Bihar Assembly Election 2025: ಯುವ ಮತದಾರರಿಗೆ ಪ್ರಧಾನಿ ಮೋದಿ ಕಿವಿಮಾತು
Bihar Assembly Election 2025: ಈಗಾಗಲೇ ಬಿಹಾರ ವಿಧಾನಸಭೆ ಚುನಾವಣೆ ಮೊದಲನೇ ಹಂತದ ಮತದಾನ ಮುಕ್ತಾಯವಾಗಿದೆ. ಇಂದು (ನವೆಂಬರ್ 11) ಎರಡನೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ಈ ಬಗ್ಗೆ ಯುವ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಿವಿ ಮಾತೊಂದನ್ನೂ ಹೇಳಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. 122 ಕ್ಷೇತ್ರಗಳ 45,399 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭ ಆಗಿದ್ದು, ಸಂಜೆ 5 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಕುರಿತು ಪ್ರಧಾನಿ ಮೋದಿ ಅವರು, "ಮತ ಚಲಾಯಿಸಿ, ಇತರರನ್ನು ಪ್ರೋತ್ಸಾಹಿಸಿ" ಎಂದು ತಮ್ಮ ಟ್ವಿಟ್ ಮೂಲಕ ಯುವ ಮತದಾರರಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಈಗಾಗಲೇ 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ರಾಜ್ಯವು ತನ್ನ ಇತಿಹಾಸದಲ್ಲಿ ಅತೀ ಹೆಚ್ಚು ಶೇಕಡಾ 65ಕ್ಕಿಂತ ಹೆಚ್ಚಿನ ಮತದಾನವನ್ನು ದಾಖಲಿಸಿದೆ. ಇನ್ನು ಇಂದು ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಆರಂಭವಾಗಿದೆ.
"ಎಲ್ಲಾ ಮತದಾರರು ಉತ್ಸಾಹದಿಂದ ಭಾಗವಹಿಸಿ ಹೊಸ ದಾಖಲೆ ನಿರ್ಮಿಸಲು ಸಹಾಯ ಮಾಡಬೇಕೆಂದು ನಾನು ಕೋರುತ್ತೇನೆ. ನಿಮ್ಮ ಮತ ಚಲಾಯಿಸಿ ಮತ್ತು ಇತರರನ್ನು ಪ್ರೇರೇಪಿಸಿ ಎಂದು," ಯುವಜನರಿಗೆ ಪ್ರಧಾನಿ ಮೋದಿ ಅವರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ 243 ವಿಧಾನಸಭಾ ಸ್ಥಾನಗಳ ಪೈಕಿ 122 ಸ್ಥಾನಗಳಲ್ಲಿ ಬಿಹಾರ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯುತ್ತಿದೆ. ಇನ್ನೂ ದೆಹಲಿಯ ಕೆಂಪು ಕೋಟೆಯಲ್ಲಿ ನಿನ್ನೆ ಸ್ಫೋಟ ಸಂಭವಿಸಿದ ಹಿನ್ನೆಲೆ ಬಿಹಾರದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಶಾಂತಿಯುತ ಮತದಾನದತ್ತ ಗಮನಹರಿಸಲಾಗಿದೆ.
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ 9 ಮಂದಿ ಜನರು ಸಾವನ್ನಪ್ಪಿದ್ದರೆ, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸಂಭವಿಸಿದ ಹಿನ್ನೆಲೆ ಸೋಮವಾರ ರಾತ್ರಿಯೇ ಬಿಹಾರ ಪೊಲೀಸರು ರಾಜ್ಯಾದ್ಯಂತ ಭದ್ರತಾ ಸಲಹೆಯನ್ನು ಹೊರಡಿಸಿದ್ದಾರೆ.
ಬಿಹಾರ ಉಪ ಮಹಾನಿರ್ದೇಶಕರು ಎಲ್ಲಾ ಹಿರಿಯ ಸೂಪರಿಂಟೆಂಡೆಂಟ್‌ಗಳು ಮತ್ತು ಪೊಲೀಸ್ ಸೂಪರಿಂಟೆಂಡೆಂಟ್‌ಗಳಿಗೆ ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಳ್ಳಲು ಮತ್ತು ಜಿಲ್ಲೆಗಳಲ್ಲಿ ಗಸ್ತು ತಿರುಗುವಂತೆ ಆದೇಶ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲ ಮತದಾನ ನಡೆಯುತ್ತಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿಲಾಗಿದೆ. ಇನ್ನೂ ಇಂದು ಕೊನೆಯ ಹಂತದ ಮತದಾನದ ನಂತರ, ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟ ಆಗಲಿವೆ. ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಇನ್ನೂ ಎಕ್ಸಿಟ್ ಪೋಲ್ ಸಂಜೆ 6:30ರ ಸುಮಾರಿಗೆ ಪ್ರಾರಂಭ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಇನ್ನೂ ಈ ಎಕ್ಸಿಟ್ ಪೋಲ್‌ಗಾಗಿಯೇ ಎಲ್ಲಾ ಪಕ್ಷಗಳ ನಾಯಕರು ಎದುರು ನೋಡುತ್ತಿದ್ದಾರೆ. ಇದೀಗ ಶಾಂತಿಯುವತವಾಗಿ ಮತದಾನ ನಡೆಯುತ್ತಿದೆ.












Click it and Unblock the Notifications