• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

By ಅನಿಲ್
|

"ನಮಗೆ ಚಿಕ್ಕ ವಯಸ್ಸಿನಿಂದಲೂ ಕಲಿಸಿಕೊಟ್ಟಿದ್ದೇ ಅದು. ಚರ್ಚ್ ಅಂದರೆ ನಮ್ಮ ತಾಯಿ ಇದ್ದ ಹಾಗೆ ಅಂತ. ಆದರೆ ನನ್ನ ಅನುಭವದಿಂದ ಯೋಚನೆ ಮಾಡಲು ಶುರು ಮಾಡಿದ್ದೇನೆಂದರೆ, ಚರ್ಚ್ ಅಂದರೆ ಮಲತಾಯಿ ಮತ್ತು ಎಲ್ಲ ಲೌಕಿಕ ವಿಷಯಗಳು ಇರುವ ಸ್ಥಳ"- ಆ ಸನ್ಯಾಸಿನಿ ಈ ಅರ್ಥವನ್ನೇ ಧ್ವನಿಸುವ ಪದಗಳನ್ನು ಬಳಸಿದ್ದಾರೆ.

ಕೇರಳದ ಆ ಸನ್ಯಾಸಿನಿ ಜಲಂಧರ್ ಬಿಷಪ್ ಜೇಮ್ಸ್ ಫ್ರಾಂಕೋ ಮುಲಕ್ಕಲ್ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಆರೋಪ ಮಾಡಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಇಡೀ ಚರ್ಚ್ ನ ವ್ಯವಸ್ಥೆ ಆಕೆಗೆ ವಿರುದ್ಧವಾಗಿದೆ ಎಂಬ ಸಂಗತಿಯಿಂದ ಆಘಾತಕ್ಕೊಳಗಾಗಿದ್ದಾರೆ.

ವ್ಯಾಟಿಕನ್ ಸಿಟಿಯಲ್ಲಿರುವ ಪೋಪ್ ಫ್ರಾನ್ಸಿಸ್ ರ ಭಾರತದಲ್ಲಿರುವ ರಾಯಭಾರಿಗೆ ತಾನು ಎದುರಿಸಿದ ಕಷ್ಟ-ಸವಾಲು, ಚರ್ಚ್ ನೊಳಗಿನ ವ್ಯವಸ್ಥೆ ಬಗ್ಗೆ ಏಳು ಪುಟಗಳ ಪತ್ರವನ್ನು ಬರೆದಿದ್ದಾರೆ. ಪೋಪ್ ಸೇರಿದಂತೆ ಯಾರ್ಯಾರ ಬಳಿ ಸಹಾಯಕ್ಕೆ ಅಂಗಲಾಚಿದೆ ಎಂಬ ಮಾಹಿತಿ ಕೂಡ ಅದರಲ್ಲಿದೆ. ಆದರೆ ಆಕೆಗೆ ಪೋಪ್ ಸೇರಿದಂತೆ ಯಾರೂ ನೆರವು ಮಾಡಲು ಮುಂದೆ ಬಂದಿಲ್ಲ.

ಅತ್ಯಾಚಾರ ಆರೋಪಿ ಬಿಷಪ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಂದ ಹಾಗೆ ಈ ಪತ್ರವನ್ನು ಸೆಪ್ಟೆಂಬರ್ ಎಂಟರಂದು ಬರೆಯಲಾಗಿದೆ. ಬಿಷಪ್ ನನ್ನು ಬೇಟೆಯಾಡುವ ಭಕ್ಷಕನಿಗೆ ಹೋಲಿಕೆ ಮಾಡಿರುವ ಸಂತ್ರಸ್ತೆ, ಅದೆಷ್ಟೋ ಸಿಸ್ಟರ್ಸ್ ಗಳನ್ನು ಆತ ಬಳಸಿಕೊಂಡ ಬಳಿಕವೂ ಯಾವುದೇ ಕ್ರಮ ಆತನ ವಿರುದ್ಧ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್‌ಗೆ ಪೊಲೀಸ್ ಸಮನ್ಸ್‌

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯಾಗಿ ನ್ಯಾಯಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ ಎಂದಿರುವ ಆಕೆ, ಹಲವು ಸಮಯದಿಂದ ಈ ದೂರನ್ನು ತನ್ನ ಮೇಲಿನವರಿಗೆ ನೀಡಲು ಯಾವ ಪರಿ ಹೆದರಿದ್ದೆ ಎಂದು ಕೂಡ ವಿವರಿಸಿದ್ದಾರೆ. ಬಿಷಪ್ ಹೇಗೆ ಒತ್ತೆಯಾಳಿನ ಪರಿಸ್ಥಿತಿಯನ್ನು ತಂದಿಟ್ಟಿದ್ದರೆಂಬುದನ್ನು ಆಕೆ ವಿವರಿಸಿದ್ದಾರೆ.

