Get Updates
Get notified of breaking news, exclusive insights, and must-see stories!

Bird Flu Alert: ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ- ಕರ್ನಾಟಕದಲ್ಲಿ ಕಟ್ಟೆಚ್ಚರ

ದೇಶಾದ್ಯಂತ ವರದಿಯಾಗುತ್ತಿರುವ ಹಕ್ಕಿ ಜ್ವರ ಪ್ರಕರಣಗಳು ಭೀತಿಯ ವಾತಾವರಣವನ್ನು ಸೃಷ್ಟಿಸಿವೆ. ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರ ಹೆಚ್ಚಾಗುತ್ತಿದ್ದು ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪೀಡಿತ ನೆರೆ ರಾಜ್ಯಗಳಿಂದ ಕೋಳಿ ಹಾಗೂ ಕೋಳಿ ಮೊಟ್ಟೆಗಳನ್ನು ಖರೀದಿಸುವುದಕ್ಕೆ ಬ್ರೇಕ್ ಹಾಕಲಾಗಿದೆ. ರಾಜ್ಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸಿ ಜನರು ಜಾಗರೂಕರಾಗಿರಲು ಕೇಳಿಕೊಂಡಿವೆ. ಹಾಗಾದರೆ ಏನಿದು ಹಕ್ಕಿ ಜ್ವರ? ಎಲ್ಲೆಲ್ಲಿ ಹರಡುತ್ತಿದೆ? ಇದಕ್ಕೆ ಕಾರಣ ಏನು? ಎಲ್ಲವನ್ನೂ ತಿಳಿಯೋಣ.

ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದಲ್ಲಿ ಹಕ್ಕಿ ಜ್ವರ (H5N1) ಹರಡಿದ ನಂತರ ಕರ್ನಾಟಕದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ರಾಜ್ಯದ ಉನ್ನತ ಆರೋಗ್ಯ ಅಧಿಕಾರಿಗಳು ಸೋಮವಾರ ಸಂಜೆ ಪರಿಸ್ಥಿತಿಯನ್ನು ಚರ್ಚಿಸಿ, ತಡೆಗಟ್ಟುವ ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ವೇಹವಾಗಿ ಹರಡುತ್ತಿದೆ.

Bird flu alert Bird flu in Andhra Pradesh Madhya Pradesh- Karnataka on high alert

ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ

ಮಧ್ಯಪ್ರದೇಶದ ಛಿಂದ್ವಾರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಇಲ್ಲಿನ ಆಡಳಿತ ಮಂಡಳಿ ಹಕ್ಕಿ ಜ್ವರ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಛಿಂದ್ವಾರದಲ್ಲಿ ಹಕ್ಕಿ ಜ್ವರ ಪತ್ತೆಯಾದ ಬಳಿಕ ಸಾವಿರಾರು ಕೋಳಿಗಳು ಮತ್ತು 40 ಸಾವಿರ ಮೊಟ್ಟೆಗಳನ್ನು ನಾಶಪಡಿಸಲಾಯಿತು. ಜೊತೆಗೆ ಮಾಂಸಾಹಾರಿ ಆಹಾರ ಮಾರಾಟವನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರದಲ್ಲಿ ಜನವರಿ 1ರಿಂದ 7,200 ಕೋಳಿಗಳನ್ನು ಕೊಲ್ಲಲಾಗಿದೆ. 2,230 ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಅಲ್ಲದೆ ಇಲ್ಲಿ ಏಳು ಹಕ್ಕಿ ಜ್ವರ ಕೇಂದ್ರಗಳನ್ನು ಗುರುತಿಸಲಾಗಿದೆ.

Bird flu alert Bird flu in Andhra Pradesh Madhya Pradesh- Karnataka on high alert

ಆಂಧ್ರಪ್ರದೇಶದಲ್ಲೂ ಹಕ್ಕಿ ಜ್ವರದ ಭೀತಿ

ಜೊತೆಗೆ ಆಂಧ್ರಪ್ರದೇಶದಲ್ಲೂ ಹಕ್ಕಿ ಜ್ವರ ಹೆಚ್ಚಾಗುತ್ತಿದೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಲಕ್ಷಾಂತರ ಕೋಳಿಗಳು ಸಾವನ್ನಪ್ಪಿದ್ದು ಇದಕ್ಕೆ ಹಕ್ಕಿ ಜ್ವರ ಕಾರಣ ಎಂದು ಪತ್ತೆ ಮಾಡಲಾಗಿದೆ. ಹಕ್ಕಿ ಜ್ವರ ಎಂದರೇನು? ಅದು ಮನುಷ್ಯರಿಗೆ ಎಷ್ಟು ಅಪಾಯಕಾರಿ, ಅದರ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಈಗ ತಿಳಿದುಕೊಳ್ಳೋಣ.

ಹಕ್ಕಿ ಜ್ವರ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹಕ್ಕಿ ಜ್ವರ ಸೋಂಕನ್ನು ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯುತ್ತಾರೆ. ಇದು ಎ ವಿಧದ ವೈರಸ್‌ನಿಂದ ಬರುತ್ತದೆ. ಮುಖ್ಯವಾಗಿ ಕೋಳಿ, ಇತರ ಪಕ್ಷಿಗಳು ಮತ್ತು ಕೆಲವು ಪ್ರಾಣಿ ಪ್ರಭೇದಗಳಿಗೆ ಸೋಂಕು ಹರಡುತ್ತದೆ. ಹಕ್ಕಿ ಜ್ವರವು ವಿಶೇಷವಾಗಿ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮನುಷ್ಯರಿಗೂ ಹರಡಬಹುದು. ಇದರಲ್ಲಿ H5N1, H7N9, H5N6, ಮತ್ತು H5N8 ಸೇರಿದಂತೆ ಹಲವಾರು ತಳಿಗಳಿವೆ. ಇವುಗಳಲ್ಲಿ ಕೆಲವು ಮಾರಕವಾಗಿದ್ದು ಪಕ್ಷಿಗಳ ಸಾವಿಗೆ ಕಾರಣವಾಗಬಹುದು.

ಹಕ್ಕಿ ಜ್ವರ ಏಕೆ ಹರಡುತ್ತಿದೆ?

ವಲಸೆ ಹಕ್ಕಿಗಳು: ಚಳಿಗಾಲದಲ್ಲಿ ಇತರ ದೇಶಗಳಿಂದ ಭಾರತಕ್ಕೆ ಅನೇಕ ಪಕ್ಷಿಗಳು ಬರುತ್ತವೆ. ಅವು ಈಗಾಗಲೇ ಹಕ್ಕಿ ಜ್ವರ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಸ್ಥಳೀಯ ಪಕ್ಷಿಗಳಲ್ಲಿ ರೋಗ ವೇಗವಾಗಿ ಹರಡುತ್ತದೆ.

ಸೋಂಕಿತ ಪಕ್ಷಿಗಳೊಂದಿಗೆ ಸಂಪರ್ಕ: ಆರೋಗ್ಯವಂತ ಪಕ್ಷಿಯು ಅನಾರೋಗ್ಯ ಪೀಡಿತ ಹಕ್ಕಿಯೊಂದಿಗೆ ವಾಸಿಸುತ್ತಿದ್ದರೆ, ವೈರಸ್ ಅದರ ದೇಹವನ್ನು ಸಹ ಪ್ರವೇಶಿಸಬಹುದು, ಇದರಿಂದಾಗಿ ಸೋಂಕು ಹರಡಬಹುದು.

ಕೊಳಕು ಮತ್ತು ಅಜಾಗರೂಕತೆ: ಕೋಳಿ ಸಾಕಣೆ ಕೇಂದ್ರಗಳು ಮತ್ತು ಮುಕ್ತ ಮಾರುಕಟ್ಟೆಗಳಲ್ಲಿ ಸ್ವಚ್ಛತೆಯ ಕೊರತೆಯು ವೈರಸ್ ವೇಗವಾಗಿ ಹರಡಲು ಕಾರಣವಾಗುತ್ತದೆ. ಕಲುಷಿತ ನೀರು ಮತ್ತು ಆಹಾರ ಕೂಡ ಸೋಂಕನ್ನು ಉತ್ತೇಜಿಸುತ್ತದೆ.

ಹಕ್ಕಿ ಜ್ವರ ಮನುಷ್ಯರಿಗೆ ಹೇಗೆ ಹರಡುತ್ತದೆ?

ಸೋಂಕಿತ ಪಕ್ಷಿಗಳನ್ನು ಕೊಲ್ಲುವುದು, ಮುಟ್ಟುವುದು, ಅಡುಗೆ ಮಾಡುವುದು, ತಿನ್ನುವುದು ಅಥವಾ ಅವುಗಳ ಮಲ ಅಥವಾ ಮೂತ್ರದ ಸಂಪರ್ಕಕ್ಕೆ ಬರುವ ಮೂಲಕ ಹಕ್ಕಿ ಜ್ವರ ಮನುಷ್ಯರಿಗೆ ಹರಡಬಹುದು. ಕೋಳಿ ಸಾಕಣೆ ಕೇಂದ್ರಗಳು ಮತ್ತು ಮಾಂಸ ಮಾರುಕಟ್ಟೆಗಳು ಈ ವೈರಸ್ ಹರಡುವಿಕೆಗೆ ಹೆಚ್ಚಿನ ಅಪಾಯದ ಸ್ಥಳಗಳಾಗಿವೆ.

