Get Updates
Get notified of breaking news, exclusive insights, and must-see stories!

ಗೆಲ್ಲುವ ಮುನ್ನವೇ ಮುಸ್ಲಿಂ ಮಹಿಳೆಯರ ಮೇಲೆ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿ ಅಭ್ಯರ್ಥಿ

ಹೈದರಾಬಾದ್‌, ಮೇ 14: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಗರ ದುಷ್ಟ ವರ್ತನೆ ಈಗ ಮತ್ತಷ್ಟು ಹದ್ದುಮೀರಿದೆ. ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ಮತದಾನ ಮಾಡಲು ಬಂದಿದ್ದ ಮುಸ್ಲಿಂ ಮಹಿಳೆಯ ಐಡಿ ಕೇಳುವ ಮೂಲಕ ದುವರ್ತನೆ ತೋರಿದ್ದಾರೆ.

ಬಿಜೆಪಿ ದೇಶದ ಅಧಿಕಾರ ಹಿಡಿದ ಹಿಡಿದದ್ದೇ ತಡ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಮಾಡಿದೆಯೋ ಇಲ್ಲವೋ ಮುಸ್ಲಿಂಮರನ್ನು ಈ ದೇಶದ ಎರಡನೇ ನಾಗರೀಕರನ್ನಾಗಿ ಕಾಣುವ ರೇಸಿಸಂ ಗುಣವನ್ನು ಕಾರುತ್ತಲೇ ಬಂದಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಈಗ ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ತಮ್ಮ ಅತಿರೇಖದ ವರ್ತನೆ ತೋರಿದ್ದಾರೆ.

BJP candidate Madhavi Latha who Atrocity Muslim women before winning

ಸೋಮವಾರ ಲೋಕಸಭಾ ಚುನಾವಣೆ ನಾಲ್ಕನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದರಲ್ಲಿ ಬಿಜೆಪಿಯ ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಧವಿ ಲತಾ ಅವರು ಸೋಮವಾರ ತೆಲಂಗಾಣ ಮತಗಟ್ಟೆಯೊಂದರಲ್ಲಿ ಮಹಿಳಾ ಮುಸ್ಲಿಂ ಮತದಾರರಿಗೆ ತಮ್ಮ ಮುಖವನ್ನು ತೋರಿಸುವಂತೆ ಕೇಳಿದ್ದು, ನಂತರ ಅದನ್ನು ಅವರ ಮತದಾರರ ಗುರುತಿನೊಂದಿಗೆ ಹೊಂದಿಸಿ ನೋಡಿ ಹೊಸ ವಿವಾದ ಮಾಡಿಕೊಂಡಿದ್ದಾರೆ.

ಮತದಾನ ನಡೆಯುವ ವೇಳೆ ಮತಗಟ್ಟೆ ಅಧಿಕಾರಿಗೆ ಮಾತ್ರ ಈ ಅಧಿಕಾರ ಇರುವುದಾಗಿ ಕಾನೂನು ಹೇಳುತ್ತದೆ. ಆದರೆ ತಮ್ಮಲ್ಲಿರುವ ಮುಸ್ಲಿಂ ವಿರೋಧಿ ನಿಲುವನ್ನು ಮಾಧವಿ ಲತಾ ಕಾರಿಕೊಂಡಿದ್ದಾರೆ. ಈ ಮೂಲಕ ಸಂವಿಧಾನ ವಿರೋಧಿ ನಿಲುವನ್ನು, ವಿಶ್ವದ ದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಭಾರತ ಗಣರಾಜ್ಯ ವಿರೋಧಿ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ತನ್ನ ಕೃತ್ಯವನ್ನು ಸಮರ್ಥಿಸುತ್ತಾ ಮಾಧವಿ, "ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಮುಖವಾಡಗಳಿಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷನಲ್ಲ, ನಾನು ಮಹಿಳೆ. ತುಂಬಾ ವಿನಮ್ರತೆಯಿಂದ ನಾನು ಅವರಿಗೆ ವಿನಂತಿಸಿದ್ದೇನೆ. ಯಾರಾದರೂ ಐಡಿ ಕಾರ್ಡ್‌ಗಳನ್ನು ನೋಡಿ ಮತ್ತು ಪರಿಶೀಲಿಸಬಹುದೇ? ಎಂದು ಹೇಳಿಕೆ ನೀಡಿದ್ದಾರೆ.

ಹಿಂದೊಮ್ಮೆ ಹೈದರಾಬಾದ್‌ನಲ್ಲಿ ಪ್ರಚಾರ ಮಾಡುವ ವೇಳೆ ಮಸೀದಿ ಹತ್ತಿರ ಬಂದಾಗ ಮಸೀದಿ ಕಡೆಗೆ ಬಿಲ್ಲು ಬಿಡುವ ರೀತಿ ಪ್ರದರ್ಶನ ಮಾಡಿ ತಮ್ಮ ದೇಶದ್ರೋಹಿ ನಿಲುವವನ್ನು ಅವರು ಬಹಿರಂಗ ಮಾಡಿಕೊಂಡಿದ್ದರು. ಈಗ ಅಧಿಕಾರವಿಲ್ಲದಿದ್ದರೂ ಮತ್ತೊಮ್ಮೆ ಮುಸ್ಲಿಂ ಮಹಿಳೆಯರ ಐಡಿ ಕಾರ್ಡ್‌ ಪಡೆದುಕೊಂಡು ಮುಖ ತೋರಿಸುವಂತೆ ಕೇಳಿ ವಿವಾದ ಎಳೆದುಕೊಂಡಿದ್ದಾರೆ.

ಇದೀಗ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505 (1) (ಸಿ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 132 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಹಾಲಿ ಸಂಸದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಛೀಮಾರಿ ಹಾಕಿದ್ದಾರೆ.

ಬಿಜೆಪಿ ನಾಯಕರು ಹಾಗೂ ಆರ್‌ಎಸ್‌ಎಸ್‌ ಮುಖಂಡರು ಸದಾ ಮುಸ್ಲಿಮರು ವಿರುದ್ಧ ಹಾಗೂ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಲೇ ಇರುತ್ತಾರೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ಮೇಲಂತು ಪ್ರಧಾನಿ ಮೋದಿಯಾದಿಯಾಗಿ ಮುಸ್ಲಿಮರ ಮೇಲೆ ತುಚ್ಛೀಕರಣದ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಈಗಲೂ ಮೀಸಲಾತಿ ನಿಲುವಿನಲ್ಲಿ ನೇರವಾಗಿ ಬಿಜೆಪಿ ನಾಯಕರು ತಮ್ಮ ದೇಶದ್ರೋಹಿ ನಿಲುವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದು, ಅಖಂಡ ಭಾರತದ ಜಾತ್ಯತೀತ, ಧರ್ಮಾತೀತ ಸಂವಿಧಾನದ ವಿರುದ್ಧವಾಗಿ ನಡೆದುಕೊಂಡು ಬರುತ್ತಿರುವುದು ಜಗಜ್ಜಾಹೀರಾಗಿದೆ.

ಮುಸ್ಲಿಮರ ಬಗ್ಗೆ ಯೋಗಿ ಆದಿತ್ಯನಾಥ್‌, ಗಿರಿರಾಜ್‌ ಸಿಂಗ್‌ ಹಿಮಂತ್‌ ಬಿಸ್ವಾ ಶರ್ಮಾ ಮುಂತಾದ ಅನೇಕ ನಾಯಕರು ಕಿಡಿಕಾರುತ್ತಲೇ ಬಂದಿರುವುದನ್ನು ನಾವು ಗಮನಿಸಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+