ಬಲೆಗೆ ಬೀಳಿಸುತ್ತಿದ್ದರು ಅಥವಾ ದೌರ್ಬಲ್ಯದ ದುರುಪಯೋಗ

ಬಲೆಗೆ ಬೀಳಿಸುತ್ತಿದ್ದರು ಅಥವಾ ದೌರ್ಬಲ್ಯದ ದುರುಪಯೋಗ

"ನನ್ನ ಮೇಲೆ ಬಿಷಪ್ ಹಲವು ಸಲ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನನ್ನ ಮೇಲಿನವರಿಗಾಗಲಿ ಅಥವಾ ಅವರ ಕೌನ್ಸಿಲರ್ಸ್ ಪೂರ್ತಿ ಕಥೆಯನ್ನು ಬಯಲು ಮಾಡಲು ಆಗಲೇ ಇಲ್ಲ. ನಾನು ಅವರಿಗೆ ಪದೇ ಪದೇ ಹೇಳಿದ್ದು ಇಷ್ಟೆ: 'ಅವರ ಜತೆ ಮಲಗುತ್ತಿಲ್ಲ ಅನ್ನೋ ಕಾರಣಕ್ಕೆ ನನ್ನ ವಿರುದ್ಧ ಬಿಷಪ್ ಪದೇಪದೇ ಶಿಸ್ತು ಕ್ರಮ ತೆಗೆದುಕೊಳ್ಳುತ್ತಿದ್ದಾರೆ'. ನನ್ನ ಈ ಮಾತುಗಳ ಗಂಭೀರತೆ ಕೂಡ ಅವರಿಗೆಅರ್ಥವಾಗಲಿಲ್ಲ. ಅವರಿಗೆ ಇದಕ್ಕಿಂತ ಹೆಚ್ಚಿಗೆ ಹೇಳಲು ಸಾಧ್ಯವಿರಲಿಲ್ಲ. ನನ್ನ ಮೇಲಿನವರ ಬೆಂಬಲದೊಂದಿಗೆ ಬಿಷಪ್ ನನಗೆ ತೊಂದರೆ ಮಾಡಬಹುದು ಎಂಬ ಭಯ ಇತ್ತು" ಎಂದಿದ್ದಾರೆ. ಇದು ನನ್ನೊಬ್ಬಳ ಸ್ಥಿತಿಯಲ್ಲ. ನನ್ನ ಹಾಗೆ ಸಾಕಷ್ಟು ಜನರಿಗೆ ಆಗಿತ್ತು. ಚಿಕ್ಕ ವಯಸ್ಸಿನ ಸಿಸ್ಟರ್ ವೊಬ್ಬರಿಗೂ ಕೂಡ ಅದೇ ರೀತಿ ಲೈಂಗಿಕ ದೌರ್ಜನ್ಯ ಮಾಡಿದ್ದರು ಬಿಷಪ್. ಬಿಷಪ್ ಫ್ರಾಂಕೋರ ಹದ್ದಿನ ಕಣ್ಣು ಇತರ ಸಿಸ್ಟರ್ ಗಳ ಮೇಲೂ ಇತ್ತು. ಬಿಷಪ್ ಫ್ರಾಂಕೋಗೆ ಯಾರ ಮೇಲೆ ಮೋಹ ಮೂಡುತ್ತಿತ್ತೋ ಅಂಥವರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಅಥವಾ ಅವರ ದೌರ್ಬಲ್ಯವನ್ನು ತನ್ನ ಆಸೆ ತೀರಿಸಿಕೊಳ್ಳಲು ಬಳಸುತ್ತಿದ್ದರು.

