ಬಿಹಾರ: ರೈಲು ಇಂಜಿನ್ ಕದಿಯಲು ಸುರಂಗ ಕೊರೆದ ಕಳ್ಳರು
ಬೇಗುಸರಾಯ್ ನವೆಂಬರ್ 26: ರೈಲು ಇಂಜಿನ್ ಕದಿಯಲು ಕಳ್ಳರ ಗ್ಯಾಂಗ್‌ವೊಂದು ಸುರಂಗ ಕೊರೆದ ಘಟನೆ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಗರ್ಹರಾ ರೈಲ್ವೇ ಯಾರ್ಡ್‌ಗೆ ಅಪರಿಚಿತರ ಗುಂಪೊಂದು ಸುರಂಗ ಕೊರೆದು ರಿಪೇರಿಗಾಗಿ ಯಾರ್ಡ್‌ನಲ್ಲಿ ಇರಿಸಲಾಗಿದ್ದ ರೈಲಿನ ಸಂಪೂರ್ಣ ಡೀಸೆಲ್ ಎಂಜಿನ್ ಅನ್ನು ಭಾಗಶಃ ಕದ್ದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗರ್ಹರಾ ಯಾರ್ಡ್‌ಗೆ ದುರಸ್ತಿಗಾಗಿ ತಂದ ಡೀಸೆಲ್ ಎಂಜಿನ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬರೌನಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಮುಜಾಫರ್‌ಪುರದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ಪಿ ಎಸ್ ದುಬೆ ತಿಳಿಸಿದ್ದಾರೆ.
ವಿಚಾರಣೆ ವೇಳೆ, ಮೂವರು ಬಂಧಿತರು ರೈಲ್ವೇ ಯಾರ್ಡ್‌ಗೆ ಸುರಂಗ ಕೊರೆದು, ಅದರ ಮೂಲಕ ಇಂಜಿನ್‌ನ ಭಾಗಗಳು ಮತ್ತು ಇತರ ವಸ್ತುಗಳನ್ನು ಗೋಣಿಚೀಲಗಳಲ್ಲಿ ಸಾಗಿಸುತ್ತಿದ್ದರು ಎಂದು ಹೇಳಿದ್ದಾರೆ.

ಬಂಧಿತ ವ್ಯಕ್ತಿಗಳು ವಿಚಾರಣೆಯ ಸಮಯದಲ್ಲಿ ಸ್ಕ್ರ್ಯಾಪ್ ಗೋಡೌನ್‌ನ (scrap godown) ಮಾಲೀಕರನ್ನೂ ಉಲ್ಲೇಖಿಸಿದ್ದಾರೆ. ಮಾಹಿತಿಯ ಆಧಾರದ ಮೇಲೆ, ಮುಜಫರ್‌ಪುರ ಜಿಲ್ಲೆಯ ಪ್ರಭಾತ್ ನಗರ ಪ್ರದೇಶದಲ್ಲಿನ ಸ್ಕ್ರ್ಯಾಪ್ ಗೋಡೌನ್‌ನಲ್ಲಿ ಶೋಧ ನಡೆಸಲಾಯಿತು, ಅಲ್ಲಿ ಪೊಲೀಸರು ರೈಲುಗಳಲ್ಲಿ ಬಳಸುವ ಉಪಕರಣಗಳ 13 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್‌ಗಳ ಚಕ್ರಗಳು ಮತ್ತು ಭಾರವಾದ ಕಬ್ಬಿಣದಿಂದ ಮಾಡಿದ ರೈಲ್ವೆ ಭಾಗಗಳು ಸೇರಿವೆ ಎಂದು ದುಬೆ ಹೇಳಿದ್ದಾರೆ. ಸದ್ಯ ಸ್ಕ್ರ್ಯಾಪ್ ಗೋಡೌನ್ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಈ ಗ್ಯಾಂಗ್ ಸ್ಟೀಲ್ ಬ್ರಿಡ್ಜ್‌ಗಳನ್ನು ಬಿಚ್ಚುವುದು ಮತ್ತು ಅವುಗಳ ಭಾಗಗಳನ್ನು ಕದಿಯುವಲ್ಲಿ ಸಹ ತೊಡಗಿಸಿಕೊಂಡಿದೆ. ಕಳೆದ ವರ್ಷ, ಸಮಸ್ತಿಪುರ ಲೋಕೋ ಡೀಸೆಲ್ ಶೆಡ್‌ನ ರೈಲ್ವೇ ಇಂಜಿನಿಯರ್ ಅವರನ್ನು ಪೂರ್ಣಿಯಾ ನ್ಯಾಯಾಲಯದ ಆವರಣದಲ್ಲಿ ಇರಿಸಲಾಗಿದ್ದ ಹಳೆಯ ಸ್ಟೀಮ್ ಎಂಜಿನ್ ಅನ್ನು ಮಾರಾಟ ಮಾಡಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಇಂಜಿನಿಯರ್ ಇತರ ರೈಲ್ವೇ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಶಾಮೀಲಾಗಿ ಇಂಜಿನ್ ಮಾರಾಟ ಮಾಡಲು ಸಮಸ್ತಿಪುರದ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಅವರ ನಕಲಿ ಪತ್ರವನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಎಲ್ಲದರ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಎಂದು ದುಬೆ ಹೇಳಿದ್ದಾರೆ.
-
Bengaluru Metro: ORR ರಸ್ತೆಯ ನೀಲಿ ಮಾರ್ಗದಲ್ಲಿ ಸಂಯೋಜಿತ ಗರ್ಡರ್ ಸ್ಥಾಪನೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications