌ಸುರತ್ ರಾಜ್‌ಭರ್, ಹಂಸರಾಜ್ ವಿಶ್ವಕರ್ಮ ಅವರು ಸ್ಪೀಕರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಹಲವು ಪ್ರಸಿದ್ಧ ಮುಖಗಳು ಸೇರಿದಂತೆ ಆರು ಮಂದಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿರಲು ಅವಕಾಶ ನೀಡಿದ್ದಾರೆ.

BJP gains strength in Legislative Council: 6 members take oath

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷವು ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಿದೆ. ಪಕ್ಷ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿಸಿ ತಾರಿಕ್ ಮನ್ಸೂರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಮತ್ತೊಂದೆಡೆ, ರಾಮ್‌ಸುರತ್ ರಾಜ್‌ಭರ್ ಮತ್ತು ಹಂಸರಾಜ್ ವಿಶ್ವಕರ್ಮ ಅವರ ನೆಪದಲ್ಲಿ ಪೂರ್ವಾಂಚಲ್‌ನಲ್ಲಿಯೂ ಒಬಿಸಿ ಮತಗಳನ್ನು ಪಡೆಯುವ ಪ್ಲ್ಯಾನ್ ಮಾಡಿದೆ.

ಬಿಜೆಪಿ ಪ್ರಧಾನಿಯವರ ಮಾಜಿ ಸಲಹೆಗಾರ ನೃಪೇಂದ್ರ ಮಿಶ್ರಾ ಅವರ ಮಗನಿಗೆ ಎಂಎಲ್ಸಿ ಸ್ಥಾನ ನೀಡಲಾಗಿದೆ. ಇವರು ದೀರ್ಘಕಾಲದವರೆಗೆ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಇದರಿಂದ ಬಿಜೆಪಿ ಅವರಿಗೆ ಲಾಭ ಕೂಡ ಆಗಿತ್ತು. ಪರಿಣಾಮ ಅವರನ್ನು ಎಂಎಲ್‌ಸಿ ಮಾಡಲಾಯಿತು. ಮೇಲ್ಮನೆಯಲ್ಲಿ ಆರು ಸದಸ್ಯರನ್ನು ನಾಮನಿರ್ದೇಶನ ಮಾಡಿದ ನಂತರ, ಪಕ್ಷವು ಈಗ 3/4 ಬಹುಮತವನ್ನು ಹೊಂದಿದೆ.

BJP gains strength in Legislative Council: 6 members take oath

ಮೇ ವೇಳೆಗೆ ಎಸ್‌ಪಿ ರಾಜ್ಯಾಧ್ಯಕ್ಷ ನರೇಶ್‌ ಉತ್ತಮ್‌ ಪಟೇಲ್‌, ಬಿಎಸ್‌ಪಿ ಎಂಎಲ್‌ಸಿ ಅಂಬೇಡ್ಕರ್‌ ಸೇರಿದಂತೆ 13 ಎಂಎಲ್‌ಸಿಗಳು ನಿವೃತ್ತಿಯಾಗುವ ವೇಳೆಗೆ ಪರಿಷತ್ತಿನ ರಾಜಕೀಯ ಸಮೀಕರಣ ಮತ್ತಷ್ಟು ಬದಲಾಗುವ ಸಾಧ್ಯತೆ ಇದೆ. ಯುಪಿ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಬಲವನ್ನು ಹೊಂದಿವೆ. ಎಸ್‌ಪಿ ಮತ್ತು ಅದರ ಮಿತ್ರಪಕ್ಷ ಆರ್‌ಎಲ್‌ಡಿ ಇನ್ನೆರಡು ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ 36 ಸ್ಥಳೀಯ ಸಂಸ್ಥೆಗಳ ಪೈಕಿ ಬಿಜೆಪಿ 33ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ ಒಂಬತ್ತು ಸ್ಥಾನಗಳನ್ನು ಅವರು ಅವಿರೋಧವಾಗಿ ಗೆದ್ದಿದ್ದರು. ಈ ಹಿಂದೆ, ಈ ಪೈಕಿ 31 ಸ್ಥಾನಗಳನ್ನು 2016 ರಲ್ಲಿ ಎಸ್‌ಪಿ ಹೊಂದಿತ್ತು. ಬ್ರಿಜೇಶ್ ಸಿಂಗ್ ಅವರ ಪತ್ನಿ ಅನ್ನಪೂರ್ಣ ಸಿಂಗ್ ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಅಜಂಗಢದಿಂದ ಸ್ವತಂತ್ರ ಅಭ್ಯರ್ಥಿ ವಿಕ್ರಾಂತ್ ಸಿಂಗ್ ಗೆದ್ದಿದ್ದರೆ, ಪ್ರತಾಪಗಢದಿಂದ ಜನಸತ್ತಾ ದಳ (ಡೆಮಾಕ್ರಟಿಕ್) ಅಭ್ಯರ್ಥಿ ಅಕ್ಷಯ್ ಪ್ರತಾಪ್ ಸಿಂಗ್ ಗೆದ್ದಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 'ಮುಂಬರುವ ನಗರಸಭೆ ಚುನಾವಣೆಯಲ್ಲಿ ಸರಿಯಾದ ನಿರ್ಧಾರ ಕೈಗೊಂಡು ತಮ್ಮ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಬಾರಿ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿ ಇಲ್ಲವಾದಲ್ಲಿ ಐದು ವರ್ಷದಲ್ಲಿ ಮಾಡಿದ ಕೆಲಸ ವ್ಯತಿರಿಕ್ತವಾಗಲಿದೆ' ಎಂದು ಸಿಎಂ ಯೋಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕರನ್ನುದ್ದೇಶಿಸಿ, 'ಮತದಾನ ಮಾಡುವ ಸಹೋದರ ಸಹೋದರಿಯರೇ, ದೊಡ್ಡ ನಿರ್ಧಾರಕ್ಕೆ ಸಮಯ ಬಂದಿದೆ. ರಾಜ್ಯದಲ್ಲಿ ಹಿಡಿತ ಸಾಧಿಸಿರುವ ಕಿಡಿಗೇಡಿಗಳು, ಕ್ರಿಮಿನಲ್‌ಗಳೆಲ್ಲ ಈಗ ಮತ್ತೆ ಕ್ರಿಯಾಶೀಲರಾಗುತ್ತಿದ್ದಾರೆ ಎಂಬುದು ನನ್ನ ಆತಂಕ. ಆ ಜನರು ನಮ್ಮ ಸರ್ಕಾರ ಬರಲಿ ಎಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ' ಎಂದು ಹೇಳಿದರು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+