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರು

ಅಧ್ಯಾತ್ಮ ಮಾರ್ಗದರ್ಶನಕ್ಕಾಗಿ ರಾತ್ರಿ ಹನ್ನೆರಡು ಗಂಟೆಗೆ ಕೋಣೆಯಲ್ಲಿ

ಅಧ್ಯಾತ್ಮ ಮಾರ್ಗದರ್ಶನಕ್ಕಾಗಿ ರಾತ್ರಿ ಹನ್ನೆರಡು ಗಂಟೆಗೆ ಕೋಣೆಯಲ್ಲಿ

ಇದಕ್ಕೆ ನಾನೊಂದು ಸರಳ ಉದಾಹರಣೆ ಕೊಡ್ತೀನಿ. ಇದು ನಡೆದಿದ್ದು 2017ರ ಏಪ್ರಿಲ್ ನಲ್ಲಿ. ನಮ್ಮಲ್ಲೇ ಒಬ್ಬ ಸಣ್ಣ ವಯಸ್ಸಿನ ಸಿಸ್ಟರ್ ಗೆ ಬಿಷಪ್ ಫ್ರಾಂಕೋ ಜತೆ ನಿಕಟ ಸಂಪರ್ಕ ಇತ್ತು. ಆ ಸಿಸ್ಟರ್ ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲಿ ಗಂಭೀರ ತಪ್ಪು ಮಾಡಿ ಸಿಕ್ಕಿಬಿದ್ದರು. ಆಗ ಬಿಷಪ್ ಫ್ರಾಂಕೋ ಆಕೆಯನ್ನು ಬೇರೆ ರಾಜ್ಯಕ್ಕೆ ಕಳಿಸುವಂತೆ ನಮ್ಮ ಮೇಲಿನವರಿಗೆ ತಿಳಿಸಿದರು. ಆ ರಾಜ್ಯದಲ್ಲಿ ನಮ್ಮದು ಮೂರಕ್ಕಿಂತ ಹೆಚ್ಚು ಕಮ್ಯೂನಿಟಿ ಇತ್ತು. ಅಲ್ಲಿ ಜೂನಿಯರ್ ಸಿಸ್ಟರ್ಸ್ ಮಾತ್ರ ಇರುತ್ತಿದ್ದರು. ಆ ನಂತರ ಅದೇ ವಾರ ಬಿಷಪ್ ಫ್ರಾಂಕೋ ಆ ಕಮ್ಯೂನಿಟಿಗೆ ವಿಶೇಷ ಭೇಟಿ ನೀಡಿದರು. ಆ ರಾತ್ರಿ ಅಲ್ಲೇ ಉಳಿದುಕೊಂಡರು. ಆ ರಾತ್ರಿ ಹನ್ನೆರಡು ಗಂಟೆ ತನಕ 'ಅಧ್ಯಾತ್ಮ ಮಾರ್ಗದರ್ಶನ'ಕ್ಕಾಗಿ ಬಿಷಪ್ ಫ್ರಾಂಕೋ ಕೋಣೆಯಲ್ಲೇ ಆ ಸಿಸ್ಟರ್ ಕೂಡ ಇದ್ದರು.

ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರ

ಹಲವಾರು ಸನ್ಯಾಸಿನಿಯರು ಚರ್ಚ್ ತೊರೆದಿದ್ದಾರೆ

ಹಲವಾರು ಸನ್ಯಾಸಿನಿಯರು ಚರ್ಚ್ ತೊರೆದಿದ್ದಾರೆ

ಕಳೆದ ಐದು ವರ್ಷಗಳಲ್ಲಿ ಬಿಷಪ್ ತೆಗೆದುಕೊಂಡ ಕ್ರಮದಿಂದಾಗಿ ಹಲವಾರು ಸನ್ಯಾಸಿನಿಯರು ಚರ್ಚ್ ತೊರೆದಿದ್ದಾರೆ. ಮಿಷನರೀಸ್ ಆಫ್ ಜೀಸಸ್ ಅನ್ನು ಇಪ್ಪತ್ತು ಸಿಸ್ಟರ್ ಗಳು ಕಳೆದ ಐದು ವರ್ಷದಲ್ಲಿ ತೊರೆದಿದ್ದಾರೆ. ಆದರೆ ಅವರು ಎದುರಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಎಲ್ಲ ಸಮಸ್ಯೆಗಳಿಗೆ ಬಿಷಪ್ ಫ್ರಾಂಕೋರನ್ನೇ ಅವಲಂಬಿಸಬೇಕು. ಇಲ್ಲಿರುವ ಹಿರಿಯಳ ಪೈಕಿ ನಾನೋ ಒಬ್ಬಳಾದರೂ ಸಿಸ್ಟರ್ ಗಳ ಜತೆ ಮುಕ್ತವಾಗಿ ಮಾತನಾಡುವುದು ಸಾಧ್ಯವೇ ಇರುತ್ತಿರಲಿಲ್ಲ. ನಾನು ಅಲ್ಲಿಂದ ಹೊರಬರುವುದಕ್ಕೆ ಅರ್ಜಿ ಹಾಕಿಕೊಂಡಾಗ ನನ್ನ ಎಲ್ಲ ನಾಲ್ಕು ಕಮ್ಯೂನಿಟಿ ಸದಸ್ಯರಾಗಿರುವವರೂ ಸಹ ಸಿದ್ಧರಾದರು. ಅಷ್ಟು ಜನ ಒಟ್ಟಿಗೆ ಬಿಟ್ಟು ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ನನ್ನ ಅರ್ಜಿ ರದ್ದು ಮಾಡಿದೆ. ಆದರೆ ಬಿಷಪ್ ಫ್ರಾಂಕೋ ಪೊಲೀಸ್ ದೂರುಗಳನ್ನು ದಾಖಲಿಸಿದರು. ನನ್ನ ಹಾಗೂ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರು. ಬಿಷಪ್ ರನ್ನು ಕೊಲ್ಲಲು ಬೆದರಿಕೆ ಹಾಕುತ್ತಿದ್ದೇವೆ ಎಂದು ಸಾಲುಸಾಲಾಗಿ ಪೊಲೀಸ್ ದೂರು ನೀಡಿದರು.

ಪೋಪ್ ಗೂ ಸೇರಿದಂತೆ ಹಲವರಿಗೆ ಪತ್ರ

ಪೋಪ್ ಗೂ ಸೇರಿದಂತೆ ಹಲವರಿಗೆ ಪತ್ರ

ನನ್ನ ಮೇಲೆ ಕರುಣೆ ಇದ್ದ ಇಬ್ಬರು ಬಿಷಪ್ ಗಳ ಸೂಚನೆ ಮೇರೆಗೆ ಸೈರೋ ಮಲಬಾರ್ ಚರ್ಚ್ ಮುಖ್ಯಸ್ಥರಿಗೆ ಪತ್ರ ನೀಡಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ಇತ್ಯಾದಿ ಆರೋಪಗಳನ್ನು ಮಾಡಿದ್ದರೂ ಹಲವು ಮಂದಿಯಿಂದ ಯಾವ ಸ್ಪಂದನೆಯೂ ಸಿಗಲಿಲ್ಲ. ಕೊನೆಗೆ ಈ ವರ್ಷದ ಮೇ ತಿಂಗಳಲ್ಲಿ ಪೋಪ್ ಗೂ ಸೇರಿದಂತೆ ರೋಮ್ ನ ಮೂರು ಚರ್ಚ್ ಗಳ ಅಧಿಕಾರಿಗಳಿಗೆ ಕೊರಿಯರ್ ಮೂಲಕ ಪತ್ರ ಕಳುಹಿಸಿದೆ. ಆ ಕೊರಿಯರ್ ತಲುಪಿದರೂ ಯಾರಿಂದಲೂ ಉತ್ತರ ಬರಲಿಲ್ಲ. ಆ ನಂತರ ಜೂನ್ ನಲ್ಲಿ ಕಾರ್ಡಿನಲ್ ಪಿಟ್ರೋ ಪರೋಲಿನ್ ಸೆಗ್ರೆಟರಿಯೋ ರಾಜ್ಯ ಕಾರ್ಯದರ್ಶಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
“From childhood we have been taught to believe that the Church is our mother. But in the light of my experience I am beginning to think that the Church is a stepmother to women and laity.” These are the words of the nun who has accused the Jalandhar Bishop James Franco Mulakkal of sexual abuse and rape.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more