ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಉತ್ಪಾದನೆ; ಶೀಘ್ರವೇ ಕೋರ್ಬೆವ್ಯಾಕ್ಸ್‌ ಬಿಡುಗಡೆ

|
Google Oneindia Kannada News

ನವದೆಹಲಿ, ಜುಲೈ 26: ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಉತ್ಪಾದನೆಯಾಗುತ್ತಿದ್ದು, ಶೀಘ್ರದಲ್ಲಿಯೇ ಬಯೋಲಾಜಿಕಲ್ ಇ ಸಂಸ್ಥೆ ತನ್ನ "ಕೋರ್ಬೆವ್ಯಾಕ್ಸ್‌" ಲಸಿಕೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.

ಹೈದರಾಬಾದ್ ಮೂಲದ ಔಷಧ ಸಂಸ್ಥೆ ಬಯೋಲಾಜಿಕಲ್ ಇ ಸಂಸ್ಥೆ ಇದೇ ಸೆಪ್ಟೆಂಬರ್ ಕೊನೆಗೆ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ.

ಭಾರತದಲ್ಲಿ 3.29 ಕೋಟಿ ಡೋಸ್ ಲಸಿಕೆ ಇನ್ನೂ ಬಳಕೆಯಾಗಿಲ್ಲ; ಕೇಂದ್ರ ಭಾರತದಲ್ಲಿ 3.29 ಕೋಟಿ ಡೋಸ್ ಲಸಿಕೆ ಇನ್ನೂ ಬಳಕೆಯಾಗಿಲ್ಲ; ಕೇಂದ್ರ

ಕೋರ್ಬೆವ್ಯಾಕ್ಸ್‌ ಲಸಿಕೆಯ ಒಂದನೇ ಹಾಗೂ ಎರಡನೇ ಹಂತದ ಪ್ರಯೋಗಗಳು ಪೂರ್ಣಗೊಂಡಿದ್ದು, ಭರವಸೆಯ ಫಲಿತಾಂಶ ದೊರೆತಿದೆ. ಇದೀಗ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗುತ್ತಿದೆ.

Biological Es Corona Vaccine Corbevax Likely To Launch In September

ಭಾರತದಲ್ಲಿ ಕೊರೊನಾ ಮೂರನೇ ಅಲೆಯನ್ನು ನಿಭಾಯಿಸಲು ಹೆಚ್ಚೆಚ್ಚು ಲಸಿಕೆಗಳ ಉತ್ಪಾದನೆಯಾಗಬೇಕು ಎಂದು ಕೇಂದ್ರ ಪ್ರಕಟಿಸಿದ ಬೆನ್ನಲ್ಲೇ ಸಿದ್ಧತೆ ಚುರುಕುಗೊಂಡಿದೆ. ಬಯೋಲಾಜಿಕಲ್ ಇ ಸಂಸ್ಥೆಗೆ ಕೊರೊನಾ ಲಸಿಕೆ ಉತ್ಪಾದನೆಗೆ ಕೇಂದ್ರ ಆರ್ಥಿಕ ನೆರವನ್ನೂ ಒದಗಿಸುತ್ತಿದೆ.

ಇದೇ ಆಗಸ್ಟ್‌ ತಿಂಗಳಿನ ಕೊನೆಯಲ್ಲಿ ಸಂಸ್ಥೆಯು ಲಸಿಕೆಯ ತುರ್ತು ಬಳಕೆಯ ಅನುಮೋದನೆಗೆ ಅರ್ಜಿ ಸಲ್ಲಿಸಲಿದ್ದು, ಡಿಸೆಂಬರ್ ವೇಳೆಗೆ ಭಾರತ ಸರ್ಕಾರಕ್ಕೆ 300 ಮಿಲಿಯನ್ ಡೋಸ್ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದೆ.

ಭಾರತದಲ್ಲಿ ಜನವರಿ 16ರಿಂದ ಬೃಹತ್ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಈವರೆಗೂ ಮೂರು ಕೊರೊನಾ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ.

English summary
Hyderabad based Biological E's COVID-19 vaccine Corbevax likely to be launched by September end,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X