ಉತ್ತರಾಖಂಡ್ : ಕಾಂಗ್ರೆಸ್ಸಿಗೆ ಸೋಲಿನ ಬರೆ, ಬಿಜೆಪಿಗೆ ಗೆಲುವಿನ ನಗೆ
ದೇವತೆಗಳ ನಾಡಲ್ಲಿ ಕೇಸರಿ ಪಡೆಯ ವಿಜೃಂಭಣೆಯ ವಿಜಯೋತ್ಸವ ಮೊದಲು ಗೊಂಡಿದೆ. ಕಾಂಗ್ರೆಸ್ಸಿನ ಹರೀಶ್ ರಾವತ್ ಸರ್ಕಾರ ಸೋತು ಸುಣ್ಣವಾಗಿದೆ. ಬಂಡಾಯದ ಬೇಗೆಯಲ್ಲಿ ಬೆಂದಿದ್ದ ಕಾಂಗ್ರೆಸ್ ಗೆ ಬಿಜೆಪಿ ಚುರುಕು ಮುಟ್ಟಿಸಿದೆ.
ಡೆಹ್ರಾಡೂನ್, ಮಾರ್ಚ್ 11: ದೇವತೆಗಳ ನಾಡಲ್ಲಿ ಕೇಸರಿ ಪಡೆಯ ವಿಜೃಂಭಣೆಯ ವಿಜಯೋತ್ಸವ ಮೊದಲು ಗೊಂಡಿದೆ. ಕಾಂಗ್ರೆಸ್ಸಿನ ಹರೀಶ್ ರಾವತ್ ಸರ್ಕಾರ ಸೋತು ಸುಣ್ಣವಾಗಿದೆ. ಬಂಡಾಯದ ಬೇಗೆಯಲ್ಲಿ ಬೆಂದಿದ್ದ ಕಾಂಗ್ರೆಸ್ ಗೆ ಬಿಜೆಪಿ ಚುರುಕು ಮುಟ್ಟಿಸಿದ್ದು ಕಳೆದ ಬಾರಿ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಭಾರತೀಯ ಜನತಾ ಪಾರ್ಟಿ ಈಗಾಗಲೆ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಉತ್ತರಾಖಂಡ್ ಗದ್ದುಗೆ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ ದಾಟಿದೆ. ಮೋದಿ ಅಲೆ, ಕೇಸರಿ ಗಣಗಳ ಆರ್ಭಟಕ್ಕೆ ದೇವನಗರಿಗಳಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಾಂಗ್ರೆಸ್ಸಿಗರು ಬೆಚ್ಚಿದ್ದಾರೆ. [ಚಾಣಕ್ಯ ಭವಿಷ್ಯ: ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಭರ್ಜರಿ ಜಯ]

ಉತ್ತರಾಖಂಡ್ ರಾಜ್ಯದಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 54 ಕ್ಷೇತ್ರಗಳಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಹುಮತಕ್ಕೆ 36 ಸ್ಥಾನ ಸಾಕು. ಟ್ರೆಂಡ್ ಪ್ರಕಾರ ಬಿಜೆಪಿ ಸುಲಭವಾಗಿ ಬಹುಮತ ಪಡೆಯಲಿದ್ದು, ಅಧಿಕಾರ ಸ್ಥಾಪನೆಗೆ ಮುಂದಾಗಿದೆ.[LIVE: ಉತ್ತರಾಖಂಡ್ ನಲ್ಲಿ ಬಿಜೆಪಿಗೆ ಐತಿಹಾಸಿಕ ಜಯ]
ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ. ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ, ಹಾಲಿ ಸಿಎಂ ಹರೀಶ್ ರಾವತ್ ಅವರು ಹರಿದ್ವಾರ, ಕಿಚ್ಚ ಎರಡೂ ಕ್ಷೇತ್ರಗಳಲ್ಲೂ ಪರಾಭವ ಅನುಭವಿಸಿದ್ದಾರೆ.
2012ರಲ್ಲಿ ಕಾಂಗ್ರೆಸ್ 32, ಬಿಜೆಪಿ 31, ಬಿಎಸ್ ಪಿ 3 ಸ್ಥಾನ, ಯುಕೆಡಿ 1, ಇತರೆ 3ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಕ್ಸಿಟ್ ಪೋಲ್ ಗಳಲ್ಲಿ ಚಾಣಕ್ಯ ಸಂಸ್ಥೆಯ ಎಕ್ಸಿಟ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 53 ಸ್ಥಾನ ಲಭಿಸಲಿದ್ದು, ಕಾಂಗ್ರೆಸ್ ಗೆ 15 ಹಾಗೂ ಇತರೆ 2 ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದು ಬಹುತೇಕ ನಿಜವಾಗುತ್ತಿದೆ.












Click it and Unblock the Notifications