ಬಿಹಾರ ಜನತೆಯ ವಿಶ್ವಾಸ ಉಳಿಸಿಕೊಳ್ಳದ ನಿತೀಶ್ ರಾಜೀನಾಮೆ ನೀಡಲಿ: ಬಿಜೆಪಿ

Posted By:
Subscribe to Oneindia Kannada

ನವದೆಹಲಿ, ಜುಲೈ 15: ಬಿಹಾರದ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲಾಗದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ನನ್ನ ಪುತ್ರ ರಾಜಿನಾಮೆ ನೀಡುವುದಿಲ್ಲ: ಲಾಲೂ ಸ್ಪಷ್ಟನೆ

ಬಿಹಾರದಲ್ಲಿ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಅವರ ಕುಟುಂಬಸ್ಥರು ಎದುರಿಸಿತ್ತಿರುವ ಸಿಬಿಐ(ಕೇಂದ್ರ ತನಿಖಾ ದಳ) ತನಿಖೆಯನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ರಾಮೇಶ್ವರ್ ಚೌರಾಸಿಯಾ, ಇಂಥ ಅನ್ನಿವೇಶದಲ್ಲಿ ಬಿಹಾರ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ.

Bihar CM Nitish Kumar shoud resign: BJP

ಜೆಡಿಯು ಮತ್ತು ಆರ್ ಜೆಡಿ ಮೈತ್ರಿ ಸರ್ಕಾರ ಬಿಹಾರದಲ್ಲಿಸಂಪೂರ್ಣ ವಿಫಲವಾಗಿದೆ. ಜನರು ನಿತೀಶ್ ಕುಮಾರ್ ಸರ್ಕಾರದ ಮೇಲೆ ಇಟ್ಟಿದ್ದ ವಿಶ್ವಾಸ ಮಣ್ಣುಪಾಲಾಗಿದೆ. ಜನರಿಗೆ ನೀಡೀದ ಭರವಸೆಯನ್ನು ಅವರು ಉಳಿಸಿಕೊಳ್ಳುತ್ತಿಲ್ಲ ಎಂದ ಅವರು, ಬಿಹಾರದ ಉಪಮುಖ್ಯಮಂತ್ರಿ, ಲಾಲೂ ಪುತ್ರ ತೇಜಸ್ವಿ ಯಾದವ್ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಈ ಎಲ್ಲ ಕಾರಣಗಳಿಂದ ನಿತೀಶ್ ಕುಮಾರ್ ರಾಜೀನಾಮೆ ನೀಡೀ ಮತ್ತೊಮ್ಮೆ ಚುನಾವಣೆ ಎದುರಿಸಬೇಕು ಎಂದು ಚೌರಾಸಿಯ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP leader Rameshwar Chaurasia said that Nitish Kumar should resign as he is not working as per the spirit of the mandate that he got from people of Bihar.
Please Wait while comments are loading...