Bihar Results: ಬಿಹಾರದಲ್ಲಿ ವಿರೋಧ ಪಕ್ಷಗಳು ಹೀನಾಯವಾಗಿ ಸೋಲಲು ಕಾರಣ ಏನು?
ಬಿಹಾರ ವಿಧಾನಸಭೆ ಚುನಾವಣೆ 2025 ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಈ ಚುನಾವಣೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಅಂದಹಾಗೆ ಈ ಚುನಾವಣೆಯಲ್ಲಿ ಗೆದ್ದು ಬೀಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಒಕ್ಕೂಟವು ಹೀನಾಯ ಸೋಲಿನ ಕಡೆಗೆ ಮುಖ ಮಾಡಿದೆ. ಮತ್ತೊಂದು ಕಡೆಯಲ್ಲಿ ಏನೆಲ್ಲಾ ಸರ್ಕಸ್ ಮಾಡಿ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನ ಮಾಡಿದರೂ ಅದು ಫಲ ನೀಡಲೇ ಇಲ್ಲ ವಿಪಕ್ಷಗಳಿಗೆ. ಹಾಗಾದರೆ ಬಿಹಾರದಲ್ಲಿ ವಿರೋಧ ಪಕ್ಷಗಳು ಹೀನಾಯವಾಗಿ ಸೋಲಲು ಕಾರಣ ಏನು?
ಬಿಹಾರ ವಿಧಾನಸಭೆ ಚುನಾವಣೆ 2025 ಫಲಿತಾಂಶ ಪ್ರಕಟಣೆ ಶುರುವಾಗಿದ್ದು, ಎನ್‌ಡಿಎ ಹಾಗೂ ಮಹಾಘಟ್ ಬಂಧನ್ ನಡುವೆ ಜಿದ್ದಾಜಿದ್ದಿ ಜೋರಾಗಿತ್ತು. ಬಿಹಾರ ವಿಧಾನಸಭೆ ಚುನಾವಣೆ 2025ರ ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಗೆಲುವು ಗ್ಯಾರಂಟಿ ಅಂತಾ ಹೇಳಿದ್ದರೂ, ಆರಂಭಿಕ ಹಂತದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಆದರೆ ಆ ನಂತರ ಅಂತಿಮವಾಗಿ ಬಿಹಾರ ವಿಧಾನಸಭೆ ಚುನಾವಣೆ 2025 ರಿಸಲ್ಟ್ ಪೂರ್ತಿ ಎನ್‌ಡಿಎ ಪರವಾಗಿಯೇ ತಿರುಗಿಬಿಟ್ಟಿದೆ. ಈ ಮೂಲಕ ಮತ್ತೊಮ್ಮೆ ದಾಖಲೆ ಬರೆಯಲು ಬಿಜೆಪಿ ಮತ್ತು ಜೆಡಿಯು ಸಜ್ಜಾಗಿವೆ. ಆದರೆ ಹೀಗೆ ಹೀನಾಯವಾಗಿ ವಿರೋಧ ಪಕ್ಷಗಳು ಸೋಲು ಕಂಡಿದ್ದು ಏಕೆ?

ಸಮೀಕ್ಷೆಗಳ ಮಾತು ನಿಜವಾಯ್ತು!
ಬಿಹಾರ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನ ಇದ್ದು, ಈ 243 ಸ್ಥಾನಗಳಿಗೆ 2 ಹಂತದಲ್ಲಿ ಮತದಾನ ನಡೆಸಲಾಗಿತ್ತು. 3-4 ತಿಂಗಳಿಂದ ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾರಿ ಆರೋಪ & ಪ್ರತ್ಯಾರೋಪ ಸೇರಿ ಮತದಾರರನ್ನ ಸೆಳೆಯುವ ತಂತ್ರಗಳೇ ಬಿಹಾರದಲ್ಲಿ ಸೌಂಡ್ ಮಾಡಿದ್ದವು. ಕೊನೆಗೆ ಅದಕ್ಕೆಲ್ಲ ತೆರೆಬಿದ್ದು ಮತದಾನ ಮುಕ್ತಾಯ ಆಗುತ್ತಿದ್ದಂತೆ ಹೊರ ಬಿದ್ದಿದ್ದ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದವು. ಇದೀಗ ಅದೇ ನಿಜವಾಗುತ್ತಿದ್ದು, ವಿಪಕ್ಷಗಳಿಗೆಲ್ಲಾ ದೊಡ್ಡ ಆಘಾತ ಎದುರಾಗುತ್ತಿದೆ.
ಸಿಎಂ ಸ್ಥಾನ ಯಾರಿಗೆ ಸಿಗಲಿದೆ?
ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಿಎಂ ಸ್ಥಾನವನ್ನು ತ್ಯಾಗ ಮಾಡುತ್ತಲೇ ಬಂದಿದೆ. ಬಿಜೆಪಿ ಪಾಲಿಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಕಿರಿಕ್ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಹಾಗೇ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ಅವರನ್ನು ಕೆಳಗೆ ಇಳಿಸುವ ಪ್ರಯತ್ನ ಆಗುತ್ತಾ? ಎಂಬ ಚರ್ಚೆ ಕೂಡ ಜೋರಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ಸರ್ಕಾರ ರಚನೆ ಮಾಡೋದಕ್ಕೆ ಎನ್‌ಡಿಎ ಮಿತ್ರ ಪಕ್ಷಗಳು ಸಜ್ಜಾಗಿವೆ. ಇದೆಲ್ಲವನ್ನೂ ಮೀರಿ ಬಿಹಾರ ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ದೊಡ್ಡ ಹೆಸರು ಮಾಡಿದೆ ಎನ್‌ಡಿಎ ಮೈತ್ರಿಕೂಟ.












Click it and Unblock the Notifications