ಬಿಹಾರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ 12 ಜನ ನೀರು ಪಾಲು
ಬಿಹಾರ, ನವೆಂಬರ್ 5: ಬಿಹಾರದಲ್ಲಿ ನಡೆದ ಎರಡು ಪ್ರತ್ಯೇಕ ಜಲ ದುರಂತಗಳಲ್ಲಿ 12 ಜನರು ನೀರು ಪಾಲಾಗಿದ್ದಾರೆ.
ಗಂಗಾ ನದಿಗೆ ಬಿದ್ದು ವೈಶಾಲಿಯಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಪಿಕ್ ನಿಕ್ ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಇನ್ನು ಸಮಷ್ಠಿಪುರ ಜಿಲ್ಲೆಯ ಭಾಗಮತಿ ನದಿಯಲ್ಲಿ 12 ಜನರಿದ್ದ ದೋಣಿ ಮುಳುಗಿ 3 ಜನರು ಸಾವನ್ನಪ್ಪಿದ್ದಾರೆ.

ವೈಶಾಲಿ ನೋಡಲು ಬಂದಿದ್ದ ಪ್ರವಾಸಿಗರಲ್ಲಿ ಮಗುವೊಂದು ನೀರಿಗೆ ಬಿದ್ದಿತ್ತು. ಇದನ್ನು ಹಿಡಿಯಲು ಉಳಿದವರು ಧಾವಿಸಿದಾಗ ಅವರೂ ನೀರುಪಾಲಾಗಿದ್ದಾರೆ. 5 ಜನ ಮಹಿಳೆಯರು ಮತ್ತು ನಾಲ್ವರು ಪುರುಷರ ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದೆ.
ಈ ಘಟನೆಯಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು ಅವರೂ ನೀರು ಪಾಲಾಗಿರುವ ಸಾಧ್ಯತೆ ಹೆಚ್ಚಾಗಿದೆ. ಮೃತರಾದ ಕುಟುಂಬದವರಿಗೆ ರಾಜ್ಯ ಸರಕಾರ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಇನ್ನು ಭಾಗಮತಿ ನದಿಯಲ್ಲಿ 12 ಜನರಿದ್ದ ಸಣ್ಣ ದೋಣಿ ಮುಳುಗಿ ಮೂರು ಜನ ಸಾವನ್ನಪ್ಪಿದ್ದಾರೆ. ಇನ್ನುಳಿದವರನ್ನು ಸ್ಥಳೀಯರು ರಕ್ಷಿಸಿದ್ದಾರೆ.












Click it and Unblock the Notifications