ಉತ್ತರಪ್ರದೇಶದಲ್ಲಿ ಕಪಿ ಚೇಷ್ಟೆ, ಬಸ್ ಓಡಿಸಿದ ಮಂಗ

ರಾಯ್ ಬರೇಲಿ (ಉತ್ತರ ಪ್ರದೇಶ), ಡಿ. 23: ಹನುಮ ಜಯಂತಿಯ ದಿನ ಉತ್ತರಪ್ರದೇಶದ ಬಸ್ ನಿಲ್ದಾಣವೊಂದರಿಂದ ಸುದ್ದಿ ಬಂದಿದೆ. ರಾಯ್ ಬರೇಲಿಯ ಬಸ್ ನಿಲ್ದಾಣವೊಂದರಲ್ಲಿ ಕೋತಿಯೊಂದು ಬಸ್ ಓಡಿಸಿದ ಅಪರೂಪದ ಘಟನೆ ಇತ್ತೀಚೆಗೆ ನಡೆದಿದೆ.

ಬಾಯಾರಿಕೆಯಾದಾಗ ನಲ್ಲಿ ತಿರುಗಿಸಿ ನೀರು ಕುಡಿಯುವ ಮಂಗ, ಸಿಗರೇಟ್ ಸೇದುವ ಕೋತಿ, ಸಲಾಮು ಹೊಡೆಯುವ, ಲಾಗ ಹಾಕುವ ಹಲವು ಚೇಷ್ಟೆಗಳನ್ನು ಮಾಡುವ ಮಂಗಕ್ಕಿಂತ ಭಿನ್ನವಾದ ಈ ಕೋತಿ ಬಸ್ ಓಡಿಸಿ ಸುದ್ದಿಯಾಗಿದೆ.

ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ಲಿಸಿದ್ದ ಬಸ್ ರಾಯ್ ಬರೇಲಿಯ ಓಲ್ಡ್ ರೋಡ್ ವೇಸ್ ನಿಲ್ದಾಣದಿಂದ ಫಿಲಿಭಿತ್ ಗೆ ತೆರಳಬೇಕಿತ್ತು. ಆದರೆ, ಬಸ್ ಹೊರಡಲು ಇನ್ನೂ ಸಮಯವಿತ್ತು. ಬಸ್ ಕಂಡೆಕ್ಟರ್ ಬಸ್ ನಿಂದ ಇಳಿದು ಹೊರಕ್ಕೆ ಹೋದರೆ, ಬಸ್ ಚಾಲಕ ಅಲ್ಲೇ ನಿದ್ದೆಗೆ ಜಾರಿದ್ದರು.

Monkey drives off with State Bus in Bareilly

ಈ ಸಮಯದಲ್ಲಿ ಬಸ್ ನೊಳೆಗೆ ಕೋತಿಗೆ ಚಾಲಕನ ಸೀಟಿನಲ್ಲಿ ಜಾಗ ಸಿಕ್ಕಿದೆ. ಬಸ್ಸಿನ ಇಂಜಿನ್ ಚಾಲನೆ ಮಾಡಿದ ಕೋತಿ ಬಸ್ ಸ್ಟಾರ್ಟ್ ಮಾಡಿದೆ. ಎಚ್ಚೆತ್ತ ಬಸ್ ಡ್ರೈವರ್ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಬಸ್ ನ ಗೇಯರ್ ಮೇಲೆ ಹಾರಿದ ಕಪಿರಾಯ ಗೇರ್ ಎಳೆದು ಬಸ್ ಮುಂದಕ್ಕೆ ಚಲಿಸುವಂತೆ ಮಾಡಿದೆ.

ಚಾಲಕನಿಲ್ಲದ ಬಸ್‌ ಬರುತ್ತಿರುವುದನ್ನು ಕಂಡು ಅಲ್ಲಿದ್ದ ಜನ ಭೀತಿಯಿಂದ ಚದುರಿದ್ದಾರೆ. ಸೀಟಿಗೆ ಬಂದು ಬಸ್ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಎರಡು ಬಸ್ ಗಳನ್ನು ಈ ವಾಹನ ಗುದ್ದಿದೆ.

ಕಪಿಚೇಷ್ಟೆ ಮಾಮೂಲಿ: ಬಸ್ ನಿಲ್ದಾಣ ಹಾಗೂ ಗ್ಯಾರೇಜ್ ಗಳಲ್ಲಿ ನಿತ್ಯ ಮಂಗನ ಕಾಟ ಅನುಭವಿಸಿ ಸಾಕಾಗಿದೆ. ಪಾಲಿಕೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಸಿಸಿಟಿವಿ ಕೆಮೆರಾಗಳೆಲ್ಲವೂ ಜಖಂಗೊಂಡಿವೆ ಎಂದು ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ಕೆ.ಶರ್ಮಾ ತಮ್ಮ ನೋವು ತೋಡಿಕೊಂಡಿದ್ದಾರೆ. ಒಟ್ಟಾರೆ, ಕಪಿಚೇಷ್ಟೆ ಸುದ್ದಿ ವಾಹಿನಿಗಳಲ್ಲಿ ಸುದ್ದಿಯಾಗಿಬಿಟ್ಟಿತು. ಈ ಸುದ್ದಿಯನ್ನು ಒನ್ ಇಂಡಿಯಾ ಪೋಡ್ ಕಾಸ್ಟ್ ನಲ್ಲಿ ಕೇಳಿ:


(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+