ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: ಭಾರೀ ಕುತೂಹಲ ಹುಟ್ಟುಹಾಕಿದ 3 ಸಮೀಕ್ಷೆ

|
Google Oneindia Kannada News

ಪಾಟ್ನಾ, ನವದೆಹಲಿ, ಅ 9 : ಬಿಹಾರ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಸರ್ವಪಿತೃ ಅಮಾವಾಸ್ಯೆಯ ದಿನವಾದ ಅಕ್ಟೋಬರ್ ಹನ್ನೆರಡು ಸೋಮವಾರದಂದು ನಡೆಯಲಿದೆ.

ಅಕ್ಟೋಬರ್ ಹನ್ನೆರಡರ ನಂತರ ಚುನಾವಣೆ ಮುಗಿಯುವವರೆಗೆ ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ.

ಜೀ ಮಿಡಿಯಾ ಗ್ರೂಪ್ ಇತ್ತೀಚೆಗೆ ಪ್ರಕಟಿಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯಗಳಿಸುವ ಸಾಧ್ಯತೆಯಿದೆ ಎಂದು ಹೇಳಿತ್ತು. ಸೆಪ್ಟಂಬರ್ 29 ಮತ್ತು 30 ರಂದು ನಡೆಸಿದ ಜನಾಭಿಪ್ರಾಯದಲ್ಲಿ ಈ ಅಂಶ ತಿಳಿದು ಬಂದಿತ್ತು. (ಬಿಹಾರ ಚುನಾವಣಾಪೂರ್ವ ಸಮೀಕ್ಷೆ: ಜಿದ್ದಾಜಿದ್ದಿನ ಫೈಟ್)

ಇದುವರೆಗೆ ಹಲವು ವಾಹಿನಿಗಳು, ಮಾಧ್ಯಮಗಳು ನಡೆಸಿದ ಚುನಾವಣಾಪೂರ್ವ ಸಮೀಕ್ಷೆಗಳು ವಿಭಿನ್ನವಾದ ಫಲಿತಾಂಶವನ್ನು ನೀಡಿದ್ದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಎನ್ಡಿಎ ಮೈತ್ರಿಕೂಟ ತನ್ನ ಶಕ್ತಿ ವೃದ್ದಿಸಿಕೊಂಡಿದ್ದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಐದು ಹಂತದಲ್ಲಿ ನಡೆಯುವ ಬಿಹಾರ ಚುನಾವಣೆ ಅಕ್ಟೋಬರ್ ಹನ್ನೆರಡರಿಂದ ನವೆಂಬರ್ ಐದರವರೆಗೆ ನಡೆಯಲಿದ್ದು ಮತ್ತು ಮತಎಣಿಕೆ ನವೆಂಬರ್ ಎಂಟರಂದು ನಡೆಯಲಿದೆ.

ಸಿಎನ್ಎನ್ - ಐಬಿಎನ್, ಇಂಡಿಯಾ ಟಿವಿ - ಸಿವೋಟರ್ಸ್ ಮತ್ತು ಇಂಡಿಯಾ ಟುಡೆ - ಸಿಸಿರೋ ಚುನಾವಣಾಪೂರ್ವ ಫಲಿತಾಂಶವನ್ನು ಪ್ರಕಟಿಸಿದೆ. ಎನ್‌ಡಿಎ ಹಾಗೂ ನಿತೀಶ್‌ಕುಮಾರ್‌ ನೇತೃತ್ವದ ಮಹಾಮೈತ್ರಿ ಕೂಟದ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಮುನ್ಸೂಚನೆ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಮೂರು ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ವಿಭಿನ್ನ ಸಮೀಕ್ಷಾ ಫಲಿತಾಂಶ

ವಿಭಿನ್ನ ಸಮೀಕ್ಷಾ ಫಲಿತಾಂಶ

ಮೂರು ಸಮೀಕ್ಷೆಯ ಫಲಿತಾಂಶ ವಿಭಿನ್ನವಾಗಿದ್ದು, ಎನ್ಡಿಎ ಮತ್ತು ಮಹಾಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ಒಂದು ಸಮೀಕ್ಷೆ ಹೇಳಿದರೆ ಇನ್ನೆರಡು ಸಮೀಕ್ಷೆಗಳು ಎನ್ಡಿಎ ಮತ್ತು ಮಹಾಮೈತ್ರಿಕೂಟಕ್ಕೆ ಜಯ ಲಭಿಸುವ ಸಾಧ್ಯತೆಯಿದಿದೆ ಎಂದು ಹೇಳಿದೆ.

ಸಾಂಪ್ರದಾಯಿಕ ಮತಗಳು

ಸಾಂಪ್ರದಾಯಿಕ ಮತಗಳು

ಬಿಹಾರ ಚುನಾವಣಾ ಪ್ರಚಾರ ಕಣದಲ್ಲಿ ಎನ್‌ಡಿಎ ಮುಂದಿದ್ದರೂ ಸಾಂಪ್ರದಾಯಿಕ ಮತದಾರರು ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪರವಾಗಿರುವುದು ಸಮೀಕ್ಷೆಯ ಹೈಲೈಟ್ಸ್.

ಸಿಎನ್ಎನ್ - ಐಬಿಎನ್ ಸಮೀಕ್ಷೆ

ಸಿಎನ್ಎನ್ - ಐಬಿಎನ್ ಸಮೀಕ್ಷೆ

ಒಟ್ಟು ಸ್ಥಾನಗಳು : 243
ಬಹುಮತಕ್ಕೆ ಬೇಕಾಗಿರುವುದು : 122
ಎನ್ಡಿಎ ಮೈತ್ರಿಕೂಟ : 95
ಮಹಾಮೈತ್ರಿಕೂಟ : 137
ಇತರರು : 11

ಇಂಡಿಯಾ ಟಿವಿ - ಸಿವೋಟರ್ಸ್ ಸಮೀಕ್ಷೆ

ಇಂಡಿಯಾ ಟಿವಿ - ಸಿವೋಟರ್ಸ್ ಸಮೀಕ್ಷೆ

ಒಟ್ಟು ಸ್ಥಾನಗಳು : 243
ಬಹುಮತಕ್ಕೆ ಬೇಕಾಗಿರುವುದು : 122
ಎನ್ಡಿಎ ಮೈತ್ರಿಕೂಟ : 111-127
ಮಹಾಮೈತ್ರಿಕೂಟ : 108-124
ಇತರರು : 4-12

ಇಂಡಿಯಾ ಟುಡೆ - ಸಿಸಿರೋ ಸಮೀಕ್ಷೆ

ಇಂಡಿಯಾ ಟುಡೆ - ಸಿಸಿರೋ ಸಮೀಕ್ಷೆ

ಒಟ್ಟು ಸ್ಥಾನಗಳು : 243
ಬಹುಮತಕ್ಕೆ ಬೇಕಾಗಿರುವುದು : 122
ಎನ್ಡಿಎ ಮೈತ್ರಿಕೂಟ : 107-115
ಮಹಾಮೈತ್ರಿಕೂಟ : 117-127
ಇತರರು : 8-12

English summary
Bihar Assembly Election 2015: Three pre-poll surveys give mixed signals. Nitish will win, says one; neck and neck race predicts another.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X