"ಮೋದಿಗೆ ಸಿಕ್ತು ಮೌಕಾ ಮಾಡಿದ್ದೆಲ್ಲ ದೋಖಾ"
ನವದೆಹಲಿ, ಏ.19: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೈಗೊಂಡಿರುವ ರೈತ ವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡ ಬೃಹತ್ ಸಮಾವೇಶ ಯಶಸ್ವಿಯಾಗಿದೆ. ಸುಮಾರು ಎರಡು ತಿಂಗಳ ನಂತರ ಅಖಾಡಕ್ಕೆ ಇಳಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಅವರ ವಿರುದ್ಧ ಕಿಡಿಕಾರಿ ಭರ್ಜರಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
'ಜಮೀನ್ ವಾಪಸಿ' ಹೆಸರಿನಲ್ಲಿ ಆಯೋಜನೆಗೊಂಡಿರುವ ಕಿಸಾನ್ ಸಮಾವೇಶದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಳಿಂದ ಬಂದಿರುವ ಲಕ್ಷಾಂತರ ರೈತರನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದರು. ನರೇಂದ್ರ ಮೋದಿ ಸರ್ಕಾರದ ಉದ್ದೇಶಿತ ಭೂ ಸ್ವಾದೀನ ಕಾಯ್ದೆ ತಿದ್ದುಪಡಿ ವಿರುದ್ಧ ಎಲ್ಲರೂ ಕಿಡಿ ಕಾರಿದರು. [ರಾಹುಲ್ ನಾಪತ್ತೆಯಾಗಿದ್ದೇಕೆ? ಟ್ವಿಟ್ಟರಿನಲ್ಲಿ ರಹಸ್ಯ ಲೀಕ್]
ಲೋಕಸಭೆ ಅಧಿವೇಶನಕ್ಕೂ ಮುನ್ನ ಡ್ರೆಸ್ ರಿಹರ್ಸಲ್ ನಂತೆ ಕಂಡ ಈ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರೈತರ ವಿರೋಧಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಳ್ಳುತ್ತೇನೆ ಎಂದು ಘೋಷಿಸಿದರು.

ಪ್ರಧಾನಿ ಮೋದಿ ಮಾಡಿದ್ದು ದೋಖಾ
ಲೋಕಸಭೆ ಚುನಾವಣೆಯಲ್ಲಿ ನನಗೆ ಅವಕಾಶ(ಮೌಕಾ) ನೀಡಿ ನಾನು ನಿಮ್ಮ ಬದುಕು ಹಸನಾಗಿಸುತ್ತೇನೆ ಎಂದು ರೈತರ ಮುಂದೆ ಬೇಡಿಕೊಂಡ ಮೋದಿ ಅವರು ಅವಕಾಶ ಸಿಕ್ಕ ಮೇಲೆ ಮಾಡಿದ್ದೆಲ್ಲ ಮೋಸ(ದೋಖಾ).

ಉದ್ಯಮಿಗಳ ಕೈಗೊಂಬೆಯಾಗಿರುವ ಮೋದಿ
ಗುಜರಾತಿನಲ್ಲಿ ಉದ್ಯಮಿಗಳ ಸಖ್ಯ ಬೆಳೆಸಿಕೊಂಡು ಅಲ್ಲಿನ ರೈತರ ಭೂಮಿಯನ್ನು ಕಬಳಿಸಲು ಯೋಜನೆ ರೂಪಿಸಿದ ಮೋದಿ, ಇದೇ ತಂತ್ರವನ್ನು ರಾಷ್ಟ್ರಮಟ್ಟದಲ್ಲಿ ಯಶಸ್ವಿಗೊಳಿಸಲು ಸಿದ್ದರಾಗಿದ್ದಾರೆ.
ಕಾರ್ಪೊರೇಟ್, ಜಮೀನುದಾರರು, ಉದ್ಯಮಿಗಳಿಂದ ಪಡೆದ ದೇಣಿಗೆಗೆ ಬದಲಾಗಿ ರೈತರ, ಬಡವರ ಬದುಕನ್ನು ಬಲಿ ಕೊಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು. |
ವಿದೇಶಕ್ಕೆ ತೆರಳಿದ ಮೋದಿ ಮಾಡಿದ್ದು ಸರಿಯೇ?
ಪ್ರಧಾನಿಯಾಗಿ ವಿದೇಶಕ್ಕೆ ತೆರಳಿದ ಮೋದಿ ಅವರು ಇತ್ತೀಚೆಗೆ ದೇಶದ ಬಗ್ಗೆ ಮಾತನಾಡಿದ ರೀತಿ ಅವರಿಗೆ ಶೋಭೆ ತರುವುದಿಲ್ಲ. ದೇಶದ ಮಾನ ಹರಾಜು ಹಾಕಿದ್ದು ಏಕೆ? ಅವರು ಪಕ್ಷದ ವಕ್ತಾರರಲ್ಲ, ದೇಶದ ಪ್ರಧಾನಿ ಎಂಬುದನ್ನು ಮರೆತರೆ ಹೇಗೆ?
|
ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನೆ
ಎಲ್ಲರ ವಿಕಾಸ, ಏಳಿಗೆ ಎಂದ ಮೋದಿ ಅವರ ಪಟ್ಟಿಯಲ್ಲಿ ಬಡವ, ರೈತ, ಕಾರ್ಮಿಕ ವರ್ಗ ಸೇರಿಲ್ಲವೇ? ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನೆ
|
ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರ ಹಾಜರಿ
ರಾಮಲೀಲಾ ಮೈದಾನದಲ್ಲಿ ಮೊದಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದಿಗ್ವಿಜಯ್ ಸಿಂಗ್. ಎಕೆ ಅಂಟನಿ ಮಾತನಾಡಿದರು.












Click it and Unblock the Notifications