Video: ಕಚ್ಚಿದ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದ ಭೂಪ: ಎದ್ದು ಕುಳಿತ ಮಲಗಿದ್ದ ರೋಗಿಗಳು!
ಹಾವುಗಳನ್ನು ಕಂಡರೆ ಅನೇಕರಿಗೆ ಭಯವಾಗುವುದು ಸಹಜ. ಅದರಲ್ಲೂ ನಾಗರಹಾವು ಇತರ ವಿಷಕಾರಿ ಹಾವುಗಳನ್ನು ಕಂಡರೆ ಮಾರುದ್ದ ಓಡಿಹೋಗುವವರೇ ಹೆಚ್ಚು. ಆದ್ರೆ ಇಲ್ಲೊಂದು ವೈರಲ್ ಆದ ವಿಡಿಯೋವನ್ನು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ..?
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆಸ್ಪತ್ರೆಗೆ ಬಂದಿರುವುದು ಕಂಡು ಬಂದಿದೆ. ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಅದೇ ಹಾವನ್ನು ಕುತ್ತಿಗೆಗೆ ಹಾಕಿಕೊಂಡು ಆತ ಆಸ್ಪತ್ರೆಗೆ ಬಂದಿದ್ದಾನೆ. ಹಾವಿನ ಬಾಯಿಯನ್ನು ಕೈಯಿಂದ ಬಿಗಿಯಾಗಿ ಹಿಡಿದುಕೊಂಡ ವ್ಯಕ್ತಿ ಆಸ್ಪತ್ರೆಗೆ ಹೋದಾಗ ಆತನನ್ನು ಕಂಡ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಭಯಗೊಂಡಿದ್ದಾರೆ.

ಆ ವ್ಯಕ್ತಿಯ ಕುತ್ತಿಗೆಯಲ್ಲಿ ಹಾವನ್ನು ನೋಡಿದ ಜನರು ಭಯದಿಂದ ಕೂಗಲಾರಂಭಿಸಿದ್ದಾರೆ. ಈತ ಹಾವನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದು, ಕೂಡಲೇ ಚಿಕಿತ್ಸೆ ಕೊಡಿಸುವಂತೆ ವೈದ್ಯರಲ್ಲಿ ಬೇಡಿಕೊಳ್ಳುತ್ತಾನೆ. ವೈದ್ಯರು ಹಾಗೂ ಸಿಬ್ಬಂದಿ ಹಾವನ್ನು ಚೀಲದಲ್ಲಿ ಕಟ್ಟಿ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೋ ನೋಡಿದವರು ಹಾವು ಎಲ್ಲಿಂದ ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
The video is from Bhagalpur. After being bitten by the snake🐍 , the man brought it with him to the hospital to help identify the species.
— Kumar Manish (@kumarmanish9) October 16, 2024
The emergency response system at the public hospital looks far from satisfactory. #Biharpic.twitter.com/PQgopQTE6L
ನಾಗರಹಾವು ಕಚ್ಚಿದರೆ ಏನಾಗುತ್ತದೆ?
ನಾಗರಹಾವು ತುಂಬಾ ವಿಷಕಾರಿ ಹಾವು. ಇದರ ಕಡಿತ ತುಂಬಾ ಅಪಾಯಕಾರಿ. ಈ ಹಾವಿನ ವಿಷವು ತುಂಬಾ ವೇಗವಾಗಿ ಪರಿಣಾಮ ಬೀರುತ್ತದೆ. ಈ ಹಾವು ಕಚ್ಚಿದ ವ್ಯಕ್ತಿಗೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅಂಗಾಂಗ ವೈಫಲ್ಯದಂತಹ ಸಮಸ್ಯೆಗಳು ಕಂಡುಬರುತ್ತವೆ. ಈ ಹಾವು ಕಚ್ಚಿದ ತಕ್ಷಣ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮೊದಲ ಹಾವು ಕಚ್ಚಿದ ನಂತರ ರಕ್ತಸ್ರಾವವಾಗುತ್ತದೆ. ಕಚ್ಚಿದ ಸ್ಥಳ ಊದಿಕೊಳ್ಳುತ್ತದೆ ಮತ್ತು ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಹಾವಿನ ವಿಷವು ದೇಹದಲ್ಲಿ ಹರಡುವುದರಿಂದ ತಲೆತಿರುಗುವಿಕೆ ಮತ್ತು ದೃಷ್ಟಿ ಮಂದವಾಗುವುದು ಮುಂತಾದ ತೊಂದರೆಗಳು ಉಂಟಾಗುತ್ತವೆ. ಕೆಲವರಿಗೆ ತಲೆತಿರುಗುವಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ. ಈ ವಿಷ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕೆಂಪು ಮೂತ್ರಕ್ಕೆ ಕಾರಣವಾಗಬಹುದು.
ನಾಗರಹಾವು ಕಚ್ಚಿದರೆ ಏನು ಮಾಡಬೇಕು?
ನಾಗರಹಾವು ಕಚ್ಚಿದರೆ ತಕ್ಷಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯವಿರುತ್ತದೆ. ವಿಷ ದೇಹದಲ್ಲಿ ಹರಡುವ ಮೊದಲು ಕಚ್ಚಿದ ಸ್ಥಳದ ಪಕ್ಕದಲ್ಲಿ ಬಿಗಿಯಾಗಿ ಕಟ್ಟಬೇಕು. ಭಯದಿಂದ ಓಡುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ವಿಷವು ದೇಹದ ಮೂಲಕ ವೇಗವಾಗಿ ಹರಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಅತ್ಯಗತ್ಯ.
ಕುಡಿದ ಅಮಲಿನಲ್ಲಿ ಕತ್ತಿಗೆ ಹಾವು ಹಾಕಿಕೊಂಡ ವ್ಯಕ್ತಿ
ಕಳೆದ ದಿನ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಕತ್ತಿಗೆ ಹಾವು ಹಾಕಿಕೊಂಡಿರುವ ದೃಶ್ಯ ವೈರಲ್ ಆಗಿತ್ತು. ದೈತ್ಯ ಹಾವನ್ನು ಕತ್ತಿಗೆ ಹಾಕಿಕೊಂಡು ಕುಳಿತ ವ್ಯಕ್ತಿ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದನು. ಆತನಿಂದ ದೂರ ನಿಂತುಕೊಂಡ ಜನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಹಾವಿನಿಂದ ದೂರ ಬರುವಂತೆ ಜನ ಎಷ್ಟೇ ಕೂಗಿ ಹೇಳಿದರೂ ವ್ಯಕ್ತಿ ಹಾವಿನೊಂದಿಗೆ ಮಾತನಾಡುತ್ತ ಕುಳಿತಿರುವುದು ಕಂಡು ಬಂದಿದೆ.












Click it and Unblock the Notifications