ಹಕ್ಕಿ ಜ್ವರದ ಲಕ್ಷಣಗಳು

ಪಕ್ಷಿಗಳಲ್ಲಿ: ಆಯಾಸ, ಹಸಿವಿನ ಕೊರತೆ, ಮೊಟ್ಟೆ ಇಡುವುದು ಕಡಿಮೆಯಾಗುವುದು, ರೆಕ್ಕೆಗಳು ಉದುರುವುದು, ಕಣ್ಣುಗಳಲ್ಲಿ ನೀರು ಬರುವುದು ಮತ್ತು ಹಠಾತ್ ಸಾವು.

ಮಾನವರಲ್ಲಿ: ತೀವ್ರ ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ಸ್ನಾಯು ನೋವು, ಉಸಿರಾಟದ ತೊಂದರೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ನ್ಯುಮೋನಿಯಾ

ಪ್ರಾಣಿಗಳಲ್ಲಿ: ಆಲಸ್ಯ, ತಿನ್ನುವುದು ಕಡಿಮೆಯಾಗುವುದು, ದೌರ್ಬಲ್ಯ ಮತ್ತು ಕೆಲವು ಸಂದರ್ಭಗಳಲ್ಲಿ ಹಠಾತ್ ಸಾವು. ಹಕ್ಕಿ ಜ್ವರ ಅಪರೂಪಕ್ಕೆ ಮನುಷ್ಯರಿಗೆ ಹರಡುತ್ತದೆ, ಆದರೆ ಇದು ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು, ಆದ್ದರಿಂದ ಜಾಗರೂಕತೆ ಮುಖ್ಯ.

ಹಕ್ಕಿ ಜ್ವರ ತಡೆಗಟ್ಟುವುದು ಹೇಗೆ?

ಚಳಿಗಾಲದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚಾಗುತ್ತವೆ. ಆದ್ದರಿಂದ ಜಾಗರೂಕರಾಗಿರುವುದು ಮುಖ್ಯ. ಹಕ್ಕಿ ಜ್ವರ ಹರಡಿರುವ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಸೋಂಕಿತ ಪಕ್ಷಿಗಳು ಅಥವಾ ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರಬೇಡಿ. ಕೋಳಿ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರವೇ ಸೇವಿಸಿ; ಹಸಿ ಅಥವಾ ಸರಿಯಾಗಿ ಬೇಯಿಸದ ಮಾಂಸವನ್ನು ಸೇವಿಸಬೇಡಿ. ಕೋಳಿ ಸಾಕಣೆ ಕೇಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಿ. ಯಾವುದೇ ಪಕ್ಷಿ ಅಥವಾ ಪ್ರಾಣಿಯು ರೋಗದ ಲಕ್ಷಣಗಳನ್ನು ತೋರಿಸಿದರೆ, ತಕ್ಷಣ ಸ್ಥಳೀಯ ಆಡಳಿತ ಅಥವಾ ಪಶುವೈದ್ಯಕೀಯ ಇಲಾಖೆಗೆ ತಿಳಿಸಿ.

ರಾಂಚಿಯಲ್ಲಿ ಎಚ್ಚರಿಕೆ

ರಾಂಚಿಯ ಪೀಡಿತ ಪ್ರದೇಶಗಳ 10 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರದೇಶಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೋಂಕನ್ನು ತಡೆಗಟ್ಟಲು ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ. ಅಲ್ಲದೆ ಹಕ್ಕಿ ಜ್ವರ ಹರಡುವುದನ್ನು ತಡೆಯಲು ಪಕ್ಷಿಗಳ ಖರೀದಿ ಮತ್ತು ಮಾರಾಟವನ್ನು ಸಹ ನಿಷೇಧಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಎಚ್ಚರಿಕೆ

ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಆಡಳಿತ ಎಲ್ಲಾ ಕೋಳಿ ಅಂಗಡಿಗಳು ಮತ್ತು ಕೋಳಿ ಸಾಕಣೆ ಕೇಂದ್ರಗಳನ್ನು ಬಂದ್ ಮಾಡಿದೆ. ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಮತ್ತು ಸಾಗಣೆಯನ್ನು ನಿಷೇಧಿಸಲಾಗಿದೆ. ಇನ್ನೂ ಜನರಿಗೆ ಕೋಳಿ ಮತ್ತು ಮೊಟ್ಟೆಗಳನ್ನು ಸೇವಿಸದಂತೆ ಸೂಚನೆ ನೀಡಲಾಗಿದೆ. ಅನಾರೋಗ್ಯ ಅಥವಾ ಸತ್ತ ಪಕ್ಷಿಗಳನ್ನು ತಕ್ಷಣವೇ ವರದಿ ಮಾಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+