ಬಿಹಾರ: ರಾಮನವಮಿ ಹಿಂಸಾಚಾರ ಪೂರ್ವಯೋಜಿತ- ಗಲಭೆಯ ಮಾಸ್ಟರ್ ಮೈಂಡ್ ಬಂಧನ
ಬಿಹಾರಶರೀಫ್/ಹೊಸದಿಲ್ಲಿ ಏಪ್ರಿಲ್ 10: ದೇಶದ ಹಲವೆಡೆ ರಾಮನವಮಿಯ ಆಚರಣೆ ವೇಳೆ ಹಿಂಸಾಚಾರಗಳು ನಡೆದಿರುವುದು ಈಗಾಗಲೇ ಗೊತ್ತಿರುವ ವಿಚಾರ. ಆದರೆ ಈ ಹಿಂಸಾಚಾರಗಳಲ್ಲಿ ಹಲವು ಪೂರ್ವಯೋಜಿತ ಎಂದು ಬಿಹಾರ್ ಪೊಲೀಸರು ತಿಳಿಸಿದ್ದಾರೆ.
ರಾಮನವಮಿಯಂದು ಬಿಹಾರದಲ್ಲಿ ನಡೆದ ಗಲಭೆ ಪೂರ್ವಯೋಜಿತ ಎಂದು ತಿಳಿದುಬಂದಿದೆ. ಈ ಪ್ಲ್ಯಾನ್ ಮಾಡಿದ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ಸದ್ಯ ಬಂಧಿಸಿದ್ದಾರೆ. ಈತ ನಳಂದಾದ ಬಿಹಾರಶರೀಫ್‌ನಲ್ಲಿ ನಡೆದ ಹಿಂಸಾಚಾರದ ರೂವಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಸಾಮಾಜಿಕ ಮಾಧ್ಯಮ ಮತ್ತು 456 ಸದಸ್ಯರನ್ನು ಹೊಂದಿರುವ ವಾಟ್ಸಾಪ್ ಗುಂಪಿನ ಮೂಲಕ ಗಲಭೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಳಂದ ಜಿಲ್ಲೆಯ ಬಜರಂಗದಳದ ಸಂಚಾಲಕ ಹಾಗೂ ಬಂಧಿತ ಕುಂದನ್ ಕುಮಾರ್ ಬಂಧಿತ ಆರೋಪಿ. ಇವರು ರಾಮ ನವಮಿಯ ಮುನ್ನ ರಚಿಸಲಾದ ವಾಟ್ಸಾಪ್ ಗ್ರೂಪ್‌ನ ಅಡ್ಮಿನ್ ಆಗಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗವಾರ್ ಅವರು ಈತನ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ರಾಮನವಮಿ ಹಿಂಸಾಚಾರ ಪೂರ್ವಯೋಜಿತ
ಬಿಹಾರ್‌ನಲ್ಲಿ ಗಲಭೆಯ ನಂತರ ಶಾಂತಿ ಕಾಪಾಡಲು ಅಶಾಂತಿ ಉಂಟು ಮಾಡಿದ ಕೆಲ ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ಆರಂಭದಲ್ಲಿ ಇವರು ಮಾಸ್ಟರ್ ಮೈಂಡ್ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ ಪೊಲೀಸರು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಪ್ರಾರಂಭಿಸಿದ ನಂತರ ಕುಂದನ್ ಕುಮಾರ್ ಶರಣಾಗಿದ್ದಾರೆ. ಗ್ರೂಪ್‌ನ ಮತ್ತೋರ್ವ ಅಡ್ಮಿನ್ ಕಿಶನ್ ಕುಮಾರ್ ಕೂಡ ಶರಣಾಗಿದ್ದಾರೆ.

ವಾಟ್ಸಾಪ್ ಗುಂಪಿನಲ್ಲಿ ಹಿಂಸಾಚಾರವನ್ನು ಹರಡಲು ಸಂಚು ರೂಪಿಸಲಾಗಿದೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಕಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿರುವುದು ತನಿಖೆಯಿಂದ ಬಯಲಾಗಿದೆ. ಇತರ ಸಮುದಾಯದ ಸದಸ್ಯರ ವಿರುದ್ಧ ನಕಲಿ ವಿಡಿಯೋಗಳನ್ನು ಹರಡಲು, ಜನರನ್ನು ಪ್ರಚೋದಿಸಲು ಈ ಗುಂಪನ್ನು ಬಳಸಲಾಗುತ್ತಿತ್ತು ಎಂದು ಆರಂಭಿಕ ತನಿಖೆಗಳು ಬಹಿರಂಗಪಡಿಸುತ್ತವೆ.
ಗಲಭೆಯ ಮಾಸ್ಟರ್ ಮೈಂಡ್ ಬಂಧನ
ನಳಂದದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರಲ್ಲಿ ಐವರನ್ನು ಬಂಧಿಸಲಾಗಿದೆ. ಕುಂದನ್ ಕುಮಾರ್ ಸೇರಿದಂತೆ ಇಬ್ಬರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ನಾಪತ್ತೆಯಾಗಿರುವ ಆರೋಪಿಯನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿಗಳ ವಶದಿಂದ ಕೆಲವು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಮೂಲಕ ಅವರು ಆಪಾದಿತ ವಿಷಯಗಳನ್ನು ಅಪ್‌ಲೋಡ್ ಮಾಡಿದ್ದಾರೆನ್ನುವುದು ಬಯಲಾಗಿದೆ.

ರಾಮನವಮಿ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ
ಮಾರ್ಚ್ 31 ರಂದು ರಾಮನವಮಿ ಮೆರವಣಿಗೆಯಲ್ಲಿ ಬಿಹಾರ್ ಷರೀಫ್ ಹಿಂಸಾಚಾರ ಯುವಕನ ಸಾವಿಗೆ ಕಾರಣವಾಯಿತು. ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿಯೂ ಎರಡು ಗುಂಪುಗಳ ನಡುವೆ ಘರ್ಷಣೆಗಳು ವರದಿಯಾಗಿವೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಹಿಂದೆ ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು "ಗಡ್ಬದ್" (ಕಿಡಿಗೇಡಿತನ) ದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದ ಉಂಟಾಗಿದೆ ಎಂದು ಆರೋಪಿಸಿದ್ದರು.
"ಸಸಾರಾಮ್ ಮತ್ತು ಬಿಹಾರ ಷರೀಫ್‌ನಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಕೋಮು ಉದ್ವಿಗ್ನತೆಗಳು ಗೊಂದಲವನ್ನುಂಟುಮಾಡುತ್ತವೆ. ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಸಂಭವಿಸಿವೆ. ಇದು ಸ್ವಾಭಾವಿಕವಲ್ಲ," ಶ್ರೀ ಕುಮಾರ್ ಹೇಳಿದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications