ನೆಹರೂ-ಗಾಂಧಿ ವಂಶಸ್ಥರ ಭವಿಷ್ಯ ಮುಗಿಸಲು ಬಿಜೆಪಿ ಯತ್ನ: ಶಿವಸೇನೆ

ಮುಂಬೈ, ಜೂನ್ 17: ಬಿಜೆಪಿಯು ಕಾಂಗ್ರೆಸ್ ನಾಯಕರಾದ ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನೆನಪುಗಳನ್ನು ಅಳಿಸಿ ಹಾಕಲು ನಿರ್ಧಾರ ಮಾಡಿದೆ. ನೆಹರೂ-ಗಾಂಧಿ ವಂಶಸ್ಥರ ಭವಿಷ್ಯವನ್ನು ನಾಶ ಮಾಡಲು ಹೊರಟಿದೆ ಎಂದು ಶಿವಸೇನೆ ಆರೋಪಿಸಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿರುವ ಕುರಿತು ಶಿವಸೇನಾ ಮುಖವಾಣಿ 'ಸಾಮ್ನಾ'ದ ಸಂಪಾದಕೀಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ರಾಹುಲ್ ಗಾಂಧಿಯನ್ನು ಪ್ರಶ್ನಿಸುವ ಮೂಲಕ, ಬಿಜೆಪಿಯು ತಾನು ಯಾವುದೇ ವ್ಯಕ್ತಿಯ ಕಾಲರ್ ಅನ್ನು ಬೇಕಾದರೂ ಹಿಡಿಯಬಹುದು ಎಂದು ತೋರಿಸಲು ಪ್ರಯತ್ನಿಸುತ್ತಿದೆ. ಮರಾಠಿ ದೈನಿಕವು ಇದನ್ನು ಅಧಿಕಾರದ ದುರಹಂಕಾರ ಎಂದು ಬಣ್ಣಿಸಿದೆ.

BJP Attempts To End Nehru-gandhi Dynasty: Shiv Sena

"ಬಿಜೆಪಿಯು ಪಂಡಿತ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ನೆನಪುಗಳನ್ನು ಅಳಿಸಲು ಬಯಸುವುದು ಮಾತ್ರವಲ್ಲದೆ, ನೆಹರು-ಗಾಂಧಿ ವಂಶಸ್ಥರ ಭವಿಷ್ಯವನ್ನು ನಾಶಮಾಡಲು ಬಯಸುತ್ತದೆ" ಎಂದು ಬರೆದಿದೆ.

ಇಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ, ನಾಳೆ ಯಾರು ಬೇಕಾದರೂ ಆಗಬಹುದು ಎಂದು ಹೇಳಿದೆ. "ವಿರೋಧಿಗಳನ್ನು ತೊಡೆದುಹಾಕಲು ಹಿಟ್ಲರ್ ನಿರ್ಮಿಸಿದ ವಿಷಕಾರಿ ಗ್ಯಾಸ್ ಚೇಂಬರ್‌ಗಳನ್ನು ನಿರ್ಮಿಸಿರುವುಕ್ಕೆ ಇದು ಹತ್ತಿರವಾಗಿದೆ" ಎಂದು ಅದು ಹೇಳಿಕೊಂಡಿದೆ.

ಬಿಜೆಪಿ ಮುಖಂಡರ ಮೇಲೆ ದಾಳಿ ಮಾಡಲ್ಲ

ಶಿವಸೇನೆ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಮಾಜವಾದಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಂತಾದ ಪಕ್ಷಗಳು ಜಾರಿ ನಿರ್ದೇಶನಾಲಯದ ದಾಳಿಗೆ ಒಳಗಾಗಿದೆ. ಆದರೆ ಇಡಿ ಬಿಜೆಪಿ ಪಕ್ಷದ ರಾಜಕಾರಣಿಗಳ ಮೇಲೆ ಎಂದಿಗೂ ದಾಳಿ ಮಾಡುವುದಿಲ್ಲ ಎಂದು ಅದು ಹೇಳಿದೆ.

BJP Attempts To End Nehru-gandhi Dynasty: Shiv Sena

ಜಾರಿ ನಿರ್ದೇಶನಾಲಯದ ಏಕೈಕ ಕೆಲಸವೆಂದರೆ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್, ರಾಜ್ಯ ಸಚಿವ ನವಾಬ್ ಮಲಿಕ್ (ಇಬ್ಬರೂ ಪ್ರಸ್ತುತ ಜೈಲಿನಲ್ಲಿದ್ದಾರೆ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ), ಸಂಜಯ್ ರಾವುತ್, ಅನಿಲ್ ಪರಬ್ (ಇಬ್ಬರೂ ಶಿವಸೇನೆ) ಮತ್ತು ಲಾಲು ಪ್ರಸಾದ್ ಯಾದವ್ (ಆರ್‌ಜೆಡಿ) ಇವರ ವಿರುದ್ಧ ವಿಚಾರಣೆ ಮಾಡುವುದಾಗಿದೆ ಎಂದು ಆರೋಪಿಸಿದೆ.

ನ್ಯಾಷನಲ್ ಹೆರಾಲ್ಡ್ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಸತತ ಮೂರನೇ ದಿನದ ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗಿದ್ದಾರೆ. ಮಾಧ್ಯಮ ಸಂಸ್ಥೆ ಮತ್ತು ಅದರ ಮಾಲೀಕ ಯಂಗ್ ಇಂಡಿಯನ್‌ಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರ ಪಾತ್ರದ ಕುರಿತು ವಿಚಾರಣೆ ನಡೆಯುತ್ತಿದೆ.

ಈ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ಅಥವಾ ನಿಗದಿತ ಅಪರಾಧವಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ, ಅದರ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಲಾಗಿದೆ.

ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಒತ್ತಾಯಿಸಿರುವ ಎಫ್‌ಐಆರ್‌ನ ಪ್ರತಿಯನ್ನು ಜಾರಿ ನಿರ್ದೇಶನಾಲಯವು ನೀಡಲು ಸಾಧ್ಯವಿಲ್ಲ, ಅವರು ಕೇಳಿದ ಪ್ರಶ್ನೆಗಳಿಗೆ ಜಾರಿ ನಿರ್ದೇಶನಾಲ ಉತ್ತರ ನೀಡುವುದಿಲ್ಲ ಎಂದು ಶಿವಸೇನೆ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+