Breaking: ಛತ್ತೀಸ್‌ಗಢ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಅಚ್ಚರಿ ಮೂಡಿಸಿದ ನಡೆ
ನವದೆಹಲಿ, ಆಗಸ್ಟ್ 17: ಇದೇ 2023ರ ವರ್ಷಾಂತ್ಯಕ್ಕೆ ಛತ್ತೀಸ್‌ಗಢ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಅಭ್ಯರ್ಥಿಗಳ ಪಟ್ಟಿ ಬಹಳ ತಡವಾಗಿ ಬಿಡುಗಡೆ ಮಾಡಿದ್ದ ಬಿಜೆಪಿ ಪಕ್ಷವು ಇಲ್ಲಿ ಹೀನಾಯ ಸೋಲು ಎದುರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಜೆಪಿ ಈ ಎರಡು ರಾಜ್ಯಗಳ ಚುನಾವಣೆಗೆ ತಿಂಗಳುಗಳ ಮೊದಲೇ ಅಭ್ಯರ್ಥಿಗಳು ಪಟ್ಟಿ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ಚುನಾವಣೆ ನಡೆಯುವುದು ಬಹುತೇಕ ಪಕ್ಕ ಎನ್ನಲಾಗಿದೆ. ಆದರೆ ಭಾರತೀಯ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವ ನಡೆ ರಾಜಕೀಯ ವಲಯದಲ್ಲಿ ಅಚ್ಚರಿಗಳಿಗೆ ಕಾರಣವಾಗಿದೆ.

ಬಿಜೆಪಿ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 90 ಸದಸ್ಯ ಬಲ ಹೊಂದಿರುವ ದ ಛತ್ತೀಸ್‌ಗಢ ವಿಧಾನಸಭೆಗೆ 21 ಅಭ್ಯರ್ಥಿಗಳು ಹಗೂ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ 39 ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಳಿಸಲಾಗಿದೆ.
भारतीय जनता पार्टी केन्द्रीय चुनाव समिति की बैठक भाजपा राष्ट्रीय अध्यक्ष श्री @JPNadda की अध्यक्षता में कल दिनांक 16.08.2023 को संपन्न हुई।
— BJP (@BJP4India) August 17, 2023
केन्द्रीय चुनाव समिति ने छत्तीसगढ़ एवं मध्य प्रदेश में होने वाले आगामी विधानसभा चुनाव 2023 के लिए निम्नलिखित नामों पर अपनी स्वीकृति प्रदान… pic.twitter.com/SxDPiWW44d
ಈ ಕುರಿತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ, ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ತಯಾರಿಗಾಗಿ ಪಕ್ಷದ ನಿರ್ಧಾರ ತೆಗೆದುಕೊಂಡ ಒಂದು ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಬಿಜೆಪಿಯು ಹೀಗೆ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸಿದೆ. ಈ ಮೂಲಕ ಅಭೂತಪೂರ್ವ ನಿರ್ಧಾರ ಕೈಗೊಳ್ಳುವ ಮೂಲಕ ಈ ಎರಡು ರಾಜ್ಯಗಳಲ್ಲಿ ಗೆಲುವಿನ ರಣತಂತ್ರ ರೂಪಿಸಿದೆ. ಜೊತೆಗೆ ಪಟ್ಟಿ ಆಯ್ಕೆ ಕುರಿತು ಉಂಟಾಗಬಹುದಾದ ಸಮಸ್ಯೆಗಳನ್ನು ಮೊದಲೇ ಪರಿಹರಿಸುವ ಯತ್ನ ಮಾಡಿದೆ ಎನ್ನಲಾಗುತ್ತಿದೆ.
ಚುನಾವಣಾ ಗೆಲುವಿಗಾಗಿ ಬಿಜೆಪಿಯಿಂದ ಎಚ್ಚರಿಕೆ ಹೆಜ್ಜೆ
ಈ ವರ್ಷದ ಆರಂಭದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿತ್ತು. ಈ ಸಂಬಂಧ ಎಚ್ಚರದಿಂದ ಹೆಜ್ಜೆ ಇಡುತ್ತಿರುವ ಪಕ್ಷವು ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಜೊತೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ಸದ್ಯ ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿವೆ. ಇನ್ನೂ ಮಣಿಪುರದ ಹಿಂಸಾಚಾರ ಬಳಿಕ ಅಶಾಂತಿಯ ನೆಲೆಗೊಂಡ ಹಿನ್ನೆಲೆಯಲ್ಲಿ ಮಿಜೋರಾಂ ಮತ್ತು ಆಡಳಿತಾರೂಢ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್ ಜೊತೆಗಿನ ಬಿಜೆಪಿ ಸಂಬಂಧ ಹದಗೆಟ್ಟಿದೆ. ಇತ್ತ ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಬಲ ಪೈಪೋಟಿ ನಡೆಸುವುದು ಪಕ್ಕಾ ಆಗಿದೆ.
ಪ್ರಮುಖರ ಹೆಸರು ಪಟ್ಟಿಯಲ್ಲಿ ಮಿಸ್ಸಿಂಗ್
ಛತ್ತೀಸ್‌ಗಢದ ಚುನಾವಣೆ ಸಂಬಂಧ ಬಿಡುಗಡೆಯಾದ ಪಟ್ಟಿಯಲ್ಲಿ ದುರ್ಗ್‌ನ ಸಂಸದ ವಿಜಯ್ ಬಘೇಲ್ ಅವರ ಹೆಸರು ಕಾಣೆಯಾಗಿದೆ. ಅವರ ಬದಲಾಗಿ ಪಠಾಣ ಮಾಜಿ ಶಾಸಕರು ಸ್ಪರ್ಧೆಗೆ ಇಳಿದಿದ್ದಾರೆ. ಇದಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಪಕ್ಷದ ಇತರ ಹಿರಿಯ ನಾಯಕರ ಹೆಸರು ಮೊದಲ ಪಟ್ಟಿಯಲ್ಲಿ ಹಾಕಲಾಗಿಲ್ಲ.
ಅದೇ ರೀತಿ ಮಧ್ಯಪ್ರದೇಶಕ್ಕೆ ಸಿಮೀತವಾಗಿ ಬಿಡುಗಡೆಗೊಂಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಮತ್ತಿತರ ಪ್ರಮುಖರ ಹೆಸರುಗಳ ಇಲ್ಲದಿರುವುದು ವಿಶೇಷವಾಗಿದೆ.
ಸದ್ಯ ಬಿಡುಗಡೆಯಾದ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಛತ್ತೀಸ್‌ಗಢದಲ್ಲಿ ಐದು ಮಹಿಳೆಯರು, ಪರಿಶಿಷ್ಟ ಪಂಗಡದ 10 ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ ವರ್ಗದಿಂದ ಒಬ್ಬರು ಹೆಸರು ಘೋಷಣೆ ಆಗಿದೆ. ಇತ್ತ ಮಧ್ಯಪ್ರದೇಶದಲ್ಲಿ ಐದು ಮಹಿಳೆಯರು, ಎಂಟು ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಮತ್ತು 13 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸು ನಿರ್ಧರಿಸಿದೆ.












Click it and Unblock the Notifications