ರಣ ಬಿಸಿಲಿಗೆ ಈ ರಾಜ್ಯ ತತ್ತರ: 54 ವರ್ಷದ ದಾಖಲೆ ಉಡೀಸ್
ಕರ್ನಾಟಕದ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಮಳೆ ಆದರೆ ಆಯಿತು. ಇಲ್ಲದಿದ್ದರೆ ಸೂರ್ಯ ದೇವನ ಅವ ಕೃಪೆ ಜನರ ನಿದ್ದೇ ಗೆಡಿಸಿದೆ. ಈ ಬಾರಿಯಂತೂ ರಾಜ್ಯದಲ್ಲಿ ದಾಖಲೆಯ ಪ್ರಮಾಣದ ಬಿಸಿಲು ದಾಖಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ರಾಜ್ಯದನವನ್ನು ಪ್ರವೇಶಿಸಲಿದ್ದು, ಜನ ಆಗಸದತ್ತ ಮುಖ ಮಾಡಿ ನಿಲ್ಲುವ ಪರಿಸ್ಥಿತಿ ಬಂದಿದೆ.
ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ರಾಜ್ಯ ಹಿಂದೆದೂ ಅನುಭವಿಸಿದ ಬರವನ್ನು ಅನುಭವಿಸಿದೆ. ರಣ ರಣ ಬಿಸಿಲು ಬರೀ ಕರ್ನಾಟಕಕ್ಕೆ ಅಷ್ಟೇ ಕಾಟ ನೀಡುತ್ತಿಲ್ಲ. ಬದಲಿಗೆ ಈಡೀ ದೇಶದ ಜನರ ನಿದ್ದೆಯನ್ನು ಹಾಳು ಮಾಡಿದೆ. ದೆಹಲಿಯಲ್ಲಂತೂ ತಾಪಾಮಾನ ದಾಖಲೆ ಮುಟ್ಟಿದೆ.

ದಾಖಲೆಯ ಬಿಸಿಲು, ವಿದ್ಯಾರ್ಥಿಗಳು ಅಸ್ವಸ್ಥ
ಉತ್ತರ ಭಾರತದಲ್ಲಿ ಬಿಸಿಲಿನ ಹೊಡೆತಕ್ಕೆ ಜನ ನಲುಗಿದ್ದಾರೆ. ಬಿಸಿಲಿನ ಬೇಗೆ ಬಿಹಾರದಲ್ಲೂ ಹಾಹಾಕಾರ ಎಬ್ಬಿಸಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶೇಖಪುರ, ಬೇಗುಸರಾಯ್‌ನಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಲಿನ ತಾಪಕ್ಕೆ ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ವಿದ್ಯಾರ್ಥಿನಿಯರ ಆರೋಗ್ಯ ಹದಗೆಟ್ಟಿದ್ದರಿಂದ ಶಾಲೆಯಲ್ಲಿ ಅವ್ಯವಸ್ಥೆ ಉಂಟಾಗಿದೆ.
ರಣ ಬಿಸಿಲಿನ ಝಳವನ್ನು ತಾಳಲಾರದೆ ಒದ್ದಾಡುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿನಿಯರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಜನರು ಹಿಡಿ ಶಾಪ ಹಾಕಿದ್ದಾರೆ.
ತಾಪಮಾನ 45 ಡಿಗ್ರಿ
ಬಿಹಾರದ ಬಹುತೇಕ ನಗರಗಳಲ್ಲಿ ತಾಪಮಾನವು 45 ಡಿಗ್ರಿ ದಾಟಿದೆ. ಔರಂಗಾಬಾದ್ ಜಿಲ್ಲೆಯಲ್ಲಿ ತಾಪಮಾನವು 48 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ಇದ್ದರೂ ಸಹ ಶಾಲೆಗಳು ಓಪನ್ ಇವೆ. ಶಾಲೆಯಲ್ಲಿ ವಿದ್ಯರ್ಥಿಗಳು ಬಿಸಿಲಿನ ಧಗೆಯನ್ನು ತಾಳಲಾರೆದ ಒದ್ದಾಟ ನಡೆಸಿದ್ದಾರೆ. ಶಿಕ್ಷಕರೂ ಸಹ ಬಿಸಿಲಿನ ಶಾಖದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಹವಾಮಾನ ಇಲಾಖೆ ಬಿಹಾರದಲ್ಲಿ ಎಚ್ಚರಿಕೆಯನ್ನು ನೀಡಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಬಿಸಿಗಾಳಿ ಹಾಗೂ 7 ಜಿಲ್ಲೆಗಳಲ್ಲಿ ರಾತ್ರಿ ಬಿಸಿ ಗಾಳಿ ಇರುವು ಬಗ್ಗೆ ಮುನ್ನೆಚರಿಕೆ ನೀಡಿದೆ. ಬುಧವಾರ ಬಕ್ಸರ್, ಔರಂಗಾಬಾದ್, ಗಯಾ, ಕೈಮೂರ್ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ಬಿಸಿಗಾಳಿಯ ಪರಿಣಾಮ ಕಂಡುಬರುತ್ತದೆ. ಇನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಗಯಾದಲ್ಲೂ ಬಿಸಿಲು ಕಾಟ ನೀಡಿದೆ. ಅಲ್ಲದೆ 54 ವರ್ಷಗಳಲ್ಲೇ ದಾಖಲೆಯ ಪ್ರಮಾಣದ ತಾಪಮಾನ ದಾಖಲಾಗಿದೆ.
ಮಂಗಳವಾರ ತಾಪಮಾನ ಎಷ್ಟಿತ್ತು?
ಮಂಗಳವಾರ, ಬಕ್ಸಾರ್‌ನಲ್ಲಿ 46.4 ಡಿಗ್ರಿ ಸೆಲ್ಸಿಯಸ್, ಗಯಾದಲ್ಲಿ 46.8, ಚಪ್ರಾದಲ್ಲಿ 41, ಡೆಹ್ರಿಯಲ್ಲಿ 47, ಶೇಖ್‌ಪುರದಲ್ಲಿ 42.9, ಜಮುಯಿಯಲ್ಲಿ 42.5, ಭೋಜ್‌ಪುರದಲ್ಲಿ 45.6, ವೈಶಾಲಿಯಲ್ಲಿ 43.9 ಮತ್ತು ರಾಜ್ಗ್‌ನಲ್ಲಿ 44.1 ಡಿಗ್ರಿ ಸೆಲ್ಸಿಯಸ್ ಇತ್ತು.
ಬಿಸಿಲು ವಿರೋಧ ಪಕ್ಷದವರಿಗೆ ಆಹಾರವಾಗಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿ ಹಾಯುತ್ತಿವೆ. ಇನ್ನಾದರೂ ಶಾಲೆಗಳ ಸಮಯವನ್ನು ಬದಲಿಸುವಂತೆ ತಿಳಿಸುತ್ತಿವೆ.












Click it and Unblock the Notifications