BJP Candidate 2nd List: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ!
ಹೊಸ ದಿಲ್ಲಿ, ಮಾರ್ಚ್ 13: 2024ರ ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಈಗಾಗಲೇ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಸಭೆ ನಡೆಸಿ, ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯದ ಮೇರೆಗೆ 195 ಅಭ್ಯರ್ಥಿಗಳನ್ನ ಘೋಷಿಸಿದ್ದು, ಕೆಲವು ಗೊಂದಲದ ಕ್ಷೇತ್ರಗಳ ಕುರಿತು ಬಿಜೆಪಿ ಹೈಕಮಾಂಡ್ ನಾಯಕರು ಸಭೆ ನಡೆಸಿ, ಇದೀಗ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಸೇರಿದಂತೆ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಸೇರಿದಂತೆ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ.
— BJP Karnataka (@BJP4Karnataka) March 13, 2024
ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಪಡೆದ ಎಲ್ಲರಿಗೂ ಅಭಿನಂದನೆಗಳು.
ಕಮಲ ಅರಳಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ.#PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
1/2 pic.twitter.com/rq7sJQbrju
ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿ ಇಲ್ಲಿದೆ
ಶಿವಮೊಗ್ಗ -ಬಿ.ವೈ.ರಾಘವೇಂದ್ರ
ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ -ಪಿ.ಸಿ.ಗದ್ದಿಗೌಡರ್
ಉಡುಪಿ-ಚಿಕ್ಕಮಗಳೂರು -ಕೋಟ ಶ್ರೀನಿವಾಸ ಪೂಜಾರಿ
ಹಾವೇರಿ -ಬಸವರಾಜ ಬೊಮ್ಮಾಯಿ
ಮೈಸೂರು -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಬೆಂಗಳೂರು ಗ್ರಾಮಾಂತರ -ಡಾ.ಸಿ.ಎನ್.ಮಂಜುನಾಥ
ಬೆಂಗಳೂರು ುತ್ತರ-ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್
ತುಮಕೂರು -ವಿ.ಸೋಮಣ್ಣ
ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಚಾಮರಾಜನಗರ -ಎಸ್.ಬಾಲರಾಜು
ಧಾರವಾಡ -ಪ್ರಹ್ಲಾದ್ ಜೋಶಿ
ಕೊಪ್ಪಳ -ಡಾ.ಬಸವರಾಜ ತ್ಯಾವಟೂರು
ದಾವಣಗೆರೆ -ಗಾಯತ್ರಿ ಸಿದ್ದೇಶ್ವರ್
ಬಳ್ಳಾರಿ -ಬಿ.ಶ್ರೀರಾಮುಲು
ಕಲಬುರಗಿ -ಡಾ.ಉಮೇಶ್ ಜಾಧವ್
ಬೀದರ್ -ಭಗವಂತ ಖೂಬಾ
ವಿಜಯಪುರ -ರಮೇಶ್ ಜಿಗಜಿಣಗಿ
ದಾದರ್ ಮತ್ತು ನಗರ ಹವೇಲಿ : ಶ್ರೀಮತಿ ಕಲಾಬೆನ್ ದೇಲ್ಕರ್
ದೆಹಲಿ ಪೂರ್ವ : ಹರ್ಷ್ ಮಲ್ಹೋತ್ರಾ
ದೆಹಲಿ ವಾಯುವ್ಯ : ಯೋಗೇಂದ್ರ ಚಂದೋಲಿಯಾ
ಸಬರಕಾಂತ: ಭಿಖಾಜಿ ದುಧಾಜಿ ಠಾಕೋರ್
ಅಹಮದಾಬಾದ್ ಪೂರ್ವ : ಹಸ್ಮುಖಭಾಯ್ ಸೋಮಾಭಾಯಿ ಪಟೇಲ್
ಭಾವನಗರ : ನಿಮುಬೆನ್ ಬಂಭನಿಯಾ
ವಡೋದರಾ : ರಂಜನ್ಬೆನ್ ಧನಂಜಯ್ ಭಟ್
ಛೋಟಾ ಉದಯಪುರ : ಜಶುಭಾಯಿ ಭಿಲುಭಾಯಿ ರಥ್ವಾ
ಸೂರತ್ : ಮುಖೇಶಭಾಯಿ ಚಂದ್ರಕಾಂತ ದಲಾಲ್
ವಲ್ಸಾದ್ : ಧವಲ್ ಪಟೇಲ್
ಅಂಬಾಲಾ : ಬಾಂಟೊ ಕಟಾರಿಯಾ
ಸಿರ್ಸಾ : ಅಶೋಕ್ ತನ್ವಾರ್
ಕರ್ನಾಲ್: ಮನೋಹರ್ ಲಾಲ್ ಖಟ್ಟರ್
ಗುರ್ಗಾಂವ್ : ರಾವ್ ಇಂದರ್‌ಜಿತ್ ಸಿಂಗ್ ಯಾದವ್
ಫರಿದಾಬಾದ್ : ಕ್ರಿಶನ್ ಪಾಲ್ ಗುರ್ಜರ್
ಭಿವಾನಿ-ಮಹೇಂದ್ರಗಢ: ಚೌಧರಿ ಧರಂಬೀರ್ ಸಿಂಗ್
ಹಮೀರ್ಪುರ್: ಅನುರಾಗ್ ಸಿಂಗ್ ಠಾಕೂರ್
ಶಿಮ್ಲಾ : ಸುರೇಶ್ ಕುಮಾರ್ ಕಶ್ಯಪ್
ಬಾಲಘಾಟ್: ಭಾರತಿ ಪಾರ್ಧಿ
ಛಿಂದ್ವಾರಾ: ವಿವೇಕ್ 'ಬಂಟಿ' ಸಾಹು
ಉಜ್ಜಯಿನಿ : ಅನಿಲ್ ಫಿರೋಜಿಯಾ
ಧಾರ್ : ಸಾವಿತ್ರಿ ಠಾಕೂರ್
ಇಂದೋರ್ : ಶಂಕರ್ ಲಾಲ್ವಾನಿ












Click it and Unblock the Notifications